HomeKarnatakaಶಾಸಕ ಎಸ್.ಆರ್.ಶ್ರೀನಿವಾಸ್ ಪುತ್ರನ ವಿವಾಹ: ರಾಜಕೀಯ ನಾಯಕರ ಶುಭ ಹಾರೈಕೆ

ಶಾಸಕ ಎಸ್.ಆರ್.ಶ್ರೀನಿವಾಸ್ ಪುತ್ರನ ವಿವಾಹ: ರಾಜಕೀಯ ನಾಯಕರ ಶುಭ ಹಾರೈಕೆ

ಗುಬ್ಬಿ ಕಾಂಗ್ರೆಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಮತ್ತು ತುಮಕೂರಿನ ಮಾಜಿ ಸಂಸದ ಪಿ. ಮುದ್ದಹನುಮೇಗೌಡ ಬೀಗರಾಗಿದ್ದಾರೆ. ಎಸ್.ಆರ್.ಶ್ರೀನಿವಾಸ್ ಪುತ್ರ ದುಷ್ಯಂತ್ ಮತ್ತು ಮುದ್ದಹನುಮೇಗೌಡ ಪುತ್ರಿ ರಚನಾ ವಿವಾಹ ಬೆಂಗಳೂರು ನಗರದಲ್ಲಿ ಗುರುವಾರ ನಡೆಯಿತು.

ಬೆಂಗಳೂರಿನ ಜಯಮಹಲ್ ಮುಖ್ಯ ರಸ್ತೆಯಲ್ಲಿರುವ ಚಾಮರವಜ್ರದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ರಾಜಕೀಯ ಮತ್ತು ಸಿನಿಮಾ ರಂಗದ ಅನೇಕ ಗಣ್ಯರು ಆಗಮಿಸಿ ನೂತನ ಜೋಡಿಗೆ ಶುಭ ಹಾರೈಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ನ ಉಷಾ ಜೊತೆಗೆ ಪಿ. ಮುದ್ದಹನುಮೇಗೌಡ ಅವರ ಪುತ್ರಿ ರಚನಾ ಎಂ. ಹಾಗೂ ಗುಬ್ಬಿ ಶಾಸಕ ಎಸ್ ಆರ್.ಶ್ರೀನಿವಾಸ್ ಪುತ್ರ ದುಷ್ಯಂತ್‌ ಅವರ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ವಧು-ವರರಿಗೆ ಶುಭ ಹಾರೈಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಚಿವರಾದ ಕೆ.ಜೆ.ಜಾರ್ಜ್, ಕಾಂಗ್ರೆಸ್ ನಾಯಕರಾದ ಉಮಾಪತಿ ಶ್ರೀನಿವಾಸ ಗೌಡ, ಕುಸುಮಾ ಹನುಂತರಾಯಪ್ಪ ಸೇರಿದಂತೆ ಹಲವಾರು ರಾಜಕೀಯ ನಾಯಕರು ವಿವಾಹಕ್ಕೆ ಆಗಮಿಸಿ ನೂತನ ಜೋಡಿಗೆ ಶುಭ ಕೋರಿದರು.

ನಟಿ ಆಶಿಕಾ ರಂಗನಾಥ್, ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿದಂತೆ ಚಿತ್ರರಂಗ ಹಲವಾರು ಗಣ್ಯರು ಸಹ ವಿವಾಹಕ್ಕೆ ಆಗಮಿಸಿದ್ದರು. ಎಸ್.ಆರ್.ಶ್ರೀನಿವಾಸ್ ಮತ್ತು ಪಿ. ಮುದ್ದಹನುಮೇಗೌಡ ತುಮಕೂರು ಜಿಲ್ಲೆಯ ಪ್ರಭಾವಿ ರಾಜಕೀಯ ನಾಯಕರಾಗಿದ್ದು, ಈಗ ಬೀಗರಾಗಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular