HomeKarnatakaಗಮನಿಸಿ : ‘ಗೃಹಲಕ್ಷ್ಮಿ’ ಹಣ ಬಂದಿಲ್ಲ ಎಂದು ಚಿಂತಿಸ್ಬೇಡಿ, ಈ ಕೆಲಸ ಮಾಡಿ ಒಟ್ಟಿಗೆ ಬರುತ್ತೆ...

ಗಮನಿಸಿ : ‘ಗೃಹಲಕ್ಷ್ಮಿ’ ಹಣ ಬಂದಿಲ್ಲ ಎಂದು ಚಿಂತಿಸ್ಬೇಡಿ, ಈ ಕೆಲಸ ಮಾಡಿ ಒಟ್ಟಿಗೆ ಬರುತ್ತೆ 6 ಸಾವಿರ ಹಣ..!

ಬೆಂಗಳೂರು : ‘ಗೃಹಲಕ್ಷ್ಮಿ’ ಯೋಜನೆಯ ಅಡಿಯಲ್ಲಿ ಕುಟುಂಬದ ಯಜಮಾನಿ ಮಹಿಳೆಯರಿಗೆ ಪ್ರತಿ ತಿಂಗಳು 2,000 ರೂ.ಹಣವನ್ನು ಡಿಬಿಟಿ ಮೂಲಕ ನೋಂದಾಯಿತ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತದೆ.

ಮೊದಲ ಕಂತಿನ ಹಣ 96 ಲಕ್ಷ ಜನರ ಖಾತೆ ಹಾಗೂ 2 ನೇ ಕಂತಿನ ಹಣ 63 ಲಕ್ಷ ಮಹಿಳೆಯರ ಖಾತೆಗೂ ವರ್ಗಾವಣೆ ಮಾಡಲಾಗಿದೆ. ಆದರೆ ಉಳಿದವರ ಖಾತೆಗೆ ಹಣ ಜಮಾ ಆಗಿಲ್ಲ. ಹಾಗಾದರೆ ಸಮಸ್ಯೆ ಏನು..? ಯಾಕೆ ಹಣ ಬರುತ್ತಿಲ್ಲ..ಮುಂದೆ ಓದಿ.

ಹಣ ಜಮಾ ಮಾಡುವಲ್ಲಿ ಸರ್ಕಾರದಲ್ಲೂ ಸಮಸ್ಯೆ ಎದುರಾಗಿದ್ದು, ತಾಂತ್ರಿಕ ದೋಷಗಳಿಂದ ಮಹಿಳೆಯರ ಖಾತೆಯನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಇದಕ್ಕೆ ಪರಿಹಾರ ಕಂಡು ಕೊಂಡು ಮೂರು ಕಂತಿನ ಹಣ ಒಟ್ಟಿಗೆ ಹಾಕಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಯಾರು ಪೋಸ್ಟ್ ಆಫೀಸ್ ಖಾತೆ ಹೊಂದಿರುತ್ತಾರೋ ಅಂತಹವರಿಗೆ ಕೂಡ ಯಾವುದೇ ತೊಂದರೆ ಆಗದಂತೆ ಗೃಹಲಕ್ಷ್ಮಿ 2 ನೇ ಕಂತಿನ ಹಣ ಸಂದಾಯವಾಗಿದೆ. ಮಹಿಳೆಯರು ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ನೀಡಿದ್ದು, ಇದುವರೆಗೆ ಯಾರಿಗೆ ಒಂದು ಕಂತಿನ ಹಣ ಕೂಡ ಜಮಾ ಆಗಿಲ್ಲ, ಅಂತಹವರಿಗೆ ನವೆಂಬರ್ 10 ರೊಳಗೆ ಮೂರು ಕಂತಿನ ಹಣ ಸಂದಾಯ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಮಹಿಳೆಯರೂ ತಪ್ಪದೇ ಈ ಕೆಲಸ  ಮಾಡಿ.

ಖಾತೆ ಹೊಂದಿರುವ ಬ್ಯಾಂಕ್ಗಳಿಗೆ ಸಂಪರ್ಕಿಸಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ನೀಡಿ ಆಧಾರ್ ಜೋಡಣೆ ಮತ್ತು ಇಕೆವೈಸಿ ಅಪ್ಡೇಟ್ ಮಾಡಿಸಿಕೊಳ್ಳುವುದು ಹಾಗೂ ಫಲಾನುಭವಿಗಳು ಆಧಾರ್ ಕಾರ್ಡ್, ಪಡಿತರ ಚೀಟಿಯನ್ವಯ ಹಾಗೂ ಪಾಸ್ಪುಸ್ತಕದಲ್ಲಿರುವ ಖಾತೆದಾರರ ಹೆಸರು ಹೊಂದಾಣಿಕೆ ಮಾಡಿಸಿಕೊಳ್ಳುವಂತೆ ಯೋಜನೆಯ ಸೌಲಭ್ಯವನ್ನು ಪಡೆಯುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.

ನಿಮ್ಮ ಖಾತೆಗೆ ಆಧಾರ್ ಸೀಡಿಂಗ್ ಆಗಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಿ. ಇನ್ನು ಬ್ಯಾಂಕಿನಲ್ಲಿ ನಿಮ್ಮ ಸಾಲ ಪಡೆದುಕೊಂಡ ಖಾತೆಯನ್ನು ಗೃಹಲಕ್ಷ್ಮಿ ಯೋಜನೆಗೂ ಕೊಟ್ಟಿದ್ದರೆ, ಹಣ ನಿಮ್ಮ ಸಾಲಕ್ಕೆ ಜಮಾ ಆಗಲು ಬಹುದು. ರೇಷನ್ ಕಾರ್ಡ್ ತಿದ್ದುಪಡಿ ಆಗಿದೆಯಾ ಅಂತಾ ತಿಳಿದುಕೊಳ್ಳಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular