
ಟಿವಿಯ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ 14 ನೇ ಸರಣಿ ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಪ್ರೇಕ್ಷಕರು ಈ ಕಾರ್ಯಕ್ರಮದ ಬಗ್ಗೆ ಉತ್ಸುಕರಾಗಿದ್ದಾರೆ. ಬಿಗ್ ಬಾಸ್ ಮನೆಗೆ ಯಾರು ಹೋಗ್ತಿದ್ದಾರೆಂಬ ಕುತೂಹಲವೂ ಮನೆ ಮಾಡಿದೆ. ಬಿಗ್ ಬಾಸ್ ಶೋ ದಿನಾಂಕ ಹತ್ತಿರವಾಗ್ತಿದ್ದಂತೆ ಒಂದೊಂದೇ ಸ್ಪರ್ಧಿಗಳ ಹೆಸರು ಕೇಳಿ ಬರ್ತಿದೆ. ಈಗ ಬಿಗ್ ಬಾಸ್ 14 ನ ಹೊಸ ಪ್ರೋಮೋ ಹೊರಗೆ ಬಂದಿದೆ. ಇದ್ರಲ್ಲಿ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿದ್ದ ರಾಧೆ ಮಾ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಕಲರ್ಸ್ ಚಾನೆಲ್‌ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ರಾಧೆ ಮಾ ಬಿಗ್ ಬಾಸ್ 14 ಮನೆಗೆ ಎಂಟ್ರಿಯಾಗಿರುವ ವಿಡಿಯೋದಲ್ಲಿ ರಾಧೆ ಮಾ ಕೆಂಪು ಡ್ರೆಸ್ ಧರಿಸಿದ್ದು, ತ್ರಿಶೂಲ ಹಿಡಿದಿದ್ದಾರೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಅಭಿಮಾನಿಗಳು ಕಮೆಂಟ್ ಶುರು ಮಾಡಿದ್ದಾರೆ.
ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ದೋರಂಗಲ ಗ್ರಾಮದಲ್ಲಿ ಸುಖ್ವಿಂದರ್ ಕೌರ್ ಆಗಿ ಜನಿಸಿದ ರಾಧೆ ಮಾ ಕೆಲವು ವಿವಾದಗಳಿಗೆ ಕಾರಣರಾಗಿದ್ದರು. ರಾಧೆ ಮಾ ಒಮ್ಮೆ ಕೆಂಪು ಮಿನಿ ಸ್ಕರ್ಟ್, ಅದಕ್ಕೆ ತಕ್ಕ ಬೂಟ್ ಮತ್ತು ಟೋಪಿ ಧರಿಸಿದ್ದ ಫೋಟೋ ವೈರಲ್ ಆಗಿತ್ತು. ಈ ಫೋಟೋ ಕಾಡ್ಗಿಚ್ಚಿನಂತೆ ಅಂತರ್ಜಾಲದಲ್ಲಿ ಹರಡಿತ್ತು. ಇವರು ಯಾರು ಗೆಸ್ ಮಾಡಿ ಎಂದು ರಾಹುಲ್ ಮಹಾಜನ್ ಹೇಳಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ರಾಧೆ ಮಾ, ನನಗೆ ಆ ಬಟ್ಟೆಗಳನ್ನು ನೀಡಿದ್ದರು. ನನಗೆ ಧರಿಸುವಂತೆ ಹೇಳಿದ್ರು. ಆ ಬಟ್ಟೆಗಳಲ್ಲಿ ಯಾವುದೇ ತಪ್ಪಿಲ್ಲ. ಅದು ಅಶ್ಲೀಲವಾಗಿಲ್ಲ. ನನಗೆ ಈ ಬಟ್ಟೆ ಧರಿಸಲು ಮುಜುಗರವಾಗಿಲ್ಲ ಎಂದಿದ್ದರು.
ರಾಧೆ ಮಾ ಆಗುವ ಮೊದಲು, ಸುಖ್ವಿಂದರ್ ಕೌರ್ ಇಬ್ಬರು ಮಕ್ಕಳ ತಾಯಿಯಾಗಿದ್ದರು. ಮಿಠಾಯಿ ಅಂಗಡಿ ಮಾಲೀಕರಾದ ಪತಿಗೆ ಸಹಾಯ ಮಾಡಲು ಟೈಲರಿಂಗ್ ಕೆಲಸ ಮಾಡ್ತಿದ್ದರು. ಅವರು ಪರಮಹನ್ಸ್ ಡೇರಾದಲ್ಲಿ ತೊಡಗಿಸಿಕೊಂಡರು ಮತ್ತು ಪ್ರವಚನಗಳಿಗಾಗಿ ಸಾಕಷ್ಟು ಸ್ಥಳಗಳಿಗೆ ಪ್ರಯಾಣಿಸಿದರು. ಕೆಲವು ವರ್ಷಗಳ ನಂತರ ಅವರು ಮುಂಬೈಗೆ ವಾಪಸ್ ಆಗಿ ತಮ್ಮ ಬೆಂಬಲಿಗರ ಸಂಖ್ಯೆ ಹೆಚ್ಚಿಸಿದ್ದರು.
ಅವರ ಬಳಿ ಅಲೌಕಿಕ ಶಕ್ತಿಗಳಿವೆ ಎಂದು ಕೆಲವು ಭಕ್ತರು ನಂಬುತ್ತಾರೆ. ಆದರೆ ರಾಧೆ ಮಾ ಪವಾಡಗಳನ್ನು ಮಾಡಬಲ್ಲೆ ಎಂದು ಎಂದಿಗೂ ಹೇಳಿಕೊಂಡಿಲ್ಲ.


https://www.instagram.com/p/CFuGlcUAWlX/?utm_source=ig_embed&utm_campaign=embed_video_watch_again