ಕೊರೊನಾ ಗೆದ್ದ ನಂತರ ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ತಮ್ಮ ಕೆಲಸಕ್ಕೆ ಮರಳಿದ್ದಾರೆ. ಅಮಿತಾಬ್ ಬಚ್ಚನ್ ಕೆಬಿಸಿಯ ಚಿತ್ರೀಕರಣ ಪ್ರಾರಂಭಿಸಿದ್ದಾರೆ. ಈ ಮಧ್ಯೆ ಬಚ್ಚನ್ ಕುಟುಂಬಕ್ಕೆ ಮತ್ತೊಂದು ಕಾರು ಬಂದಿದೆ. ಮಾಹಿತಿಯ ಪ್ರಕಾರ, ಬಿಗ್ ಬಿ ಎಸ್ ಕ್ಲಾಸ್ ಮರ್ಸಿಡಿಸ್ ಬೆಂಜ್ ಖರೀದಿಸಿದ್ದಾರೆ.
ಈ ಕಾರನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿ ಪ್ರಕಾರ,ಈ ಕಾರಿನ ಬೆಲೆ 1 ಕೋಟಿ 38 ಲಕ್ಷ ರೂಪಾಯಿ ಎನ್ನಲಾಗಿದೆ. ಕಾರನ್ನು ಅಮಿತಾಬ್ ಬಚ್ಚನ್ ಹೆಸರಿನಲ್ಲಿ ನೋಂದಾಯಿಸಲಾಗಿದೆ.
ಅಮಿತಾಬ್ ಬಚ್ಚನ್ ಕಾರಿನ ಸಂಖ್ಯೆ ಕೂಡ ವಿಶೇಷವಾಗಿದೆ. ಕಾರಿನ ಸಂಖ್ಯೆ MH02FJ4041. ಇದನ್ನು ಸೇರಿಸಿದ್ರೆ ಸಂಖ್ಯೆ 11 ಆಗುತ್ತದೆ. ಇದು ಬಚ್ಚನ್ ಲಕ್ಕಿ ನಂಬರ್. ಅವರ ಜನ್ಮದಿನ ಅಕ್ಟೋಬರ್ 11.ಅಮಿತಾಬ್ ಬಚ್ಚನ್ ಮನೆಯಲ್ಲಿ ಸಾಕಷ್ಟು ಕಾರಿದೆ. ಈಗ ಹೊಸ ಕಾರು ಸೇರ್ಪಡೆಯಾಗಿದೆ.
