![](https://kannadadunia.com/wp-content/uploads/2020/10/730bddd5f0cd19fd6de4f000e5c88a891d2f4fa8e1aea19e47b439353055b52f.jpg)
ತಮ್ಮ ಹಾಸ್ಯ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದಿರುವ ಕಾಮಿಡಿ ಕಲಾವಿದ ಚಿಕ್ಕಣ್ಣ, ಚಂದ್ರಮೋಹನ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದು ಇತ್ತೀಚೆಗಷ್ಟೆ ಈ ಸಿನಿಮಾದ ಟೈಟಲ್ ಕೂಡ ಬಿಡುಗಡೆ ಮಾಡಿದ್ದರು. ಇದಕ್ಕೆ ‘ಉಪಾಧ್ಯಕ್ಷ’ ಎಂಬ ಹೆಸರಿಟ್ಟಿದ್ದಾರೆ.
ಇದೀಗ ಚಿಕ್ಕಣ್ಣ ಹಾಗೂ ‘ಉಪಾಧ್ಯಕ್ಷ’ ಚಿತ್ರದ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಆದಿಚುಂಚನಗಿರಿಗೆ ಭೇಟಿ ನೀಡಿ ನಿರ್ಮಲಾನಂದ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದು, ಕೆಲ ಹೊತ್ತು ಅವರೊಂದಿಗೆ ಮಾತನಾಡಿದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. ಈ ಚಿತ್ರದ ನಾಯಕಿ ಯಾರೆಂದು ಇನ್ನೂ ಘೋಷಣೆ ಮಾಡಬೇಕಾಗಿದೆ.
![](https://kannadadunia.com/wp-content/uploads/2020/10/cdeef92f-e6b7-40e6-856d-d510901487ad.jpg)