ಕೊರೊನಾ ಮಹಾಮಾರಿಯ ಕರಿನೆರಳು ಎಲ್ಲಾ ವಲಯದ ಮೇಲೂ ಬಿದ್ದಿದೆ. ಅದರಲ್ಲಿಯೂ ಸಿನಿಮಾ ರಂಗಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಬಹುತೇಕ ಉದ್ಯಮಗಳು ಈಗಾಗಲೇ ಮರು ಪ್ರಾರಂಭವಾದರೂ ಸಿನಿಮಾ ಥಿಯೇಟರ್‌ಗಳು ಮಾತ್ರ ಓಪನ್ ಆಗಿಲ್ಲ. ಇತ್ತ ಚಿತ್ರೀಕರಣಕ್ಕೆ ಅವಕಾಶ ನೀಡಿದರೂ ಕೆಲವೊಂದು ಕಾರ್ಯಕ್ರಮಗಳ ಚಿತ್ರೀಕರಣ ನಡೆಸಲು ಯೋಚನೆ ಮಾಡಬೇಕಾದ ಪರಿಸ್ಥಿತಿ ಇದೆ.
ಈ ಬೆನ್ನಲ್ಲೇ ಇದೀಗ ಬಿಗ್ ಬಾಸ್ ನಡೆಯುತ್ತಾ ಎಂಬ ಅನುಮಾನ ಪ್ರಾರಂಭವಾಗಿದೆ. ಈಗಾಗಲೇ ಯಶಸ್ವಿ 7 ಸೀಜನ್ ಮುಗಿಸಿರುವ ಬಿಗ್ ಬಾಗ್ ಎಂಟನೇ ಆವೃತ್ತಿ ಪ್ರಾರಂಭ ಮಾಡಬೇಕಿತ್ತು. ಆದರೆ ಕೊರೊನಾದಿಂದಾಗಿ ಈ ರಿಯಾಲಿಟಿ ಶೋ ಈ ವರ್ಷ ನಡೆಯುತ್ತಾ ಇಲ್ವಾ ಎಂಬ ಅನುಮಾನ ಎಲ್ಲರಲ್ಲಿಯೂ ಇದೆ.
ಇನ್ನು ಮೂಲಗಳ ಪ್ರಕಾರ ಡಿಸೆಂಬರ್ ನಲ್ಲಿ ಬಿಗ್‌ಬಾಸ್ ಪ್ರಾರಂಭ ಮಾಡುತ್ತಾರೆ ಎನ್ನಲಾಗಿದ್ದರೂ ಅಧಿಕೃತ ಹೇಳಿಕೆಯನ್ನು ವಾಹಿನಿಯವರು ನೀಡಿಲ್ಲ. ಆದರೆ ಸುದೀಪ್ ಕಾಯಕ್ರಮ ಆಯೋಜಕರ ಸಂಪರ್ಕದಲ್ಲಿ ಇದ್ದಾರೆ ಎನ್ನಲಾಗಿದೆ. ಅದೇನೆ ಇರಲಿ ಬಿಗ್‌ಬಾಸ್ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ಅಭಿಮಾನಿಗಳು ಕಾತುರರಾಗಿದ್ದಾರೆ.