HomeKarnatakaಯಾವಾಗ ಬೇಕಾದರೂ ನಮ್ಮ ಮನೆ ಮೇಲೆ ಇಡಿ, ಐಟಿಯವರು ದಾಳಿ ನಡೆಸಲಿ: ಸಚಿವ ವಿಜಯಾನಂದ ಕಾಶಪ್ಪನವರ್...

ಯಾವಾಗ ಬೇಕಾದರೂ ನಮ್ಮ ಮನೆ ಮೇಲೆ ಇಡಿ, ಐಟಿಯವರು ದಾಳಿ ನಡೆಸಲಿ: ಸಚಿವ ವಿಜಯಾನಂದ ಕಾಶಪ್ಪನವರ್ ಹೇಳಿಕೆ

ಬಾಗಲಕೋಟೆ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ಬಿಜೆಪಿಯ ಕುತಂತ್ರದಿಂದ ನಡೆದಿರುವ ದಾಳಿ ಎಂದು ಸಚಿವ ವಿಜಯಾನಂದ ಕಾಶಪ್ಪನವರ್ ತಿಳಿಸಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಸಚಿವ ವಿಜಯಾನಂದ ಕಾಶಪ್ಪನವರ್, ಬಿಜೆಪಿಗೆ ಸೇರದಿದ್ದರೆ ತನಿಖಾ ಸಂಸ್ಥೆಗಳ ಮೂಲಕ ದಾಳಿ ಮಾಡಿಸುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ಬಿಜೆಪಿಗೆ ಸೇರದಿದ್ದರೆ ಈ ರೀತಿ ದಾಳಿ ನಡೆಯುತ್ತವೆ ಎಂದು ಆರೋಪಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಕಾಂಗ್ರೆಸ್​ನ 56 ಶಾಸಕರ ಪಟ್ಟಿ ಮಾಡಿದ್ದರು. ಆನೇಕ ಜನ ನಮ್ಮ ಹೆಸರನ್ನೂ ಕೊಟ್ಟಿದ್ದರು, ಆ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಬಿಜೆಪಿಗೆ ಸೇರ್ಪಡೆಯಾಗದಿದ್ದರೆ ನಿಮ್ಮ ಮೇಲೆ ದಾಳಿ ಮಾಡ್ತೇವೆ ಅಂತಾರೆ. ಆದರೆ ನಾನು ಇಡಿ, ಐಟಿ ದಾಳಿ ಸೇರಿದಂತೆ ಎಲ್ಲವನ್ನೂ ಎದುರಿಸಲು ಸಿದ್ಧನಿದ್ದೇನೆ ಎಂದರು.

ಯಾವಾಗ ಬೇಕಾದ್ರೂ ನಮ್ಮ ಮನೆಗೆ ಇಡಿ, ಐಟಿಯವರು ಬರಬಹುದು. ನಾನು ಎದುರಿಸಲು ಸಿದ್ಧ. ಸತೀಶ್ ಜಾರಕಿಹೊಳಿ ಮೇಲೆ ಇಡಿ ದಾಳಿ ಬಿಜೆಪಿಯವರ ಕುತಂತ್ರ ಎಂದು ಹೇಳಿದರು.

ಸತೀಶ್ ಜಾರಕಿಹೊಳಿ ಮನೆ ಮೇಲೆ ಇಡಿ ದಾಳಿ ಹಿಂದೆ ಕಾಂಗ್ರೆಸ್​ನವರದ್ದೇ ಕೈವಾಡವಿದೆ. ಮುಡಾ ವಿವಾದದ ಹಿಂದೆಯೂ ಕಾಂಗ್ರೆಸ್​ನವರೇ ಇದ್ರು ಎಂಬ ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ರಾಅಜಣ್ಣ ಅವರ ಮಾತುಗಳನ್ನು ನಾನು ಗಮನಿಸಿಲ್ಲ. ಇಂತಹ ಆರೋಪಗಳು ಕೇಳಿ ಬರುತ್ತಿವೆ, ಆದರೆ ಕಾಂಗ್ರೆಸ್​ನವರ ಕೈವಾಡವಿಲ್ಲ. ವಿನಾಕಾರಣ ಆರೋಪ ಮಾಡುತ್ತಾರೆ, ಅವೆಲ್ಲ ಸರಿಯಿಲ್ಲ, ಒಪ್ಪುವಂತಹದ್ದಲ್ಲ. ನಮ್ಮ ನಾಯಕರ ಬೆಳವಣಿಗೆ ಸಹಿಸದೆ ಬಿಜೆಪಿಯವರು ಕುತಂತ್ರ ಮಾಡ್ತಿದ್ದಾರೆ. ಕಾಂಗ್ರೆಸ್​ನವರ ಮೇಲೆ ಮಾತ್ರ ಜಾರಿ ನಿರ್ದೇಶನಾಲಯ ದಾಳಿ ಮಾಡುತ್ತಿದೆ ಎಂದರು.

ಇಡೀ ದೇಶದಲ್ಲಿ ಬಿಜೆಪಿಯ ಒಬ್ಬ ನಾಯಕನ ಮೇಲೂ ಇಡಿ ದಾಳಿ ಮಾಡಿಲ್ಲ. ಉದ್ದೇಶಪೂರ್ವಕವಾಗಿ ಕಾಂಗ್ರೆಸ್​ನವರ ಮೇಲೆ ದ್ವೇಷ, ಸೇಡಿನ ರಾಜಕಾರಣ ಮಾಡಲಾಗುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಷ್ಟು ಹಗರಣಗಳು ಆಗಿಲ್ಲ? ಅವೆಲ್ಲವನ್ನು ಮುಚ್ಚಿ ಹಾಕಿದ್ದಾರೆ. ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಮನೆ ಮೇಲೆ ಇಡಿ ದಾಳಿ ಮಾಡಲಿ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular