ಬಿಹಾರ: ರೈಲ್ವೆ ನಿಲ್ದಾಣಗಳಲ್ಲಿ ಚಿಲ್ಲರೆ ಹಣದ ವಿಷಯದಲ್ಲಿ ಪ್ರಯಾಣಿಕರಿಗೆ ಮೋಸ ಮಾಡುವುದು ಹೊಸದೇನಲ್ಲ. ಆದರೆ, ಬಿಹಾರದ ಆನಂದ್ ವಿಹಾರ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕ ಮಹಿಳೆಯೊಬ್ಬರು ತೋರಿದ ಜಾಗೃತಿಯಿಂದಾಗಿ ಭ್ರಷ್ಟ ಟಿಕೆಟ್ ಕ್ಲರ್ಕ್ ಒಬ್ಬ ಈಗ ಕೆಲಸ ಕಳೆದುಕೊಂಡಿದ್ದಾನೆ. ಮಹಿಳೆಯ ಜಾಣ್ಮೆ ಮತ್ತು ಸಾಮಾಜಿಕ ಜಾಲತಾಣದ ಶಕ್ತಿ ಈ ಭ್ರಷ್ಟಾಚಾರವನ್ನು ಬಯಲಿಗೆಳೆದಿದೆ.
ಏನಿದು ಘಟನೆ? (Clerk’s Trick)
ಟಿಕೆಟ್ ಖರೀದಿಸಲು ಕೌಂಟರ್‌ಗೆ ತೆರಳಿದ ಮಹಿಳೆಯೊಬ್ಬರು ₹1,000 ರೂ ನೀಡಿದ್ದರು. ಆದರೆ ಆ ಕ್ಲರ್ಕ್ ಮಾಡಿದ ಕೈಚಳಕ ಹೀಗಿತ್ತು:
ಮಹಿಳೆಗೆ ಮರಳಿ ನೀಡಿದ್ದು ಕೇವಲ ₹800 ಮಾತ್ರ.ಅಚ್ಚರಿಯೆಂದರೆ ಆತ ಹಣದ ಜೊತೆಗೆ ಟಿಕೆಟ್ ಅನ್ನೂ ನೀಡಿರಲಿಲ್ಲ,ಬಾಕಿ ಹಣ ಮತ್ತು ಟಿಕೆಟ್ ಕೇಳಿದ ಮಹಿಳೆಯನ್ನು ಆತ ಉದ್ಧಟತನದಿಂದ ಅಲ್ಲಿಂದ ಹೋಗುವಂತೆ ಗದರಿಸಿದ್ದಾನೆ.
ಮೊಬೈಲ್ ಕ್ಯಾಮೆರಾದಲ್ಲಿ ಭ್ರಷ್ಟಾಟ ಬಯಲು
ತನ್ನ ಮಾತಿಗೆ ಬೆಲೆ ಸಿಗದಿದ್ದಾಗ ಮಹಿಳೆ ಎದೆಗುಂದದೆ ತಕ್ಷಣವೇ ಮೊಬೈಲ್ ಕ್ಯಾಮೆರಾ ಆನ್ ಮಾಡಿದರು. ವಿಡಿಯೋ ಚಿತ್ರೀಕರಿಸುತ್ತಾ ಆತ ಮಾಡುತ್ತಿದ್ದ ವಂಚನೆಯನ್ನು ಧೈರ್ಯವಾಗಿ ಪ್ರಶ್ನಿಸಿದರು.
ನಾನು ಒಬ್ಬಳೇ ಬಂದಿರುವುದನ್ನು ನೋಡಿ ಈತ ನನ್ನನ್ನು ಸುಲಭವಾಗಿ ಏಮಾರಿಸಬಹುದು ಎಂದುಕೊಂಡಿದ್ದಾನೆ. ಇದು ಕೇವಲ ₹200 ಪ್ರಶ್ನೆಯಲ್ಲ, ಇದು ಘನತೆ ಮತ್ತು ಉತ್ತರದಾಯಿತ್ವದ ವಿಷಯ ಎಂದು ಅವರು ವಿಡಿಯೋದಲ್ಲಿ ಗುಡುಗಿದ್ದಾರೆ.
ನೆರವಿಗೆ ಬಾರದ ಸಹಾಯವಾಣಿ?
ಘಟನೆಯ ವೇಳೆ ಮಹಿಳೆ ಸಹಾಯಕ್ಕಾಗಿ 112 ಸಹಾಯವಾಣಿಗೆ ಕರೆ ಮಾಡಿದ್ದರೂ, ತಕ್ಷಣಕ್ಕೆ ಯಾವುದೇ ಸ್ಪಂದನೆ ಸಿಗಲಿಲ್ಲ ಎಂಬ ಅಸಮಾಧಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ. ಕೊನೆಗೆ ಸಾಮಾಜಿಕ ಜಾಲತಾಣವೇ ಅವರಿಗೆ ನ್ಯಾಯ ಒದಗಿಸಿಕೊಟ್ಟಿದೆ.
ರೈಲ್ವೆ ಇಲಾಖೆಯ ತ್ವರಿತ ಕ್ರಮ
ಈ ವಿಡಿಯೋ ಎಕ್ಸ್ (ಟ್ವಿಟ್ಟರ್) ನಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಉತ್ತರ ರೈಲ್ವೆಯ ದೆಹಲಿ ವಿಭಾಗವು ತಕ್ಷಣವೇ ಪ್ರತಿಕ್ರಿಯಿಸಿದೆ:
ವಿಡಿಯೋದಲ್ಲಿರುವ ಬುಕ್ಕಿಂಗ್ ಕ್ಲರ್ಕ್‌ನನ್ನು ಗುರುತಿಸಿ ತಕ್ಷಣವೇ ಅಮಾನತು (Suspension) ಮಾಡಲಾಗಿದೆ.
ಆತನ ವಿರುದ್ಧ ಇಲಾಖಾ ಮಟ್ಟದ ಶಿಸ್ತು ಕ್ರಮಗಳನ್ನು ಜಾರಿಗೊಳಿಸಲಾಗಿದೆ.

