ಮಾಲ್ ನ ಶೌಚಾಲಯಗಳು ಯಾಕೆ ಈ ರೀತಿ ಇರುತ್ತವೆ ಗೊತ್ತಾ….?

ಮಾಲ್ ಗಳಿಗೆ ಸಾಮಾನ್ಯವಾಗಿ ಎಲ್ಲರೂ ಹೋಗಿರ್ತಾರೆ. ಅಲ್ಲಿಯ ಶೌಚಾಲಯವನ್ನೂ ಬಳಕೆ ಮಾಡಿರ್ತಾರೆ. ಮಾಲ್ ಗಳಲ್ಲಿ ಶೌಚಾಲಯಗಳು ವಿಭಿನ್ನವಾಗಿರುತ್ತವೆ. ಗೋಡೆಗಳು ಮಹಡಿಗೆ ಅಂಟಿಕೊಂಡಿರುವುದಿಲ್ಲ. ಮಹಡಿ ಮತ್ತು ಗೋಡೆ ಮಧ್ಯೆ ದೊಡ್ಡ ಗ್ಯಾಪ್ ಇರುತ್ತದೆ.

ಹಾಗೆ ಒಂದು ಶೌಚಾಲಯದಿಂದ ಇನ್ನೊಂದು ಶೌಚಾಲಯದ ಮಧ್ಯೆ ಇರುವ ಗೋಡೆ ಕೂಡ ಮೇಲಿನ ಚಾವಣಿಗೆ ತಾಗಿರುವುದಿಲ್ಲ. ಅಲ್ಲೂ ದೊಡ್ಡ ಗ್ಯಾಪ್ ಇರುತ್ತದೆ. ಇದಕ್ಕೆ ಕಾರಣ ಏನು ಎಂಬುದು ನಿಮಗೆ ಗೊತ್ತಾ?

ಮಾಲ್ ಗಳಲ್ಲಿ ದಿನವಿಡೀ ಶೌಚಾಲಯವನ್ನು ಬಳಸಲಾಗುತ್ತಿರುತ್ತದೆ. ಇದ್ರಿಂದ ಶೌಚಾಲಯ ಕೊಳಕಾಗುತ್ತದೆ. ಮಹಡಿ ಮತ್ತು ಬಾಗಿಲಿನ ಮಧ್ಯೆ ಗ್ಯಾಪ್ ಇದ್ರೆ ಕ್ಲೀನ್ ಮಾಡುವುದು ಸುಲಭ. ಮಾಪ್ ಬಳಸಿ ಸುಲಭವಾಗಿ ಕ್ಲೀನ್ ಮಾಡಬಹುದು.

ಟಾಯ್ಲೆಟ್ ಒಳಗೆ ವ್ಯಕ್ತಿ ಅನಾರೋಗ್ಯಕ್ಕೊಳಗಾದ್ರೆ, ಪ್ರಜ್ಞೆ ತಪ್ಪಿದ್ರೆ, ಕುಸಿದು ಬಿದ್ರೆ ತಕ್ಷಣ ಹೊರಗಿರುವವರಿಗೆ ತಿಳಿಯುತ್ತದೆ. ಬಾಗಿಲು ಹಾಗೂ ಮಹಡಿ ಮಧ್ಯೆ ಜಾಗವಿಲ್ಲದೆ ಹೋದ್ರೆ ಒಳಗೆ ಏನಾಗುತ್ತಿದೆ ಎಂಬುದು ತಿಳಿಯುವುದಿಲ್ಲ.

ಕೆಲವೊಮ್ಮೆ ಮಕ್ಕಳು ಶೌಚಾಲಯದ ಬಾಗಿಲನ್ನು ಹಾಕಿಕೊಳ್ತಾರೆ. ಅವ್ರಿಗೆ ಬಾಗಿಲು ತೆಗೆಯಲು ಬರುವುದಿಲ್ಲ. ಹೊರಗೆ ಯಾರೂ ಇಲ್ಲವೆಂದಾದ್ರೆ ಬಾಗಿಲಿನಡಿಯಿಂದ ನುಸುಳಿ ಸುಲಭವಾಗಿ ಹೊರಗೆ ಬರಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read