HomeHealthಸೇವಿಸಿ ಆರೋಗ್ಯಕರ ಕಿವಿ ಹಣ್ಣಿನ ʼಸ್ಮೂಥಿʼ

ಸೇವಿಸಿ ಆರೋಗ್ಯಕರ ಕಿವಿ ಹಣ್ಣಿನ ʼಸ್ಮೂಥಿʼ

ಸ್ಮೂಥಿ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಒಂದು ಗ್ಲಾಸ್ ಕುಡಿದರೆ ಹೊಟ್ಟೆ ತುಂಬಿದಂತೆ ಆಗುತ್ತದೆ. ತೂಕ ಇಳಿಕೆ ಮಾಡುವವರಿಗೆ ಹಾಗೂ ವರ್ಕೌಟ್ ನಂತರ ಏನಾದರೂ ಹೊಟ್ಟೆ ತುಂಬುವಂತಹ ಜ್ಯೂಸ್ ಬೇಕೆನ್ನುವವರಿಗೆ ಇದು ಒಳ್ಳೆಯ ಸ್ಮೂಥಿಯಾಗಿದೆ. ಮಾಡುವ ವಿಧಾನ ಸುಲಭವಿದೆ.

ಬೇಕಾಗುವ ಸಾಮಾಗ್ರಿ:

ಕಿವಿ ಹಣ್ಣು-1, ಬಾಳೆಹಣ್ಣು-1, ಹಾಲು-1 ಕಪ್, ½-ಬೆಣ್ಣೆ ಹಣ್ಣು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಮೊದಲಿಗೆ ಕಿವಿಹಣ್ಣು, ಬಾಳೆಹಣ್ಣಿನ ಸಿಪ್ಪೆ ತೆಗೆದು ಚೆನ್ನಾಗಿ ಕತ್ತರಿಸಿಕೊಳ್ಳಿ. ನಂತರ ಬೆಣ್ಣೆಹಣ್ಣಿನ ಬೀಜ ತೆಗೆದು ಒಳಗಿನ ತಿರುಳನ್ನು ತೆಗೆದಿಟ್ಟುಕೊಳ್ಳಿ. ಇವನ್ನು ಒಂದು ಮಿಕ್ಸಿ ಜಾರಿಗೆ ಸೇರಿಸಿ ಒಂದು ಸುತ್ತು ರುಬ್ಬಿಕೊಳ್ಳಿ.

ನಂತರ ಹಾಲು ಸೇರಿಸಿ ನಯವಾಗಿ ರುಬ್ಬಿಕೊಂಡು ಒಂದು ಗ್ಲಾಸ್ ಗೆ ತೆಗೆಯಿರಿ. ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಿರಿ. ಸಕ್ಕರೆ ಇಷ್ಟಪಡುವವರು ರುಬ್ಬಿಕೊಳ್ಳುವಾಗಲೇ ಸಕ್ಕರೆ ಸೇರಿಸಬಹುದು. ಬಾಳೆಹಣ್ಣು ಸಿಹಿ ಆಗಿರುವುದರಿಂದ ಸಕ್ಕರೆ ಅಷ್ಟಾಗಿ ಈ ಸ್ಮೂಥಿಗೆ ಬೇಕಾಗುವುದಿಲ್ಲ.

For Latest News Updates, Join Our Whatsapp Community🚩
RELATED ARTICLES

Most Popular