ಸಂತೋಷ್ ಆನಂದ್ ರಾಮ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದ ‘ಪವರ್ ಆಫ್ ಯೂತ್’ ಎಂಬ ಪ್ರೋಮೋ ನಿನ್ನೆ ಹೊಂಬಾಳೆ ಫಿಲಂಸ್ ನ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದ್ದು, ಈ ಪ್ರೋಮೋ ಬಗ್ಗೆ ಪುನೀತ್ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆಗಳು ದೊರೆತಿವೆ.
ಪುನೀತ್ ರಾಜ್ ಕುಮಾರ್ ಅಭಿಮಾನಿಯೊಬ್ಬ ಪವರ್ ಆಫ್ ಯೂತ್ ಪ್ರೋಮೋ ನೋಡಿದ್ರ ಎಂದು ನವರಸ ನಾಯಕ ಜಗ್ಗೇಶ್ ಅವರಿಗೆ ಟ್ವಿಟ್ಟರ್ ನಲ್ಲಿ ಕೇಳಿದ್ದಾನೆ ಇದಕ್ಕೆ ಜಗ್ಗೇಶ್ ಈ ರೀತಿಯಾಗಿ ಉತ್ತರ ನೀಡಿದ್ದಾರೆ.
ಆತ ಸಿಂಹದ ಮರಿ ಏನು ಮಾಡಿದರು ವಿಶ್ವ ಕನ್ನಡಿಗರು ಅಪ್ಪಿ ಮುದ್ದಾಡುತ್ತಾರೆ…!ಶಬ್ದ ಮಾಡದೆ ಹೆಜ್ಜೆ ಹಾಕುವ ನಾಡದೇವಿ ಹೊರುವ ಅರ್ಜುನನಂತ ಆನೆ…!ನನ್ನ ಯಜಮಾನನ ಮುದ್ದಿನ ಮಗ..!ಜೊತೆಗೆ ನನ್ನ ಹೆಮ್ಮೆಯ ಹುಡುಗ ನಿರ್ದೇಶಕ ಸಂತೋಷ್ ಆನಂದರಾಮನ combo!ಅವ ಮುಟ್ಟಿದ್ದೆಲ್ಲ ಚಿನ್ನ!godbless) ಎಂದು ಬರೆದುಕೊಂಡಿದ್ದಾರೆ.