HomeKarnatakaBIG NEWS : 'ಚಲನಚಿತ್ರ ನಿರ್ದೇಶಕರ ಸಂಘ'ದ ನೂತನ ಅಧ್ಯಕ್ಷರಾಗಿ ಎನ್ನಾರ್ ಕೆ. ವಿಶ್ವನಾಥ್ ಆಯ್ಕೆ

BIG NEWS : ‘ಚಲನಚಿತ್ರ ನಿರ್ದೇಶಕರ ಸಂಘ’ದ ನೂತನ ಅಧ್ಯಕ್ಷರಾಗಿ ಎನ್ನಾರ್ ಕೆ. ವಿಶ್ವನಾಥ್ ಆಯ್ಕೆ

ಬೆಂಗಳೂರು : ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ಎನ್ನಾರ್ ಕೆ. ವಿಶ್ವನಾಥ್( NRK Vishwanath)  ಆಯ್ಕೆಯಾಗಿದ್ದಾರೆ.

ಕಳೆದ ಸೆಪ್ಟೆಂಬರ್ ನಲ್ಲಿ ಸಂಘದ ಚುನಾವಣೆ ನಡೆದಿದ್ದು, ಎನ್ ಆರ್ ನಂಜುಂಡೇಗೌಡರು ಸಂಘದ ಅಧ್ಯಕ್ಷರಾಗಿದ್ದರು. ಆದರೆ ನಿರ್ದೇಶಕರ ಸಂಘದಲ್ಲಿನ ಗೊಂದಲಗಳಿಂದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಎನ್.ಆರ್. ನಂಜುಂಡೇಗೌಡ ರಾಜೀನಾಮೆ ನೀಡಿದ್ದರು . ನಂತರ ಅಧ್ಯಕ್ಷ ಸ್ಥಾನ ಖಾಲಿಯಿತ್ತು.

ನಂತರ ಹೊಸ ಸಮಿತಿ ರಚನೆಯಾಗಿದ್ದು, ಚುನಾವಣೆಯಲ್ಲಿ ಅಧಿಕರ ಮತಗಳಿಂದ ವಿಜೇತರಾಗಿದ್ದ ವಿಶ್ವನಾಥ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ನಾಗೇಂದ್ರ ಅರಸ್ ಮತ್ತು ಜಗದೀಶ್ ಕೊಪ್ಪ ಕಾರ್ಯದರ್ಶಿಯಾಗಿ ವಿಶಾಲ್ ಧೀರಜ್ , ಮಳವಳ್ಳಿ ಸಾಯಿಕೃಷ್ಣ ಜಂಟಿ ಕಾರ್ಯದರ್ಶಿಯಾಗಿ ಸಮಿತಿಯಲ್ಲಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular