HomeKarnatakaBIG NEWS: ತಂದೆಯನ್ನೇ ಕೊಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ಮಗ

BIG NEWS: ತಂದೆಯನ್ನೇ ಕೊಂದು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ ಮಗ

ರಾಯಚೂರು: ತಂದೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆಗೈದ ಮಗ ಬಳಿಕ ಪೊಲೀಸರಿಗೆ ತಾನೇ ಕರೆ ಮಾಡಿ ಮಾಹಿತಿ ನೀಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ದೇವರಭೂಪೂರಿನಲ್ಲಿ ನಡೆದಿದೆ.

ತಂದೆ ಬಂಡಿತಿಮ್ಮಣ್ಣ (55) ಕೊಲೆಯಾದ ವ್ಯಕ್ತಿ. ಶೀಲವಂತ ತಂದೆಯನ್ನು ಕೊಲೆಗೈದ ಮಗ. ತಂದೆ ಬಂಡಿತಿಮ್ಮಣ್ಣ ಪ್ರತಿದಿನ ಗಾಂಜಾ, ಮಧ್ಯ ಸೇವಿಸಿಕೊಂಡು ಬಂದು ತಾಯಿಗೆ ಕಿರುಕುಳ, ಹಿಂಸೆ ನೀಡುವುದು ಮಾಡುತ್ತಿದ್ದನಂತೆ. ತಾಯಿಗೆ ಕೊಡುತ್ತಿದ್ದ ಹಿಂಸೆ ನೋಡಲಾಗದೇ ಮಗ ತಂದೆಯನ್ನೇ ಕೊಲೆ ಮಾಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಂದೆಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಘಟನಾ ಸ್ಥಳಕ್ಕೆ ಲಿಂಗಸಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular