ನವದೆಹಲಿ: ಡಿ,ಕೆ.ಶಿವಕುಮಾರ್ ಸರ್ಕಾರಕ್ಕೆ ಮೂರು ತಿಂಗಳು. ಈಗಲೇ ಒಂದು ವಿಕೆಟ್ ಪತನವಾಗಿದೆ. ಇನ್ಮುಂದೆ ಇಡೀ ಸರ್ಕಾರವೇ ಪತನವಾಗುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಡಿ.ಕೆ.ಸಿವಕುಮಾರ್ ನೇತೃತ್ವದ ಸರ್ಕಾರದ ಒಂದು ವಿಕೆಟ್ ಈಗಾಗಲೇ ಪತನವಾಗಿದೆ. ಮಂತ್ರಿಯಾದ ಕೇವಲ ೨೫ ದಿನಗಳಲ್ಲೇ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಈಗಾಗಲೇ ರಾಜೀನಾಮೆ ಪತ್ರವನ್ನು ಅವರು ರವಾನಿಸಿದ್ದು, ಎಲ್ಲಾ ಪ್ರಕ್ರಿಯೆಗಳು ಮುಗಿದಿವೆ. ಅಧಿಕೃತವಾಗಿ ಘೋಷಣೆ ಮಾತ್ರ ಬಾಕಿಯಿದೆ. ಅದು ಕೂಡ ಆಗುತ್ತೆ ಎಂದು ಹೇಳಿದರು.
ಸದನದ ಒಳಗಿನ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರದ ಈ ವಿಕೆಟ್ ಪತನ ಬಿಜೆಪಿಗೆ ದೊಡ್ಡ ಜಯವಾಗಿದೆ. ನಮ್ಮ ಬೇಡಿಕೆ ಈಡೇರಿದೆ. ನಾಗೇಂದ್ರ ರಾಜೀನಾಮೆ ಶತಸಿದ್ಧ. ಇದು ಬಿಜೆಪಿ ಗೆಲುವು. ನಮ್ಮ ಕಾರ್ಯಕರ್ತರ ಗೆಲುವು. ಹಾಗಾಗಿ ನಮಗೆ ಮತ್ತಷ್ಟು ಬಲಬಂದಂತಾಗಿದೆ. ಇದನ್ನು ನೋಡಿದರೆ ಮುಂದಿನ ಬಾರಿ ರಾಜ್ಯದಲ್ಲಿ NDA ಸರ್ಕಾರ ಬರಲಿದೆ ಎಂಬುದನ್ನು ತೋರುತ್ತದೆ ಎಂದರು.
ಇನ್ನು ನಾಗೇಂದ್ರ ರಾಜೀನಾಮೆಗೆ ಒತ್ತಾಯಿಸಿ ರಾಯಚೂರುನಿಂದ ಬಳ್ಳಾರಿವರೆಗೂ ಹಮ್ಮಿಕೊಂಡಿದ್ದ ಪಾದಯಾತ್ರೆ ವಿಚಾರವಾಗಿ ರಾಜ್ಯಾಧ್ಯಕ್ಷ ವಿಜಯೇಂದ್ರ ಜೊತೆ ಮಾತನಾಡಿ ನಿರ್ಧರಿಸುವುದಾಗಿ ಹೇಳಿದರು.

