HomeLatest NewsBREAKING: ವಿದ್ಯುತ್ ಕಂಬ ದುರಸ್ತಿ ವೇಳೆ ದುರಂತ: ಕರೆಂಟ್ ಶಾಕ್ ಹೊಡೆದು ಲೈನ್ ಮ್ಯಾನ್ ಸಾವು

BREAKING: ವಿದ್ಯುತ್ ಕಂಬ ದುರಸ್ತಿ ವೇಳೆ ದುರಂತ: ಕರೆಂಟ್ ಶಾಕ್ ಹೊಡೆದು ಲೈನ್ ಮ್ಯಾನ್ ಸಾವು

ದೇವನಹಳ್ಳಿ: ವಿದ್ಯುತ್ ಕಂಬ ದುರಸ್ತಿ ಮಾಡುವಾಗ ಕರೆಂಟ್ ಶಾಕ್ ಹೊಡೆದು ಲೈನ್ ಮ್ಯಾನ್ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿ ನಡೆದಿದೆ.

ಬೆಸ್ಕಾಂ ಉಪ ವಿಭಾಗಾಧಿಕಾರಿಗಳ ನಿರ್ಲಕ್ಷ್ಯಕ್ಕೆ ಲೈನ್ ಮ್ಯಾನ್ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಯರಾಮ್ ಮೃತ ಲೈನ್ ಮ್ಯಾನ್. ದೇವನಹಳ್ಳಿ ತಾಲೂಕಿನ ಬೆಟ್ಟಕೋಟೆಯಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಸ್ಕಾಂ ಉಪ ಅಧಿಕಾರಿಗಳು ಜೈಯರಾಮ್ ಗೆ ಲೈಟ್ ಕಂಬ ದುರಸ್ತಿ ಮಾಡಲು ಸೂಚಿಸಿದ್ದರು. ಅದರಂತೆ ವಿದ್ಯುತ್ ಕಂಬ ಹತ್ತಿ ದುರಸ್ತಿ ಮಾಡುತ್ತಿದ್ದಾಗ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ಜಯರಾಮ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular