HomeSpecialಕಿಚನ್ ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್

ಕಿಚನ್ ಕ್ಲೀನ್ ಮಾಡಲು ಇಲ್ಲಿದೆ ಟಿಪ್ಸ್

ಅಡುಗೆ ಮನೆಯೆಂದರೆ ಒಂದಲ್ಲ ಒಂದು ಗಲೀಜು ಇರುತ್ತದೆ. ಎಷ್ಟೇ ಕ್ಲೀನ್ ಮಾಡಿದರೂ ಅದು ಮುಗಿಯುವುದೇ ಇಲ್ಲ. ಸುಲಭವಾಗಿ ಅಡುಗೆ ಮನೆ ಕ್ಲೀನ್ ಮಾಡುವುದಕ್ಕೆ ಇಲ್ಲಿ ಒಂದಷ್ಟು ಟಿಪ್ಸ್ ಇದೆ ಟ್ರೈ ಮಾಡಿ

ಕಿಚನ್ ಟವೆಲ್ ಗಳನ್ನು ಕ್ಲೀನ್ ಮಾಡಲು ಅರ್ಧ ಬಕೆಟ್ ಬಿಸಿ ನೀರು ತೆಗೆದುಕೊಂಡು ಅದಕ್ಕೆ 1ಚಮಚದಷ್ಟು ಕಲ್ಲುಪ್ಪು ಹಾಕಿ ನಂತರ ಬಟ್ಟೆ ವಾಶ್ ಮಾಡುವ ಪೌಡರ್/ ಲಿಕ್ವಿಡ್ ಹಾಕಿ ಅದಕ್ಕೆ ಕಿಚನ್ ಟವೆಲ್ ಗಳನ್ನು ಹಾಕಿ 4ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಇದನ್ನು ವಾಶ್ ಮಾಡಿದರೆ ಬೇಗ ಕೊಳೆ ಹೋಗುತ್ತದೆ. ಟವೆಲ್ ಕೂಡ ಸ್ವಚ್ಛವಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಸಾಂಬಾರು ಮಾಡುವಾಗ ಅಥವಾ ಹಾಲು ಕಾಯಿಸುವಾಗ ಅದು ಉಕ್ಕಿ ಗ್ಯಾಸ್ ಸ್ಟವ್ ಮೇಲಿನ ಬರ್ನರ್, ಫ್ರೇಮ್ ತುಂಬಾ ಕೊಳಕಾಗಿರುತ್ತದೆ. ಇದನ್ನು ಕ್ಲೀನ್ ಮಾಡಲು ಒಂದು ಅಗಲವಾದ ಟಬ್ ಗೆ ನೀರು ಹಾಕಿ ಯಾವುದಾದರೂ ಕ್ಲೀನಿಂಗ್ ಲಿಕ್ವಿಡ್ ಹಾಕಿ ಗ್ಯಾಸ್ ಸ್ಟವ್ ಬರ್ನರ್ ಹಾಗೂ ಫ್ರೇಮ್ ಅನ್ನು 12 ಗಂಟೆಗಳ ಕಾಲ ನೆನೆಸಿಡಿ. ನಂತರ ಒಂದು ಟೂಥ್ ಬ್ರೆಷ್ ನ ಸಹಾಯದಿಂದ ಇದನ್ನು ತಿಕ್ಕಿ ಬೇಗನೆ ಕೊಳೆ ಹೋಗುತ್ತದೆ.

ಇನ್ನು ಟ್ಯಾಪ್ ನ ಸುತ್ತ ಉಪ್ಪು ನೀರಿನ ಕಲೆ ಕಟ್ಟಿಕೊಂಡಿರುತ್ತದೆ. ಇದನ್ನು ಕ್ಲೀನ್ ಮಾಡಲು ಒಂದು ಬೌಲ್ ನಲ್ಲಿ ವಿನೇಗರ್ ಹಾಕಿಕೊಂಡು ಅದಕ್ಕೆ ಟಿಶ್ಯೂ ಪೇಪರ್ ಅದ್ದಿ ಈ ಟಿಶ್ಯೂ ಪೇಪರ್ ಅನ್ನು ಟ್ಯಾಪ್ ನ ಸುತ್ತ ಸುತ್ತಿ 1 ಗಂಟೆಗಳ ಕಾಲ ಹಾಗೆಯೇ ಬಿಡಿ. ನಂತರ ಇದನ್ನು ತೆಗೆದು ಒಂದು ಬ್ರೆಷ್ ನ ಸಹಾಯದಿಂದ ತಿಕ್ಕಿ ನೀರಿನಿಂದ ತೊಳೆದು ಬಟ್ಟೆಯಿಂದ ಒರೆಸಿ ಬಿಡಿ.

For Latest News Updates, Join Our Whatsapp Community🚩
RELATED ARTICLES

Most Popular