HomeLatest NewsBREAKING: ಮತ್ತೋರ್ವ ನವವಿವಾಹಿತೆಯನ್ನು ಬಲಿ ಪಡೆದ ವರದಕ್ಷಿಣೆ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿ ಬ್ರೇನ್ ಡೆಡ್ ಆಗಿದ್ದ...

BREAKING: ಮತ್ತೋರ್ವ ನವವಿವಾಹಿತೆಯನ್ನು ಬಲಿ ಪಡೆದ ವರದಕ್ಷಿಣೆ ಕಿರುಕುಳ: ಆತ್ಮಹತ್ಯೆಗೆ ಯತ್ನಿಸಿ ಬ್ರೇನ್ ಡೆಡ್ ಆಗಿದ್ದ ನವವಧು ಚಿಕಿತ್ಸೆ ಫಲಿಸದೇ ಸಾವು

ಬೆಂಗಳೂರು: ಆಧುನಿಕವಾಗಿ, ಶೈಕ್ಷಣಿಕವಾಗಿ ಜಗತ್ತು ಅದೇಷ್ಟೇ ಬೆಳೆದು ನಿಂತಿದ್ದರೂ ವರದಕ್ಷಿಣೆಯ ಪಿಡುಗು ಮಾತ್ರ ಇನ್ನೂ ನಿಂತಿಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಪತಿ ಹಾಗೂ ಮನೆಯವರ ವರದಕ್ಷಿಣೆ ಕಿರುಕುಳ, ಧನದಾಹಕ್ಕೆ ನವವಿವಾಹಿತೆಯರೇ ಬಲಿಯಾಗುತ್ತಿರುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

58 ದಿನಗಳ ಹಿಂದಷ್ಟೇ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದ ನವವಿವಾಹಿತೆ ಪತಿಯ ವರದಕ್ಷಿಣೆ ಕಿರುಕುಳ, ಅವಮಾನಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರಾಮಮೂರ್ತಿ ನಗರದಲ್ಲಿ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಾನವಿ ಮೃತ ನವವಿವಾಹಿತೆ. ಕೆಲ ದಿನಗಳ ಹಿಂದಷ್ಟೇ ಗಾನವಿ, ಸೂರಜ್ ಎಂಬಾತನ ಜೊತೆ ವಿವಾಹವಾಗಿದ್ದರು. ಎರಡೂ ಕುಟುಂಬಗಳು ನೋಡಿಯೇ ಮಾಡಿದ್ದ ಮದುವೆ. ಸೂರಜ್ ಮನೆಯವರ ಬೇಡಿಕೆಯಂತೆ ಲಕ್ಷ ಲಕ್ಷ ಹಣ, ಚಿನ್ನಾಭರಣ ಕಿಟ್ಟು ಮದುವೆ ಮಾಡಲಾಗಿತ್ತು. ಅಲ್ಲದೇ ಸೂರಜ್ ಬೇಡಿಕೆಯಂತೆ ಪ್ಯಾಲೇಸ್ ಗ್ರೌಂಡ್ ನಲ್ಲಿ ಅದ್ಧೂರಿ ಆರತಕ್ಷತೆ ಕಾರ್ಯಕ್ರಮವನ್ನೂ ಗಾನವಿ ತಂದೆ-ತಾಯಿ ನೆರವೇರಿಸಿದ್ದರು. ಹೀಗೆ ಭರ್ಜರಿಯಾಗಿ ವಿವಾಹವಾದ ವರಮಹಾಶಯನಿಗೆ ವರದಕ್ಷಿಣೆಯ ದಾಹ ಕಡಿಮೆಯಾಗಿಲ್ಲ. ಆತನ ತಾಯಿ ಹಾಗೂ ಸಹೋದರನೂ ಇಅದಕ್ಕೆ ಸಾಥ್ ನೀಡಿದ್ದಾರೆ.

ನವದಂಪತಿ ಹತ್ತು ದಿನಗಳ ಕಾಲ ಶ್ರೀಲಂಕಾಗೆ ಹನಿಮೂನ್ ಟ್ರಿಪ್ ಹೋಗಿದ್ದರು. ವರದಕ್ಷಿಣೆ ವಿಚಾರವಾಗಿ ಸೂರಜ್ ಅಲ್ಲಿಯೂ ಗಲಾಟೆ ಮಾಡಿದ್ದಾನೆ. ನವದಂಪತಿ ನಡುವೆ ಜಗಳವಾಗಿ ಹತ್ತುದಿನದ ಹನಿಮೂನ್ ಟ್ರಿಪ್ ಅರ್ಧಕ್ಕೆ ನಿಲ್ಲಿಸಿ 5 ದಿನಕ್ಕೇ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ವಾಪಸ್ ಆಗುತ್ತಿದ್ದಂತೆಯೇ ಗಾನವಿ ಪೋಷಕರಿಗೆ ಕರೆ ಮಾಡಿದ ಸೂರಜ್ ನಿಮ್ಮ ಮಗಳನ್ನು ಕರೆದುಕೊಂಡು ಹೋಗಿ ಎಂದು ಆವಾಜ್ ಹಾಕಿದ್ದಾನೆ. ಮನೆಗೆ ಬಂದವರಿಗೆ ಅವಮಾನ ಮಾಡಿ, ವರದಕ್ಷಿಣೆ ಬಗ್ಗೆ ಮತ್ತೆ ಬೇಡಿಕೆ ಇಟ್ಟಿದ್ದಾನೆ. ಪತಿ ಹಾಗೂ ಆತನ ಮನೆಯವರ ವರ್ತನೆ, ವರದಕ್ಷಿಣೆ ಕಿರುಕುಳಕ್ಕೆ ನೊಂದ ಗಾನವಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿದು ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ವೈದ್ಯರು ಗಾನವಿ ಬ್ರೇನ್ ಡೆಡ್ ಆಗಿದೆ ಎಂದು ತಿಳಿಸಿದ್ದರು. ಚಿಕಿತ್ಸೆ ಮುಂದುವರೆದಿತ್ತು. ಆದರೀಗ ಚಿಕಿತ್ಸೆ ಫಲಕಾರಿಯಾಗದೇ ಗಗನಾ ಕೊನೆಯಿಸಿರೆಳೆದಿದ್ದಾಳೆ. ನೂರಾರು ಕನಸುಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಗಾನವಿ ಕನಸು ಮದುವೆಯಾಗುತ್ತಿದ್ದಂತೆಯೇ ಬಾಡಿಹೋಗಿದೆ. ವರದಕ್ಷಿಣೆ ಭೂತ ನವವಿವಾಹಿತೆಯನ್ನೇ ಬಲಿಪಡೆದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular