HomeLatest NewsBREAKING: ಪ್ರವಾಸಿಗರ ಗಮನಕ್ಕೆ: ಮಂಗಳೂರಿನ ಈ ಬೀಚ್ ಗಳಿಗೆ ನಿರ್ಬಂಧ!

BREAKING: ಪ್ರವಾಸಿಗರ ಗಮನಕ್ಕೆ: ಮಂಗಳೂರಿನ ಈ ಬೀಚ್ ಗಳಿಗೆ ನಿರ್ಬಂಧ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದ್ದರೂ, ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ವರುಣಾರ್ಭಟ ಬೆನ್ನಲ್ಲೇ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವಾರಣ ನಿರ್ಮಾಣವಾಗಿದ್ದು, ಆಳೆತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ, ಮೀನುಗಾರರಿಗೆ ಸಮುದ್ರ ತೀರಕ್ಕೆ ನಿಷೇಧಿಸಲಾಗಿದೆ.

ಭಾರಿ ಮಳೆ, ಕಡಲಾಕ್ರೋಶ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬೀಚ್ ಗಳಿಗೂ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಬೀಚ್ ಬಳಿ ಪ್ರವಾಸೋದ್ಯಮ ಇಲಾಖೆ ಸೂಚನಾ ಫಲಕವನ್ನು ಅಳವಡಿಸಿದ್ದು, ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ.

ತಣ್ಣೀರಬಾವಿ, ಪಣಂಬೂರು, ಸೋಮೇಶ್ವರ ಸೇರಿದಂತೆ ಮಂಗಳೂರಿನ ಎಲ್ಲಾ ಬೀಚ್ ಗಳಲ್ಲಿಯೂ ಪ್ರವಾಸಿಗರು, ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ. ಕಡಲುದ್ದಕ್ಕೂ ಹಗ್ಗದ ತಡೆಗೋಡೆ ನಿರ್ಮಿಸಲಾಗಿದೆ. ಅಲ್ಲದೇ ಕಡಲಿಗೆ ಯಾರೂ ಇಳಿಯದಂತೆ ನೋಡಿಕೊಳ್ಳಲು ಲೈಫ್ ಗಾರ್ಡ್ ಗಳನ್ನು ನೇಮಕ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ. ಮುಂದಿನ 60 ದಿನಗಳ ಕಾಲ ಮೀನುಗಾರಿಕೆಗೆ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular