ಹಾಸನ: ಹಾಸನ ನಗರದ ವಲ್ಲಭಭಾಯ್ ರಸ್ತೆಯಲ್ಲಿ ನೀರು ತುಂಬಿದ ಬಕೆಟ್ ನಲ್ಲಿ ಬಿದ್ದು ಎಂಟು ತಿಂಗಳ ಮಗು ಸಾವನ್ನಪ್ಪಿದೆ.
ಪುಷ್ಪಲೋಚನ ಮೃತಪಟ್ಟ ಮಗು ಎಂದು ಗುರುತಿಸಲಾಗಿದೆ. ಗಿರೀಶ್ ಮತ್ತು ಚೈತ್ರಾ ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಮೂರನೇ ಪುತ್ರಿಯಾಗಿದ್ದ ಪುಷ್ಪ ತೆವಳುತ್ತ ಬಂದು ನೀರು ತುಂಬಿದ ಬಕೆಟ್ ನಲ್ಲಿ ಬಿದ್ದು ಮೃತಪಟ್ಟಿದ್ದಾಳೆ.
ಗಿರೀಶ್ ಚಿನ್ನ, ಬೆಳ್ಳಿ ಕೆಲಸ ಮಾಡುತ್ತಿದ್ದು, ಚೈತ್ರಾ ಬಕೆಟ್ ನಲ್ಲಿ ಬಟ್ಟೆ ನೆನೆಯಲು ಹಾಕಿ ಸ್ನಾನಕ್ಕೆ ತೆರಳಿದ್ದ ವೇಳೆ ತೆವಳುತ್ತಾ ಬಂದ ಕಂದಮ್ಮ ಬಕೆಟ್ ಗೆ ಬಿದ್ದು ಮೃತಪಟ್ಟಿದೆ ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

