![](https://kannadadunia.com/wp-content/uploads/2020/11/b3dd942f-03ed-4c70-a3d1-c1a7475fd557.jpg)
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಆ್ಯಕ್ಟಿವ್ ಆಗಿರುವ ಮಾಜಿ ಸಂಸದೆ ಹಾಗೂ ಚಿತ್ರ ನಟಿ ರಮ್ಯಾ, ತಾವು ನಟಿಸಿದ ಮೊದಲನೇ ಸಿನಿಮಾ ‘ಅಭಿ’ ಚಿತ್ರದ ಸಮಯದಲ್ಲಿ ತೆಗೆಸಿದ ಫೋಟೋವೊಂದನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರೊಂದಿಗೆ ನಾನು ನಟಿಸಿದ ಮೊದಲನೇ ಸಿನಿಮಾ ‘ಅಭಿ’ ಚಿತ್ರದ ಸೆಟ್ ನಲ್ಲಿ ಮಾಡಿಸಿದ ಫೋಟೋಶೂಟ್ ಎಂದು ಬರೆದುಕೊಂಡಿದ್ದು ಇದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
![](https://kannadadunia.com/wp-content/uploads/2020/11/bd27a5ce-68c1-403c-95dc-163584f81689-1.jpg)