HomeHealthಪ್ರತಿದಿನ ಕುಡಿಯಿರಿ ಈ ರುಚಿಯಾದ ಜ್ಯೂಸ್‌; 30 ದಿನಗಳಲ್ಲಾಗುತ್ತೆ ಅದ್ಭುತ ಬದಲಾವಣೆ....!

ಪ್ರತಿದಿನ ಕುಡಿಯಿರಿ ಈ ರುಚಿಯಾದ ಜ್ಯೂಸ್‌; 30 ದಿನಗಳಲ್ಲಾಗುತ್ತೆ ಅದ್ಭುತ ಬದಲಾವಣೆ….!

ಟೊಮೆಟೋ ನಾವು ದಿನನಿತ್ಯ ಬಳಸುವ ತರಕಾರಿಗಳಲ್ಲೊಂದು. ಇದನ್ನು ಅನೇಕ ಬಗೆಯ ತಿನಿಸುಗಳಲ್ಲಿ ಬಳಸುತ್ತೇವೆ. ಆದರೆ ಟೊಮೆಟೊ ಜ್ಯೂಸ್‌ನ ರುಚಿಯನ್ನು ಬಹುತೇಕರು ಸವಿದಿರಲಿಕ್ಕಿಲ್ಲ. ಟೊಮೆಟೊ ಜ್ಯೂಸ್‌ನಲ್ಲಿ 95 ಪ್ರತಿಶತದಷ್ಟು ನೀರು ಇರುತ್ತದೆ. ಜೊತೆಗೆ ಇದು ವಿಟಮಿನ್ ಬಿ 6, ಸಿ ಮತ್ತು ಪೊಟ್ಯಾಸಿಯಮ್‌ನ ಅತ್ಯುತ್ತಮ ಮೂಲವಾಗಿದೆ. ಹಸಿ ಟೊಮೆಟೊ ಜ್ಯೂಸ್‌ ನಮ್ಮ ಆರೋಗ್ಯಕ್ಕೆ ವರದಾನವಿದ್ದಂತೆ. ಪ್ರತಿದಿನ ಟೊಮೆಟೊ ಜ್ಯೂಸ್ ಕುಡಿಯುವುದರಿಂದ ಏನೆಲ್ಲಾ ಪ್ರತೋಜನಗಳಿವೆ ಅನ್ನೋದನ್ನು ನೋಡೋಣ.

ಕ್ಯಾನ್ಸರ್ ತಡೆಗಟ್ಟುವಿಕೆ

ಲೈಕೋಪೀನ್ ಎಂಬ ಶಕ್ತಿಯುತವಾದ ಉತ್ಕರ್ಷಣ ನಿರೋಧಕವು ಟೊಮೆಟೊಗಳಲ್ಲಿ ಕಂಡುಬರುತ್ತದೆ. ಇದು ಸ್ವತಂತ್ರ ರಾಡಿಕಲ್ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಟೊಮೆಟೊ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು. ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಸ್ತನ ಕ್ಯಾನ್ಸರ್ ತಡೆಗಟ್ಟುವಲ್ಲಿ ಲೈಕೋಪೀನ್ ಸಹಾಯಕವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೃದಯದ ಆರೋಗ್ಯ

ಟೊಮೆಟೊ ಜ್ಯೂಸ್‌ ಹೃದಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಇದು ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ, ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಟೊಮೆಟೊ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಿ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಬಹುದು.

ತೂಕ ನಷ್ಟ

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಟೊಮೆಟೋ ಜ್ಯೂಸ್‌ ಕುಡಿಯಬೇಕು. ಇದರಲ್ಲಿ ಕ್ಯಾಲೋರಿಗಳ ಪ್ರಮಾಣ ಕಡಿಮೆ,  ನಾರಿನಂಶ ಅಧಿಕವಾಗಿರುತ್ತದೆ. ಈ ಜ್ಯೂಸ್ ಕುಡಿಯುವುದರಿಂದ ಹಸಿವನ್ನು ನಿಯಂತ್ರಿಸಬಹುದು. ಇದಲ್ಲದೆ ಟೊಮೆಟೊ ಜ್ಯೂಸ್‌ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ವಯಸ್ಸಾಗುವಿಕೆಯನ್ನು ತಡೆಯಬಲ್ಲದು

ಟೊಮೆಟೊ ರಸ ಚರ್ಮದ ಆರೋಗ್ಯಕ್ಕೂ ಬೆಸ್ಟ್.‌ ಇದು ಚರ್ಮವನ್ನು ಹೈಡ್ರೇಟ್‌ ಮಾಡಿ ಹೊಳಪನ್ನು ಹೆಚ್ಚಿಸುತ್ತದೆ. ಇದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನಿತ್ಯವೂ ಟೊಮೆಟೊ ಜ್ಯೂಸ್ ಕುಡಿಯುವುದರಿಂದ ಮೊಡವೆಯಂತಹ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.

ಜೀರ್ಣಕ್ರಿಯೆಗೆ ಸಹಕಾರಿ

ಟೊಮೆಟೊ ರಸದಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ಟೊಮೆಟೋ ಜ್ಯೂಸ್‌ ಸೇವನೆಯಿಂದ ಅಸಿಡಿಟಿ ಸಮಸ್ಯೆಯನ್ನೂ ಕಡಿಮೆ ಮಾಡಬಹುದು. ಇದರಿಂದಾಗಿ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳಬಹುದು.

For Latest News Updates, Join Our Whatsapp Community🚩
RELATED ARTICLES

Most Popular