ಭಾರತದ ಮಹಾ ಪೌರಾಣಿಕ ಕಥೆಗಳಲ್ಲಿ ಒಂದಾದ ರಾಮಾಯಣವನ್ನು ಈಗಾಗಲೇ ಹಲವಾರು ಚಿತ್ರಗಳಲ್ಲಿ ಹಾಗೂ ಧಾರಾವಾಹಿಗಳ ಮೂಲಕ ತೆರೆ ಮೇಲೆ ತರಲಾಗಿದ್ದು, ಬಹುತೇಕ ಪ್ರಯತ್ನಗಳು ಯಶಸ್ವಿಯಾದರೆ, ಕೆಲ ಪ್ರಯತ್ನಗಳು ಭಾರೀ ಟೀಕೆಗೆ ಒಳಗಾಗಿವೆ.
ಇನ್ನು ಸದ್ಯ ಬಾಲಿವುಡ್‌ನ ನಿರ್ದೇಶಕ ನಿತೇಶ್ ತಿವಾರಿ ಮತ್ತೊಮ್ಮೆ ರಾಮಾಯಣದ ವೈಭವವನ್ನು ಬೆಳ್ಳಿ ತೆರೆಯ ಮೇಲೆ ತರಲು ಮುಂದಾಗಿದ್ದು, ಇಂದು ಈ ಚಿತ್ರ ಸರಣಿಯ ಮೊದಲ ಭಾಗದ ಟ್ರೈಲರ್ ಬಿಡುಗಡೆಯಾಗಿದೆ.
ಟ್ರೈಲರ್ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದು, ಹುಟ್ಟುಹಾಕಿದ್ದ ಹೈಪ್ ತುಸು ತಗ್ಗಿದೇ ಎಂದೇ ಹೇಳಬಹುದು. ಅದರಲ್ಲೂ ಚಿತ್ರದಲ್ಲಿನ ವಿಎಫ್‌ಎಕ್ಸ್ ಭಾರೀ ಟ್ರೋಲ್‌ಗೆ ಒಳಗಾಗಿದ್ದರೆ, ಪಾತ್ರಗಳ ವಸ್ತ್ರವಿನ್ಯಾಸ, ಮೇಕಪ್ ಈಗಿನ ಕಾಲದ ಹಾಗಿದೆ ಎಂದು ಟೀಕೆಗಳು ಎದುರಾಗುತ್ತಿವೆ.
ಇನ್ನು ಪಾತ್ರಗಳ ಆಯ್ಕೆ ಬಗ್ಗೆ ಸಹ ನೆಟ್ಟಿಗರು ಕೊಂಕು ನುಡಿದಿದ್ದು, ಹೆಚ್ಚಾಗಿ ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಆಯ್ಕೆ ಮಾಡಿದ್ದು ಕೆಟ್ಟ ನಿರ್ಧಾರ ಎಂದು ಹಲವಾರು ಪೋಸ್ಟ್‌ಗಳು ಹರಿದಾಡಿವೆ.
ಹಲವಾರು ಮಂದಿ ಶೂರ್ಪನಖಿ ಪಾತ್ರ ನಿರ್ವಹಿಸಿರುವ ರಾಕುಲ್ ಪ್ರೀತ್ ಸಿಂಗ್ ಲುಕ್‌ಗೆ ಸಾಯಿ ಪಲ್ಲವಿ ಲುಕ್ ಹೋಲಿಕೆ ಮಾಡಿ ಪೋಸ್ಟ್ ಹಂಚಿಕೊಂಡಿದ್ದು, ಇದೇ ಮೊದಲ ಬಾರಿಗೆ ಸೀತೆಯ ಪಾತ್ರಧಾರಿಗಿಂತ ಶೂರ್ಪನಖಿ ಪಾತ್ರಧಾರಿ ಚೆನ್ನಾಗಿ ಕಾಣಿಸುತ್ತಿರುವುದು, ಅಷ್ಟರಮಟ್ಟಿಗೆ ಕೆಟ್ಟ ಆಯ್ಕೆ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಅಲ್ಲದೇ ಈವರೆಗೆ ಬಂದಿರುವ ಎಲ್ಲ ರಾಮಾಯಣ ಧಾರಾವಾಹಿಗಳು ಹಾಗೂ ಸಿನಿಮಾಗಳಲ್ಲಿನ ಸೀತೆ ಪಾತ್ರಧಾರಿಗಳ ಜತೆ ಸಾಯಿ ಪಲ್ಲವಿಯನ್ನು ಹೋಲಿಸಿ ಮನರಂಜನೆ ಇತಿಹಾಸದಲ್ಲೇ ಇದೊಂದು ಕೆಟ್ಟ ಆಯ್ಕೆ ಎಂದು ಛೀಮಾರಿ ಹಾಕಿದ್ದಾರೆ.
https://x.com/Ayushihihaha/status/2082733129945469334?s=20

