HomeLatest NewsBREAKING: ಮೇಲಧಿಕಾರಿಗಳ ಕಿರುಕುಳ: ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಸಹಾಯಕ ಇಂಜಿನಿಯರ್ ಆತ್ಮಹತ್ಯೆ ಯತ್ನ

BREAKING: ಮೇಲಧಿಕಾರಿಗಳ ಕಿರುಕುಳ: ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಸಹಾಯಕ ಇಂಜಿನಿಯರ್ ಆತ್ಮಹತ್ಯೆ ಯತ್ನ

ಕೊಪ್ಪಳ: ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಸಹಾಯಕ ಇಂಜಿನಿಯರ್ ಓರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೊಪ್ಪಳದ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ನಡೆದಿದೆ.

ಕೊಪ್ಪಳ ತಾಲೂಕಿನ ಗಣಿಗೇರಾ ಬಳಿಯಿರುವ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಬಸವರಾಜ್ ಅಡಗಿ ಎಂಬ ಸಹಾಯಕ ಇಂಜಿನಿಯರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಿನ್ನೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಮಷಿನ್ ಸಮಸ್ಯೆಯಾಗಿತ್ತು. ಬಸವರಾಜ್ ಕೆಲಸ ಮಾಡುವ ವೇಳೆಯೇ ಈ ಘಟನೆ ನಡೆದಿತ್ತು.

ಮಷಿನ್ ಕೆಟ್ಟಿದ್ದಕ್ಕೆ ಮೇಲಧಿಕಾರಿಗಳು ಬಸವರಾಜ್ ನನ್ನು ಬೈದಿದ್ದರು. ನೀನು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಬೈದಿದ್ದರು. ಇದರಿಂದ ಅವಮಾನಗೊಂಡು ನೊಂದಿದ್ದ ಬಸವರಾಜ್ ಕೆಮಿಕಲ್ ಸೇವಿಸಿ ಕಾರ್ಖಾನೆಯಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular