ನಮ್ಮ ಕನಸುಗಳು ಕೇವಲ ದಿನವಿಡೀ ನಾವು ಯೋಚಿಸುವ ವಿಷಯಗಳ ಪ್ರತಿಬಿಂಬ ಮಾತ್ರವಲ್ಲ. ವಿಜ್ಞಾನದ ದೃಷ್ಟಿಯಲ್ಲಿ ಇವು ಮೆದುಳಿನ ಕ್ರಿಯೆಯಾಗಿದ್ದರೂ, ಆಧ್ಯಾತ್ಮಿಕವಾಗಿ ಇವು ನಮ್ಮ ಭವಿಷ್ಯದ ಬದಲಾವಣೆಗಳ ಮುನ್ಸೂಚನೆಗಳಾಗಿರುತ್ತವೆ. ನಮ್ಮ ಜೀವನದಲ್ಲಿ ಯಾವುದೋ ಒಂದು ಹಂತ ಮುಗಿಯುವಾಗ ಅಥವಾ ಹೊಸ ಅಧ್ಯಾಯ ಆರಂಭವಾಗುವ ಮೊದಲು ಅಂತರಂಗವು ಕನಸುಗಳ ಮೂಲಕ ನಮಗೆ ಸಂಕೇತಗಳನ್ನು ನೀಡುತ್ತದೆ ಎಂದು ಆಧ್ಯಾತ್ಮಿಕ ಚಿಂತಕರು ಹೇಳುತ್ತಾರೆ. ಇಂತಹ ವಿಶೇಷ ಸಂದೇಶ ನೀಡುವ ಏಳು ಮುಖ್ಯ ಕನಸುಗಳ ಬಗ್ಗೆ ಮಾಹಿತಿ ಇಲ್ಲಿದೆ.
1. ಸಾವು ಅಥವಾ ಯಾವುದೋ ಅಂತ್ಯದ ಕನಸು ಸಾಮಾನ್ಯವಾಗಿ ಸಾವಿನ ಕನಸು ಬಿದ್ದರೆ ನಮಗೆ ಭಯವಾಗುತ್ತದೆ. ಆದರೆ ಇದು ದೈಹಿಕ ಸಾವಿನ ಮುನ್ಸೂಚನೆಯಲ್ಲ. ಬದಲಿಗೆ ಇದು ನಿಮ್ಮ ಜೀವನದ ಹಳೆಯ ಅಭ್ಯಾಸ, ಸಂಬಂಧ ಅಥವಾ ಒಂದು ಹಂತದ ಮುಕ್ತಾಯವನ್ನು ಸೂಚಿಸುತ್ತದೆ. ನೀವು ಯಾವುದೋ ಬಂಧನದಿಂದ ಮುಕ್ತರಾಗಲಿದ್ದೀರಿ ಎಂದರ್ಥ. ಇದಕ್ಕೆ ದಾಲ್ಚಿನ್ನಿ ಚಹಾ ಸೇವನೆ ಮತ್ತು ಸಣ್ಣ ಆಚರಣೆಗಳ ಮೂಲಕ ಮನಸ್ಸನ್ನು ಹಗುರಗೊಳಿಸಿಕೊಳ್ಳಬಹುದು.
2. ಎತ್ತರದಿಂದ ಕೆಳಕ್ಕೆ ಬೀಳುವಿಕೆ ಜೀವನದ ಮೇಲೆ ನಿಯಂತ್ರಣ ತಪ್ಪಿದಾಗ ಅಥವಾ ಆತಂಕವಿದ್ದಾಗ ಇಂತಹ ಕನಸುಗಳು ಬೀಳುತ್ತವೆ. ಇದು ನಿಮ್ಮನ್ನು ನೀವು ನಂಬಿ ಮುನ್ನಡೆಯಲು ನೀಡುವ ಕರೆ. ನೆಲದ ಮೇಲೆ ಪಾದಗಳನ್ನು ಊರಿ ಕುಳಿತುಕೊಳ್ಳುವ ಅಥವಾ ಗ್ರೌಂಡಿಂಗ್ ಚಟುವಟಿಕೆಗಳ ಮೂಲಕ ಇಂತಹ ಆತಂಕದಿಂದ ಹೊರಬರಬಹುದು.
3. ಜಲ ಪ್ರವಾಹ ಅಥವಾ ಸಮುದ್ರ ನೀರು ನಮ್ಮ ಭಾವನೆಗಳ ಪ್ರತೀಕ. ಅತಿಯಾದ ಪ್ರವಾಹ ಅಥವಾ ಅಲೆಗಳ ಕನಸು ಬಿದ್ದರೆ, ನಿಮ್ಮ ಮನಸ್ಸಿನಲ್ಲಿ ಅಡಗಿರುವ ಭಾವನೆಗಳು ಹೊರಬರಲು ಹವಣಿಸುತ್ತಿವೆ ಎಂದರ್ಥ. ಈ ಸಮಯದಲ್ಲಿ ಶಾಂತವಾಗಿರುವುದು ಮತ್ತು ಸೋಂಪು ನೀರಿನಂತಹ ಪಾನೀಯಗಳ ಸೇವನೆ ಮನಸ್ಸಿಗೆ ನೆಮ್ಮದಿ ನೀಡುತ್ತದೆ.
4. ಯಾರೋ ಬೆನ್ನಟ್ಟುತ್ತಿರುವ ಭಾವನೆ ನಿಜ ಜೀವನದಲ್ಲಿ ನೀವು ಯಾವುದೋ ನಿರ್ಧಾರ ಅಥವಾ ಸಸ್ಯವನ್ನು ಎದುರಿಸಲು ಹಿಂಜರಿಯುತ್ತಿದ್ದೀರಿ ಎಂದರ್ಥ. ಸಮಸ್ಯೆಗಳಿಂದ ಓಡಿಹೋಗುವ ಬದಲು ಅದನ್ನು ಎದುರಿಸುವ ಶಕ್ತಿ ನಿಮ್ಮಲ್ಲಿದೆ ಎಂದು ಈ ಕನಸು ನೆನಪಿಸುತ್ತದೆ. ಶುಂಠಿ ಚಹಾದಂತಹ ಉಲ್ಲಾಸದಾಯಕ ಪಾನೀಯಗಳು ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿ.
5. ಹಾವಿನ ಕನಸು ಹಾವುಗಳು ಪರಿವರ್ತನೆ ಮತ್ತು ಶಕ್ತಿಯ ಸಂಕೇತ. ಇದು ನಿಮ್ಮ ಬದುಕಿನಲ್ಲಿ ದೊಡ್ಡ ಬದಲಾವಣೆ ಬರಲಿದೆ ಅಥವಾ ನಿಮ್ಮ ಒಳಗಿನ ಅದಮ್ಯ ಶಕ್ತಿ ಜಾಗೃತಗೊಳ್ಳುತ್ತಿದೆ ಎಂಬುದನ್ನು ಸೂಚಿಸುತ್ತದೆ. ತುಳಸಿ ಚಹಾ ಸೇವನೆ ಮತ್ತು ಧ್ಯಾನ ಮಾಡುವುದರಿಂದ ಈ ಬದಲಾವಣೆಯನ್ನು ಸ್ವೀಕರಿಸುವ ಹದ ನಿಮ್ಮ ಮನಸ್ಸಿಗೆ ಸಿಗುತ್ತದೆ.
6. ನೈಜವೆನಿಸುವ ಕನಸುಗಳು ಕೆಲವೊಮ್ಮೆ ಕನಸುಗಳು ಎಷ್ಟು ನೈಜವಾಗಿರುತ್ತವೆ ಎಂದರೆ ನಾವು ಎಚ್ಚರವಾದರೂ ಅದು ಕನಸೆಂದು ನಂಬಲು ಕಷ್ಟವಾಗುತ್ತದೆ. ಇದು ನಿಮ್ಮ ಅಂತಃಪ್ರಜ್ಞೆ ಹೆಚ್ಚಾಗಿರುವುದರ ಸಂಕೇತ. ನಿಮ್ಮ ಮನಸ್ಸಿನ ಮಾತನ್ನು ಕೇಳಲು ಇದು ಸರಿಯಾದ ಸಮಯ. ಬಿಸಿ ಹಾಲಿನ ಸೇವನೆ ಈ ವೇಳೆ ಮೆದುಳಿಗೆ ವಿಶ್ರಾಂತಿ ನೀಡುತ್ತದೆ.
7. ಏನನ್ನೋ ಕಳೆದುಕೊಳ್ಳುವ ಕನಸು ನಿಮ್ಮ ಬದುಕಿನ ದಾರಿಗೆ ಅಗತ್ಯವಿಲ್ಲದ ವಿಷಯಗಳನ್ನು ಕೈಬಿಡುವಂತೆ ಈ ಕನಸು ಪ್ರೇರೇಪಿಸುತ್ತದೆ. ಯಾವುದೋ ಹಳೆಯ ನೆನಪು ಅಥವಾ ವಸ್ತುವಿನ ಮೇಲಿನ ವ್ಯಾಮೋಹವನ್ನು ಬಿಟ್ಟಾಗ ಮಾತ್ರ ಹೊಸತನ್ನು ಬರಮಾಡಿಕೊಳ್ಳಲು ಸಾಧ್ಯ ಎಂಬುದು ಇದರ ಗುರಿ.
ಕನಸುಗಳು ಕೇವಲ ಕಲ್ಪನೆಗಳಲ್ಲ, ಅವು ನಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಹಾದಿ ತೋರಿಸುವ ದಾರಿದೀಪಗಳು. ಇವುಗಳ ಹಿಂದಿನ ಮರ್ಮವನ್ನರಿತು ಬದುಕಿನಲ್ಲಿ ಬದಲಾವಣೆ ತಂದುಕೊಳ್ಳುವುದು ಒಳಿತು.

