HomeEntertainmentಇಂದು ರಿಲೀಸ್ ಆಗಲಿದೆ ದುನಿಯಾ ವಿಜಯ್ ಅಭಿನಯದ 'ಭೀಮ' ಟ್ರೈಲರ್

ಇಂದು ರಿಲೀಸ್ ಆಗಲಿದೆ ದುನಿಯಾ ವಿಜಯ್ ಅಭಿನಯದ ‘ಭೀಮ’ ಟ್ರೈಲರ್

ಸ್ಯಾಂಡಲ್ ವುಡ್ ಅಲ್ಲಿ ಸದ್ಯ ಭರ್ಜರಿ ಸೌಂಡ್ ಮಾಡುತ್ತಿರುವ ಸಿನಿಮಾಗಳಲ್ಲಿ ದುನಿಯಾ ವಿಜಯ್ ಅವರ ‘ಭೀಮ’ ಕೂಡ ಸೇರುತ್ತದೆ. ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ಈ ಚಿತ್ರ ಇದೇ ಆಗಸ್ಟ್ 9 ರಂದು ತೆರೆ ಕಾಣುತ್ತಿದ್ದು. ದರ್ಶನ್ ಅಭಿಮಾನಿಗಳು ನಮ್ಮ ಸಪೋರ್ಟ್ ದುನಿಯಾ ವಿಜಯ್ ಅವರಿಗೆ ಮಾತ್ರ ಎಂದಿದ್ದಾರೆ. ಇಂದು ಭೀಮ ಟ್ರೈಲರ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದ್ದು, ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಆಕ್ಷನ್ ಥ್ರಿಲ್ಲರ್ ಕಥಾ ಹಂದರ ಹೊಂದಿರುವ ಈ ಚಿತ್ರವನ್ನು ಕೃಷ್ಣ ಕ್ರಿಯೇಶನ್ಸ್ ಮತ್ತು ಜಗದೀಶ್ ಫಿಲಂ ಬ್ಯಾನರ್ ನಲ್ಲಿ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಣ  ಮಾಡಿದ್ದು, ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ಅಶ್ವಿನಿ ಅಭಿನಯಿಸಿದ್ದಾರೆ. ಚರಣ್ ರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಶಿವಸೇನಾ ಅವರ ಛಾಯಾಗ್ರಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular