HomeLatest Newsಚುನಾವಣೆ ಡ್ಯೂಟಿಗೆ ವಿಜಲ್ ತಂದ ಪೊಲೀಸ್‌ ವಿರುದ್ಧ ಟಿವಿಕೆ ಚಿಹ್ನೆ ಎಂದು ಕಿಡಿಕಾರಿ ತೆಗೆಸಿದ ಡಿಎಂಕೆ;...

ಚುನಾವಣೆ ಡ್ಯೂಟಿಗೆ ವಿಜಲ್ ತಂದ ಪೊಲೀಸ್‌ ವಿರುದ್ಧ ಟಿವಿಕೆ ಚಿಹ್ನೆ ಎಂದು ಕಿಡಿಕಾರಿ ತೆಗೆಸಿದ ಡಿಎಂಕೆ; ಹಸ್ತ ಕಾಂಗ್ರೆಸ್ ಚಿಹ್ನೆ ಅದನ್ನು ಏನ್ ಮಾಡ್ತೀರ?

ಇಂದು ( ಏಪ್ರಿಲ್ 23 ) ತಮಿಳುನಾಡು ವಿಧಾನಸಭೆಯ ಎಲ್ಲ 234 ವಿಧಾನಸಭಾ ಕ್ಷೇತ್ರಗಳಿಗೂ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಮುಂಜಾನೆ ಆರು ಗಂಟೆಯಿಂದಲೇ ಆರಂಭವಾದ ಮತದಾನ ಪ್ರಕ್ರಿಯೆಯಲ್ಲಿ ಮಧ್ಯಾಹ್ನ 1 ಗಂಟೆಯ ಸಮಯಕ್ಕೆ 56.81% ಮತದಾನ ನಡೆದಿದ್ದು, ಇದು ಕಳೆದ ಚುನಾವಣೆಗೆ ಹೋಲಿಸಿದರೆ 17% ಏರಿಕೆಯಾಗಿದೆ.

ಇಷ್ಟು ವರ್ಷಗಳ ಕಾಲ ಡಿಎಂಕೆ ಹಾಗೂ ಎಐಡಿಎಂಕೆ ನಡುವಿನ ಜಿದ್ದಾಜಿದ್ದಿ ಎಂದೇ ಕರೆಸಿಕೊಳ್ಳುತ್ತಿದ್ದ ತಮಿಳುನಾಡು ಚುನಾವಣಾ ಅಖಾಡದಲ್ಲಿ ಈ ಬಾರಿ ವಿಜಯ್ ಆಗಮನವಾಗಿದ್ದು, ಟಿವಿಕೆ ಸಹ ರೇಸ್‌ಗೆ ಇಳಿದಿದೆ.

ಟಿವಿಕೆ ಆರಂಭದಲ್ಲಿ ರಾಜಕೀಯ ಬೇರೆ ಹಾಗೂ ಸಿನಿಮಾ ಬೇರೆ, ಟಿವಿಕೆಯಿಂದ ಚುನಾವಣೆಯಲ್ಲಿ ಏನೂ ಪರಿಣಾಮವಾಗುವುದಿಲ್ಲ ಎಂದಿದ್ದ ಜನರು ಚಲಾವಣೆಯಾಗುತ್ತಿರುವ ಮತದಾನದ ಶೇಕಡಾಂಶ ಕಂಡು ಸದ್ಯ ಬೇರೆಯದ್ದೇ ಅಭಿಪ್ರಾಯ ಹೊಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚುನಾವಣೆ ಪ್ರಚಾರಗಳಲ್ಲಿ ಸತತವಾಗಿ ವಿಜಯ್ ಡಿಎಂಕೆಯನ್ನು ಉಲ್ಲೇಖಿಸಿ ಟೀಕೆ ಮಾಡುತ್ತಾ ಬಂದ ಕಾರಣ ಡಿಎಂಕೆ ಬೆಂಬಲಿಗರಲ್ಲಿ ಸಹಜವಾಗಿ ಟಿವಿಕೆ ಎದುರಾಳಿ ಎಂಬ ಮನೋಭಾವ ಮೂಡಿದೆ.

ಹೀಗಾಗಿಯೇ ಇಂದು ಚುನಾವಣೆ ಕರ್ತವ್ಯಕ್ಕೆ ಆಗಮಿಸಿದ್ದ ಪೊಲೀಸ್ ಒಬ್ಬರು ತಮಗೆ ಇಲಾಖೆಯಿಂದ ನೀಡಲಾದ ವಿಜಲ್‌ ಅನ್ನು ತಮ್ಮೊಟ್ಟಿಗೆ ತಂದಿದ್ದರು. ಇದರಿಂದ ಕುಪಿತಗೊಂಡ ಡಿಎಂಕೆ ಬೆಂಬಲಿಗರು ಇದು ಟಿವಿಕೆ ಪಕ್ಷದ ಚಿಹ್ನೆ, ಇದನ್ನು ಹೇಗೆ ಧರಿಸಿ ಬಂದ್ರಿ ಎಂದು ಆ ಪೇದೆಯ ಮೇಲೆ ಕಿಡಿಕಾರಿ ಅಲ್ಲಿಯೇ ಅದನ್ನು ತೆರವು ಮಾಡಿಸಿದ್ದಾರೆ.

ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಜಲ್ ಟಿವಿಕೆ ಚಿಹ್ನೆ ಎಂದು ತೆಗೆಸಿದ್ರಲ್ಲ, ಅದೇ ರೀತಿ ಹಸ್ತ ಕಾಂಗ್ರೆಸ್ ಚಿಹ್ನೆ ಎಂದು ಕೈ ತೆಗೆಸುವುದು ಸರಿಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular