ಬಾಲಿವುಡ್ ಹಿರಿಯ ನಟಿ ರವೀನಾ ಟಂಡನ್ ಹಾಗೂ ನಟ ಅಕ್ಷಯ್ ಕುಮಾರ್ ಮದುವೆಯಾಗಬೇಕಿತ್ತು. ಮೂರು ವರ್ಷಗಳಿಂದ ಅಕ್ಷಯ್ ಮಾಡ್ತಿದ್ದ ಮೋಸವನ್ನು ನೋಡಿಯೂ ರವೀನಾ ಅಕ್ಷಯ್ ಜೊತೆ ಮದುವೆಯಾಗಲು ಮುಂದಾಗಿದ್ದರಂತೆ. ಆದ್ರೆ ಕೊನೆಯಲ್ಲಿ ಸಂಬಂಧ ಮುರಿದುಕೊಂಡರಂತೆ.
ಹಿಂದಿನ ಸಂದರ್ಶನವೊಂದರಲ್ಲಿ ರವೀನಾ ಈ ವಿಷ್ಯವನ್ನು ಹೇಳಿದ್ದರು. 1994ರಲ್ಲಿ ʼಮೋಹರಾʼ ಚಿತ್ರದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಚಿತ್ರದಲ್ಲಿ ಇಬ್ಬರ ಕೆಮೆಸ್ಟ್ರಿ ಚೆನ್ನಾಗಿತ್ತು. ಇದಾದ ನಂತ್ರ ಇಬ್ಬರು ಹತ್ತಿರವಾಗಿದ್ದರಂತೆ. ಸ್ವತಃ ರವೀನಾ ಟಂಡನ್, ಅಕ್ಷಯ್ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದರಂತೆ. ಇಬ್ಬರು ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರಂತೆ.
ಅಕ್ಷಯ್ ಕುಮಾರ್, ಮದುವೆ ನಂತ್ರ ರವೀನಾ ನಟಿಸಬಾರದೆಂಬ ಷರತ್ತು ವಿಧಿಸಿದ್ದರಂತೆ. ಇದು ರವೀನಾಗೆ ಇಷ್ಟವಾಗಲಿಲ್ಲವಂತೆ. ಇಷ್ಟೆ ಅಲ್ಲದೆ ಅಕ್ಷಯ್ ಒಂದೇ ಸಮಯದಲ್ಲಿ ಶಿಲ್ಪಾ ಶೆಟ್ಟಿ, ಟ್ವಿಂಕಲ್ ಖನ್ನಾ ಹಾಗೂ ರವೀನಾ ಮೂವರ ಜೊತೆಯೂ ಡೇಟಿಂಗ್ ಮಾಡ್ತಿದ್ದರಂತೆ. ಇದು ರವೀನಾಗೆ ಗೊತ್ತಾಗ್ತಿದ್ದಂತೆ ಮದುವೆ ಮುರಿದುಕೊಂಡರಂತೆ.