ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆ ನಡೆಸಿದ ಬೆನ್ನಲ್ಲೇ ಇದೀಗ ನಿರೂಪಕಿ ಅನುಶ್ರೀ, ಫೇಸ್ ಬುಕ್ ನಲ್ಲಿ ವಿಡಿಯೋ ಒಂದನ್ನು ಅಪ್ ಲೋಡ್ ಮಾಡಿದ್ದು, ಕಣ್ಣೀರಿಟ್ಟಿದ್ದಾರೆ.
ಸೆ.24,2020 ನನ್ನ ಜೀವನದ ಯಾವ ಘಟ್ಟದಲ್ಲೂ ಮತ್ತೆ ನೆನೆಪಿಸಿಕೊಳ್ಳಲು ಇಷ್ಟಪಡದ ದಿನ. 12 ವರ್ಷಗಳ ಹಿಂದೆ ಡಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ನಾನು ಗೆದ್ದಿದ್ದೆ. ಆ ಗೆಲುವು ಇಷ್ಟು ವರ್ಷಗಳ ಬಳಿಕ ಈಗ ಮುಳುವಾಗಿ ಕಾಡುತ್ತೆ ಎಂದುಕೊಂಡಿರಲಿಲ್ಲ. ನನ್ನನ್ನು ಸಮರ್ಥಿಸಿಕೊಳ್ಳಲು ಈ ವಿಡಿಯೋ ಮಾಡುತ್ತಿಲ್ಲ. ಸಿಸಿಬಿ ನನಗೆ ನೊಟೀಸ್ ನೀಡಿದ್ದಕ್ಕೆ ನನಗೆ ಬೇಜಾರಿಲ್ಲ. ಸಿಸಿಬಿ ವಿಚಾರಣೆಗೆ ನಾನು ಹಾಜರಾದ ಮಾತ್ರಕ್ಕೆ ನಾನು ಆರೋಪಿ ಅಥವಾ ಅಪರಾಧಿ ಎಂದಲ್ಲ. ಆದರೆ ಡ್ರಗ್ಸ್ ಪ್ರಕರಣ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ನನಗೆ ತುಂಬಾ ನೋವು ಕೊಡುತ್ತಿದೆ. ಕಳೆದ ಒಂದು ವಾರದಿಂದ ನನ್ನ ಕುಟುಂಬ ತುಂಬಾ ದು:ಖದಲ್ಲಿದೆ ಎಂದು ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟಿದ್ದಾರೆ.
ಈ ಕಷ್ಟಕರವಾದ ಸಮದಲ್ಲೂ ಅನುಶ್ರೀ, ನೀವೇನೆಂದು ನಮಗೆ ಚೆನ್ನಾಗಿ ಗೊತ್ತು. ನಿಮ್ಮ ಮೇಲೆ ಅಪಾರವಾದ ನಂಬಿಕೆ ನಮಗಿದೆ ಎಂದು ನನ್ನ ಬೆನ್ನಿಗೆ ನಿಂತಿರುವ ಎಲ್ಲಾ ಕನ್ನಡಿಗರಿಗೆ ನನ್ನ ಧನ್ಯವಾದಗಳು ಎಂದು ಹೇಳಿದ್ದಾರೆ.