HomeKarnatakaಆಡಳಿತ ಯಂತ್ರಕ್ಕೆ ಸಿಎಂ ಡಿಕೆಶಿ ಮೇಜರ್ ಸರ್ಜರಿ :ಕರ್ನಾಟಕದಲ್ಲಿ ಬರೋಬ್ಬರಿ 87 KAS ಅಧಿಕಾರಿಗಳ ವರ್ಗಾವಣೆ

ಆಡಳಿತ ಯಂತ್ರಕ್ಕೆ ಸಿಎಂ ಡಿಕೆಶಿ ಮೇಜರ್ ಸರ್ಜರಿ :ಕರ್ನಾಟಕದಲ್ಲಿ ಬರೋಬ್ಬರಿ 87 KAS ಅಧಿಕಾರಿಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಸರ್ಕಾರವು ಆಡಳಿತಾತ್ಮಕ ಹಿತದೃಷ್ಟಿಯಿಂದ ಕರ್ನಾಟಕ ಆಡಳಿತ ಸೇವೆ (ಕೆಎಎಸ್) ವೃಂದದ ಒಟ್ಟು 87 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಡಿಪಿಎಆರ್) ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದ್ದು, ಹಿರಿಯ ಹಾಗೂ ಕಿರಿಯ ಶ್ರೇಣಿಯ ಅಧಿಕಾರಿಗಳಿಗೆ ಹೊಸ ಜವಾಬ್ದಾರಿಗಳನ್ನು ನೀಡಲಾಗಿದೆ.

ಮೊದಲ ಅಧಿಸೂಚನೆಯಲ್ಲಿ 14 ಪ್ರಮುಖ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ ನೀಡಲಾಗಿದೆ. ಎರಡನೇ ಅಧಿಸೂಚನೆಯಲ್ಲಿ ತಹಶೀಲ್ದಾರ್ ಹುದ್ದೆಯಿಂದ ಕೆಎಎಸ್ ಕಿರಿಯ ಶ್ರೇಣಿಗೆ ಬಡ್ತಿ ಹೊಂದಿದವರು ಸೇರಿದಂತೆ 69 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಆದೇಶಗಳು ತಕ್ಷಣದಿಂದ ಜಾರಿಗೆ ಬರುವಂತೆ ಸೂಚಿಸಲಾಗಿದೆ.

ಅಪರ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಮಹಾನಗರ ಪಾಲಿಕೆಗಳ ವಲಯ ಜಂಟಿ ಆಯುಕ್ತರು, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ವಿಶೇಷ ಭೂಸ್ವಾಧೀನಾಧಿಕಾರಿಗಳು ಸೇರಿದಂತೆ ಹಲವು ಹುದ್ದೆಗಳಲ್ಲಿ ಬದಲಾವಣೆ ಮಾಡಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಮುಖ ಅಧಿಕಾರಿಗಳ ವರ್ಗಾವಣೆ ವಿವರ

1. ಬಿಡಿಎ ಉತ್ತರ ವಲಯಕ್ಕೆ ಸತೀಶ್ ಕುಮಾರ್ ಎಂ.

ಬೆಳಗಾವಿಯ ಮಲಪ್ರಭಾ-ಘಟಪ್ರಭಾ ಯೋಜನೆಯ ಕಾಡಾ ಆಡಳಿತಾಧಿಕಾರಿಯಾಗಿದ್ದ ಸತೀಶ್ ಕುಮಾರ್ ಎಂ. ಅವರನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಉತ್ತರ ವಲಯದ ಕಂದಾಯ ಹೆಚ್ಚುವರಿ ಆಯುಕ್ತರನ್ನಾಗಿ ನೇಮಿಸಲಾಗಿದೆ. ಅವರ ಸ್ಥಾನಕ್ಕೆ ಸಿದ್ರಾಮಪ್ಪ ಶ್ರೀಶೈಲ ಬಿರಾದಾರ ಅವರನ್ನು ವರ್ಗಾಯಿಸಲಾಗಿದೆ.

2. ಅಪರ ಜಿಲ್ಲಾಧಿಕಾರಿಗಳ ಹುದ್ದೆಗಳಲ್ಲಿ ಬದಲಾವಣೆ

ರಾಯಚೂರು ಅಪರ ಜಿಲ್ಲಾಧಿಕಾರಿಯಾಗಿದ್ದ ಶಿವಪ್ಪ ಯಲ್ಲಪ್ಪ ಭಜಂತ್ರಿ ಅವರನ್ನು ಧಾರವಾಡದ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಆಡಳಿತಾಧಿಕಾರಿಯಾಗಿ ನೇಮಿಸಲಾಗಿದೆ. ಜಮಖಂಡಿಯ ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವರಾಗಿದ್ದ ಸೋಮಲಿಂಗ ಗೋಪಾಲ ಗೆಣ್ಣೂರ ಅವರನ್ನು ರಾಯಚೂರು ಅಪರ ಜಿಲ್ಲಾಧಿಕಾರಿಯಾಗಿ ನಿಯೋಜಿಸಲಾಗಿದೆ.

ಮಂಗಳೂರು ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿಯಾಗಿದ್ದ ಜಯಲಕ್ಷ್ಮೀ ಅವರನ್ನು ಕೊಡಗು ಅಪರ ಜಿಲ್ಲಾಧಿಕಾರಿಯಾಗಿ ನೇಮಿಸಲಾಗಿದೆ. ಮಂಜುನಾಥ ಡೊಂಬರ ಅವರಿಗೆ ಬಾಗಲಕೋಟೆ ಅಪರ ಜಿಲ್ಲಾಧಿಕಾರಿ ಜವಾಬ್ದಾರಿ ನೀಡಲಾಗಿದೆ. ಸಿ.ವಿ. ರಾಮನ್ ನಗರ ವಲಯದ ಜಂಟಿ ಆಯುಕ್ತರಾಗಿದ್ದ ಕೆ. ರಂಗನಾಥ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

3. ಕೆಎಸ್‌ಡಿಎಲ್‌ಗೆ ಬಿನೋಯ್ ಬಿ.ಕೆ.

ರಾಮನಗರ ಉಪ ವಿಭಾಗಾಧಿಕಾರಿಯಾಗಿದ್ದ ಬಿನೋಯ್ ಬಿ.ಕೆ. ಅವರನ್ನು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್) ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿಯೋಜಿಸಲಾಗಿದೆ. ಕೆಎಸ್‌ಡಿಎಲ್ ಪ್ರಧಾನ ವ್ಯವಸ್ಥಾಪಕರಾಗಿದ್ದ ಶೋಭಿತ ಆರ್. ಅವರನ್ನು ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

4. ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಬದಲಾವಣೆ

ಬೆಂಗಳೂರು ನಗರ ಪಾಲಿಕೆಗಳ ವಲಯ ಜಂಟಿ ಆಯುಕ್ತರ ಹುದ್ದೆಗಳಲ್ಲಿಯೂ ಬದಲಾವಣೆ ಮಾಡಲಾಗಿದೆ.

ಡಾ. ಶೃತಿ ಎಂ.ಕೆ. – ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವಲಯ ಜಂಟಿ ಆಯುಕ್ತರು

ಸಪ್ತಶ್ರೀ ಬಿ.ಕೆ. – ಬೆಂಗಳೂರು ಕೇಂದ್ರ ನಗರ ಪಾಲಿಕೆ ವಲಯ ಜಂಟಿ ಆಯುಕ್ತರು

ವಿವೇಕಾನಂದ ಪಿ. – ಬೆಂಗಳೂರು ದಕ್ಷಿಣ ನಗರ ಪಾಲಿಕೆ ವಲಯ ಜಂಟಿ ಆಯುಕ್ತರು

ಎ. ಕವಿತಾ – ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನ ಕಾರ್ಯಾಚರಣೆ ನಿರ್ದೇಶಕರು

5. ಬೆಸ್ಕಾಂಗೆ ರಶ್ಮಿ ಎಸ್.ಆರ್.

ಕುಂದಾಪುರ ಉಪ ವಿಭಾಗಾಧಿಕಾರಿಯಾಗಿದ್ದ ರಶ್ಮಿ ಎಸ್.ಆರ್. ಅವರನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ (ಬೆಸ್ಕಾಂ) ಆಡಳಿತ ಮತ್ತು ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕರನ್ನಾಗಿ ವರ್ಗಾಯಿಸಲಾಗಿದೆ.

ಉಪ ವಿಭಾಗಾಧಿಕಾರಿಗಳ ಹುದ್ದೆಗಳಲ್ಲೂ ಬದಲಾವಣೆ

ರಾಜ್ಯದ ಹಲವು ಉಪ ವಿಭಾಗಗಳಿಗೆ ಹೊಸ ಸಹಾಯಕ ಆಯುಕ್ತರನ್ನು ನೇಮಿಸಲಾಗಿದೆ.

ರಾಮನಗರ: ಮಡಿಕೇರಿ ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ

ಮಡಿಕೇರಿ: ಗದಗ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ

ಕುಂದಾಪುರ: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನಾಧಿಕಾರಿ ಮಹೇಶ್ ಪಿ.ಎಸ್.

ಕುಮಟಾ: ಮುಕುಂದಸ್ವಾಮಿ ಆರ್.ಜಿ.

ಪಾಂಡವಪುರ: ಎಂ. ಶಿವಮೂರ್ತಿ

ಮಂಡ್ಯ: ಶಂಕರಪ್ಪ ಜಿ.ಎಸ್.

ಕೊಪ್ಪಳ: ಪ್ರಕಾಶ್ ಎಂ. ನಾಶಿ

ಬೆಳಗಾವಿ: ಬಸವರಾಜ್ ನಾಗರಾಳ

ಇದರ ಜೊತೆಗೆ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಹಾಗೂ ದಾವಣಗೆರೆ ಮಹಾನಗರ ಪಾಲಿಕೆಗಳ ವಲಯ ಆಯುಕ್ತರ ಹುದ್ದೆಗಳು ಸೇರಿದಂತೆ ವಿವಿಧ ಜಿಲ್ಲಾ ಪಂಚಾಯಿತಿಗಳು, ವಿಶ್ವವಿದ್ಯಾಲಯಗಳು, ವೈದ್ಯಕೀಯ ಕಾಲೇಜುಗಳು ಮತ್ತು ಭೂಸ್ವಾಧೀನ ವಿಭಾಗಗಳಲ್ಲಿಯೂ ಅಧಿಕಾರಿಗಳ ಬದಲಾವಣೆ ಮಾಡಲಾಗಿದೆ.

ಕೆಎಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ

1. ಸತೀಶ್ ಕುಮಾರ್ ಎಂ. – ಕಾಡಾ ಆಡಳಿತಾಧಿಕಾರಿ, ಬೆಳಗಾವಿ → ಹೆಚ್ಚುವರಿ ಆಯುಕ್ತರು (ಕಂದಾಯ), ಉತ್ತರ ವಲಯ, ಗ್ರೇಟರ್ ಬೆಂಗಳೂರು ಪ್ರಾಧಿಕಾರ.

2. ಸಿದ್ದರಾಮಪ್ಪ ಶೈಲ ಬಿರಾದಾರ – ಸ್ಥಳ ನಿರೀಕ್ಷಣೆ → ಕಾಡಾ ಆಡಳಿತಾಧಿಕಾರಿ, ಮಲಪ್ರಭಾ-ಘಟಪ್ರಭಾ ಯೋಜನೆ, ಬೆಳಗಾವಿ.

3. ಶಿವಪ್ಪ ಯಲ್ಲಪ್ಪ ಭಜಂತ್ರಿ – ಅಪರ ಜಿಲ್ಲಾಧಿಕಾರಿ, ರಾಯಚೂರು → ಮುಖ್ಯ ಆಡಳಿತಾಧಿಕಾರಿ, ಕರ್ನಾಟಕ ನೀರಾವರಿ ನಿಗಮ, ಧಾರವಾಡ.

4. ಸೋಮಲಿಂಗ ಗೋಪಾಲ ಗೆಣ್ಣೂರ – ಕುಲಸಚಿವರು, ಬಾಗಲಕೋಟೆ ವಿಶ್ವವಿದ್ಯಾಲಯ, ಜಮಖಂಡಿ → ಅಪರ ಜಿಲ್ಲಾಧಿಕಾರಿ, ರಾಯಚೂರು.

5. ತಬಸ್ಸುಮ್ ಜಹೇರಾ – ಸಾರ್ವಜನಿಕ ಸಂಪರ್ಕಾಧಿಕಾರಿ, ತುಮಕೂರು ಮಹಾನಗರ ಪಾಲಿಕೆ → ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ತುಮಕೂರು.

6. ಕೆ. ರಂಗನಾಥ್ – ಜಂಟಿ ಆಯುಕ್ತರು, ಸಿ.ವಿ. ರಾಮನ್ ನಗರ ವಲಯ, ಬೆಂಗಳೂರು → ಅಪರ ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ.

7. ಜಯಲಕ್ಷ್ಮಿ – ಉಪ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಮಂಗಳೂರು → ಅಪರ ಜಿಲ್ಲಾಧಿಕಾರಿ, ಕೊಡಗು.

8. ಬಿನೋಯ್ ಬಿ.ಕೆ. – ಉಪ ವಿಭಾಗಾಧಿಕಾರಿ, ರಾಮನಗರ → ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್), ಬೆಂಗಳೂರು.

9. ನಿತಿನ್ ಚಕ್ಕಿ – ಉಪ ವಿಭಾಗಾಧಿಕಾರಿ, ಮಡಿಕೇರಿ → ಉಪ ವಿಭಾಗಾಧಿಕಾರಿ, ರಾಮನಗರ.

10. ಬಸನಗೌಡ ಕೋಟೂರ – ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ಗದಗ → ಉಪ ವಿಭಾಗಾಧಿಕಾರಿ, ಮಡಿಕೇರಿ.

11. ಮಹೇಶ್ ಪಿ.ಎಸ್. – ವಿಶೇಷ ಭೂಸ್ವಾಧೀನಾಧಿಕಾರಿ, ಮುಡಾ, ಮೈಸೂರು → ಉಪ ವಿಭಾಗಾಧಿಕಾರಿ, ಕುಂದಾಪುರ.

12. ಶೋಭಿತ ಆರ್. – ಪ್ರಧಾನ ವ್ಯವಸ್ಥಾಪಕರು, ಕೆಎಸ್‌ಡಿಎಲ್, ಬೆಂಗಳೂರು → ಉಪ ವಿಭಾಗಾಧಿಕಾರಿ, ಚಿಕ್ಕಬಳ್ಳಾಪುರ.

13. ಮುಕುಂದಸ್ವಾಮಿ ಆರ್.ಜಿ. – ವಿಶೇಷ ಭೂಸ್ವಾಧೀನಾಧಿಕಾರಿ, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್, ಬಿಡಿಎ → ಉಪ ವಿಭಾಗಾಧಿಕಾರಿ, ಕುಮಟಾ.

14. ಎಂ. ಶಿವಮೂರ್ತಿ – ಉಪ ವಿಭಾಗಾಧಿಕಾರಿ, ಮಂಡ್ಯ → ಉಪ ವಿಭಾಗಾಧಿಕಾರಿ, ಪಾಂಡವಪುರ.

ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿಗಳ ವರ್ಗಾವಣೆ ಪಟ್ಟಿ

1. ಶ್ರವಣ ನಾಯಕ್ – ಉಪ ವಿಭಾಗಾಧಿಕಾರಿ, ಬೆಳಗಾವಿ → ಕುಲಸಚಿವರು (ಆಡಳಿತ), ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

2. ಮಂಜುನಾಥ ಡೊಂಬರ – ವಿಶೇಷ ಭೂಸ್ವಾಧೀನಾಧಿಕಾರಿ, ಕೆಐಎಡಿಬಿ, ಧಾರವಾಡ → ಅಪರ ಜಿಲ್ಲಾಧಿಕಾರಿ, ಬಾಗಲಕೋಟೆ.

3. ಡಾ. ಶ್ರುತಿ ಎಂ.ಕೆ. – ವಿಶೇಷ ಭೂಸ್ವಾಧೀನಾಧಿಕಾರಿ-1, ಬಿಡಿಎ → ವಲಯ ಜಂಟಿ ಆಯುಕ್ತರು, ಪಶ್ಚಿಮ ನಗರ ಪಾಲಿಕೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ.

4. ಸಪ್ತಶ್ರೀ ಬಿ.ಕೆ. – ಉಪ ವಿಭಾಗಾಧಿಕಾರಿ, ತಿಪಟೂರು → ವಲಯ ಜಂಟಿ ಆಯುಕ್ತರು, ಕೇಂದ್ರ ನಗರ ಪಾಲಿಕೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ.

5. ವಿವೇಕಾನಂದ ಪಿ. – ಉಪ ವಿಭಾಗಾಧಿಕಾರಿ, ಹೊಸಪೇಟೆ → ವಲಯ ಜಂಟಿ ಆಯುಕ್ತರು, ದಕ್ಷಿಣ ನಗರ ಪಾಲಿಕೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ.

6. ಮಧು ಎನ್.ಎನ್. – ವಲಯ ಜಂಟಿ ಆಯುಕ್ತರು, ದಕ್ಷಿಣ ನಗರ ಪಾಲಿಕೆ → ನಿರ್ದೇಶಕರು (ಕಾರ್ಯಾಚರಣೆ), ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಬೆಂಗಳೂರು.

7. ರಶ್ಮಿ ಎಸ್.ಆರ್. – ಉಪ ವಿಭಾಗಾಧಿಕಾರಿ, ಕುಂದಾಪುರ → ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಮಾನವ ಸಂಪನ್ಮೂಲ), ಬೆಸ್ಕಾಂ, ಬೆಂಗಳೂರು.

8. ಮೆಹಬೂಬ್ ಜಿಲ್ಯಾನಿ – ಉಪ ವಿಭಾಗಾಧಿಕಾರಿ, ಕೊಪ್ಪಳ → ವಲಯ ಆಯುಕ್ತರು-3, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ.

9. ಅಶ್ವಿನ್ ಡಿ.ಹೆಚ್. – ಉಪ ವಿಭಾಗಾಧಿಕಾರಿ, ಚಿಕ್ಕಬಳ್ಳಾಪುರ → ಸಹಾಯಕ ಆಯುಕ್ತರು (ಭೂಸ್ವಾಧೀನ), ಗ್ರೇಟರ್ ಬೆಂಗಳೂರು ಪ್ರಾಧಿಕಾರ.

10. ದಯಾನಂದ್ ಬಿ.ಆರ್. – ಪ್ರಧಾನ ವ್ಯವಸ್ಥಾಪಕರು, ಬೆಸ್ಕಾಂ → ಪ್ರಜಾಸೇವಾ ಇಲಾಖೆಯ ಹೊಸ ಹುದ್ದೆಗೆ ವರದಿ.

11. ಚಿದಂಬರ ಶೇಷಗಿರಿ ರಾವ್ ಕುಲಕರ್ಣಿ – ತಹಶೀಲ್ದಾರ್, ಹುಬ್ಬಳ್ಳಿ ನಗರ → ವಲಯ ಆಯುಕ್ತರು-1, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ.

12. ಎಸ್. ಎಸ್. ನಾಯಕಲಮರ – ನಗರ ತಹಶೀಲ್ದಾರ್, ವಿಜಯಪುರ → ಸಹಾಯಕ ವಿಶೇಷ ಭೂಸ್ವಾಧೀನಾಧಿಕಾರಿ, ಯುಕೆಪಿ, ಜಮಖಂಡಿ.

13. ಪ್ರಕಾಶ್ ಎಂ. ನಾಶಿ – ತಹಶೀಲ್ದಾರ್, ಯಲಬುರ್ಗಾ → ಉಪ ವಿಭಾಗಾಧಿಕಾರಿ, ಕೊಪ್ಪಳ.

14. ಬಸವರಾಜ್ ನಾಗರಾಳ – ಉಪ ಪ್ರಾಂಶುಪಾಲರು, ಡಿಟಿಐ, ಬೆಳಗಾವಿ → ಉಪ ವಿಭಾಗಾಧಿಕಾರಿ, ಬೆಳಗಾವಿ.

15. ಶಂಕರ ಗೌಡ – ಶಿಷ್ಟಾಚಾರ ತಹಶೀಲ್ದಾರ್, ಬೆಳಗಾವಿ → ಆಯುಕ್ತರು, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ.

16. ಅಣ್ಣಾರಾವ್ – ತಹಶೀಲ್ದಾರ್, ಆಳಂದ → ವಿಶೇಷ ಭೂಸ್ವಾಧೀನಾಧಿಕಾರಿ, ಕಾರಂಜಾ ಯೋಜನೆ, ಬೀದರ್.

17. ನಾಗವೇಣಿ – ತಹಶೀಲ್ದಾರ್, ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನ ಕಚೇರಿ, ಚಿತ್ರದುರ್ಗ → ಪೌರಾಯುಕ್ತರು, ಚಳ್ಳಕೆರೆ ನಗರಸಭೆ.

18. ಕವಿತಾ ಆರ್. – ತಹಶೀಲ್ದಾರ್, ಹಗರಿಬೊಮ್ಮನಹಳ್ಳಿ → ಆಯುಕ್ತರು, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರ.

19. ಶಂಕರಪ್ಪ ಜಿ.ಎಸ್. – ತಹಶೀಲ್ದಾರ್, ಚನ್ನರಾಯಪಟ್ಟಣ → ಉಪ ವಿಭಾಗಾಧಿಕಾರಿ, ಮಂಡ್ಯ.

20. ನರಸಿಂಹಮೂರ್ತಿ ಟಿ.ಎನ್. – ಕಚೇರಿ ಸಹಾಯಕರು, ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಕಚೇರಿ → ಸಹಾಯಕ ಆಯುಕ್ತರು (ಚುನಾವಣೆ), ಗ್ರೇಟರ್ ಬೆಂಗಳೂರು ಪ್ರಾಧಿಕಾರ.

21. ರೇಣುಕಮ್ಮ – ವಿಶೇಷ ತಹಶೀಲ್ದಾರ್, ಯಲಹಂಕ → ಸಹಾಯಕ ಆಯುಕ್ತರು (ನೇಮಕಾತಿ ಮತ್ತು ವಿಚಾರಣೆ), ಗ್ರೇಟರ್ ಬೆಂಗಳೂರು ಪ್ರಾಧಿಕಾರ.

22. ಪ್ರಿಯಾಂಕಾ ಬಿ.ಎನ್. – ಸಹಾಯಕ ನಿರ್ದೇಶಕರು, ಕಂದಾಯ ಆಯುಕ್ತಾಲಯ → ಯೋಜನಾ ನಿರ್ದೇಶಕರು-2, ಐಪಿಜಿಆರ್‌ಎಸ್, ಪ್ರಜಾಸೇವಾ ಇಲಾಖೆ.

23. ನಯನಾ ಎಂ. – ಆಸ್ತಿ ಅಧಿಕಾರಿ, ಬಿಎಂಟಿಸಿ → ಯೋಜನಾ ನಿರ್ದೇಶಕರು-1, ಐಪಿಜಿಆರ್‌ಎಸ್, ಪ್ರಜಾಸೇವಾ ಇಲಾಖೆ.

24. ಶಿವರಾಜು ಟಿ.ಎಸ್. – ತಹಶೀಲ್ದಾರ್, ರಾಷ್ಟ್ರೀಯ ಹೆದ್ದಾರಿ ವಿಶೇಷ ಭೂಸ್ವಾಧೀನ ಕಚೇರಿ, ಬೆಂಗಳೂರು → ಪ್ರಜಾಸೇವಾ ಇಲಾಖೆಯ ಹೊಸ ಹುದ್ದೆಗೆ ವರದಿ.

25. ವಿನಯ್ ಕುಮಾರ್ ಕುಲಕರ್ಣಿ – ಸ್ಥಳ ನಿರೀಕ್ಷಣೆ → ಉಪ ಪ್ರಧಾನ ವ್ಯವಸ್ಥಾಪಕರು (LA&E), ಬೆಂಗಳೂರು ಮೆಟ್ರೋ ರೈಲು ನಿಗಮ.

26. ಎಲ್. ಎಸ್. ರಮೇಶ್ – ಕಚೇರಿ ಸಹಾಯಕರು, ಹಾಸನ ಜಿಲ್ಲಾಧಿಕಾರಿ ಕಚೇರಿ → ಮುಖ್ಯ ಆಡಳಿತಾಧಿಕಾರಿ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ.

27. ಎಲ್. ಜಯಣ್ಣ – ತಹಶೀಲ್ದಾರ್, ರಾಮನಗರ → ಸಹಾಯಕ ಕಾರ್ಯದರ್ಶಿ (ಆಡಳಿತ), ಜಿಲ್ಲಾ ಪಂಚಾಯಿತಿ, ಮಂಡ್ಯ.

28. ಸುರೇಶ್ ಎನ್. ಚವಲರ – ತಹಶೀಲ್ದಾರ್, ಟಿಕೋಟಾ → ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಬಾಗಲಕೋಟೆ.

29. ಶಶಿಧರ ಜಿ. ಮಾದ್ಯಾಳ್ – ತಹಶೀಲ್ದಾರ್, ಆನೇಕಲ್ → ಸಹಾಯಕ ಆಯುಕ್ತರು (ಜಾರಿ), ಬಿಡಿಎ.

30. ಪರಿಮಳಾ ಕೆ. ದೇಶಪಾಂಡೆ – ತಹಶೀಲ್ದಾರ್, ಚಿಕ್ಕೋಡಿ → ಮುಖ್ಯ ಆಡಳಿತಾಧಿಕಾರಿ, ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ.

31. ಮಹೇಂದ್ರ ಎ. ಹೆಚ್. – ತಹಶೀಲ್ದಾರ್, ಮುಖ್ಯ ಚುನಾವಣಾಧಿಕಾರಿಗಳ ಕಚೇರಿ, ಬೆಂಗಳೂರು → ಜಂಟಿ ನಿರ್ದೇಶಕರು (ಆಡಳಿತ), ಪದವಿ ಪೂರ್ವ ಶಿಕ್ಷಣ ಇಲಾಖೆ.

32. ಮಲ್ಲಿಕಾರ್ಜುನ ಹೆಗ್ಗಣ್ಣವರ್ – ತಹಶೀಲ್ದಾರ್, ಸವದತ್ತಿ → ವಲಯ ಆಯುಕ್ತರು-2, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ.

33. ಮಂಜುನಾಥ್ ಮುನ್ನೋಳಿ – ತಹಶೀಲ್ದಾರ್, ಜೋಯಿಡಾ → ವಲಯ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ.

34. ಮೋಹನ್ ಭಾಸ್ಮೆ – ತಹಶೀಲ್ದಾರ್, ಗೋಕಾಕ್ → ವಲಯ ಆಯುಕ್ತರು, ಬೆಳಗಾವಿ ಮಹಾನಗರ ಪಾಲಿಕೆ.

35. ಮಹಾಬಲೇಶ್ವರ ಎಸ್. – ತಹಶೀಲ್ದಾರ್, ಕಂದಾಯ ಆಯುಕ್ತಾಲಯ → ಸಹಾಯಕ ಆಯುಕ್ತರು, ಬಾಡಿಗೆ ನಿಯಂತ್ರಣ ಅಧಿಕಾರಿ, ಕಂದಾಯ ಆಯುಕ್ತಾಲಯ.

36. ಬಸವರಾಜು ಐ.ಇ. – ತಹಶೀಲ್ದಾರ್, ಕೊಳ್ಳೇಗಾಲ → ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಕೊಡಗು.

37. ಶ್ರೀಮತಿ ಶಿಲ್ಪ ಎ. – ಸ್ಥಳ ನಿರೀಕ್ಷಣೆ → ವಿಶೇಷ ಭೂಸ್ವಾಧೀನಾಧಿಕಾರಿ, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-3, ಬಿಡಿಎ.

38. ಶಿರೀನ್ ತಾಜ್ – ತಹಶೀಲ್ದಾರ್, ಬಿಎಂಬಿ, ಬೆಂಗಳೂರು → ಉಪ ನಿರ್ದೇಶಕರು (ಕಾರ್ಯಾಚರಣೆ), ರಾಷ್ಟ್ರೀಯ ಜೀವನೋಪಾಯ ಯೋಜನೆ.

39. ಸಿದ್ಧರಾಯ ಜಟೇಪ್ಪ ಭೋಸಗಿ – ತಹಶೀಲ್ದಾರ್, ಅಥಣಿ → ಪುನರ್ವಸತಿ ಅಧಿಕಾರಿ, ಯುಕೆಪಿ, ಬಾಗಲಕೋಟೆ.

40. ತೇಜಸ್ವಿನಿ ಬಿ. – ತಹಶೀಲ್ದಾರ್, ರಾಮನಗರ → ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ-275, ಮಂಡ್ಯ.

41. ಸಂತೋಷ್ ಕುಮಾರ್ ಎಂ.ಜಿ. – ತಹಶೀಲ್ದಾರ್, ಅರಸೀಕೆರೆ → ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಹಿರಿಯೂರು.

42. ಮೇಘನಾ ಜಿ. – ತಹಶೀಲ್ದಾರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ → ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಕೋಲಾರ.

43. ಮಮತಾ ಎಂ. – ತಹಶೀಲ್ದಾರ್, ಚಿಕ್ಕನಾಯಕನಹಳ್ಳಿ → ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಚಿತ್ರದುರ್ಗ.

44. ಅನಿತಾ ಲಕ್ಷ್ಮಿ ಎಸ್. – ಉಪ ಪ್ರಾಂಶುಪಾಲರು, ಡಿಟಿಐ, ತುಮಕೂರು → ವಿಶೇಷ ಭೂಸ್ವಾಧೀನಾಧಿಕಾರಿ, ಬೆಂಗಳೂರು ಬ್ಯುಸಿನೆಸ್ ಕಾರಿಡಾರ್-5, ಬಿಡಿಎ.

45. ನಾಗಯ್ಯ – ತಹಶೀಲ್ದಾರ್, ಚಿತ್ತಾಪುರ → ವಿಶೇಷ ಭೂಸ್ವಾಧೀನಾಧಿಕಾರಿ, ಮುನಿರಾಬಾದ್-ಮೆಹಬೂಬ್‌ನಗರ ರೈಲ್ವೆ ಯೋಜನೆ, ಸಿಂಧನೂರು.

46. ದಾಸರ ಸಂಜೀವ ಕುಮಾರ್ – ತಹಶೀಲ್ದಾರ್, ಅಫಜಲಪುರ → ಪುನರ್ವಸತಿ ಅಧಿಕಾರಿ, ಯುಕೆಪಿ, ಆಲಮಟ್ಟಿ.

47. ಅನಿಲ್ ಕುಮಾರ್ ಜಿ. – ತಹಶೀಲ್ದಾರ್, ಸಂಡೂರು → ಸಹಾಯಕ ಕಾರ್ಯದರ್ಶಿ-2, ಜಿಲ್ಲಾ ಪಂಚಾಯಿತಿ, ವಿಜಯನಗರ.

48. ನೈಯಮುನಿಸ್ಸಾ ಆರ್. – ತಹಶೀಲ್ದಾರ್, ರಾಜ್ಯ ಚುನಾವಣಾ ಆಯೋಗ, ಬೆಂಗಳೂರು → ಸಹಾಯಕ ಕಾರ್ಯದರ್ಶಿ, ಬಿಎಂಬಿ, ಬೆಂಗಳೂರು.

49. ಶ್ರುತಿ ಕೆ. – ವಿಶೇಷ ತಹಶೀಲ್ದಾರ್, ರೈಲ್ವೆ ಯೋಜನೆ ವಿಶೇಷ ಭೂಸ್ವಾಧೀನ ಕಚೇರಿ, ಸಿಂಧನೂರು → ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ರಾಯಚೂರು.

50. ವಿಶ್ವೇಶ್ವರ ರೆಡ್ಡಿ ವಿ. – ತಹಶೀಲ್ದಾರ್, ಭೂಮಿ/ಯುಪಿಆರ್, ಬೆಂಗಳೂರು → ಸಹಾಯಕ ಆಯುಕ್ತರು, ಭೂಮಿ ಮೇಲ್ವಿಚಾರಣೆ ಕೋಶ, ಕಂದಾಯ ಆಯುಕ್ತಾಲಯ.

51. ರಶ್ಮಿ ಹೆಚ್.ಜಿ. – ತಹಶೀಲ್ದಾರ್, ತರೀಕೆರೆ → ಸಹಾಯಕ ಕಾರ್ಯದರ್ಶಿ (ಅಭಿವೃದ್ಧಿ), ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು.

52. ಸಾವಿತ್ರಿ – ಸ್ಥಳ ನಿರೀಕ್ಷಣೆ → ಸಾರ್ವಜನಿಕ ಸಂಪರ್ಕಾಧಿಕಾರಿ, ಕಲಬುರಗಿ ಮಹಾನಗರ ಪಾಲಿಕೆ.

53. ಸುರೇಶ್ – ತಹಶೀಲ್ದಾರ್, ರಾಯಚೂರು → ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣಾ ಮೇಲ್ದಂಡೆ ಯೋಜನೆ, ದೇವದುರ್ಗ.

54. ಆರತಿ ಬಿ. – ತಹಶೀಲ್ದಾರ್, ಗುಬ್ಬಿ → ವಲಯ ಆಯುಕ್ತರು-1, ದಾವಣಗೆರೆ ಮಹಾನಗರ ಪಾಲಿಕೆ.

55. ಮಂಜುಳಾ ಡಿ.ಒ. – ತಹಶೀಲ್ದಾರ್, ಸುಳ್ಯ → ವಲಯ ಆಯುಕ್ತರು-2, ಮಂಗಳೂರು ಮಹಾನಗರ ಪಾಲಿಕೆ.

56. ಸಂತೋಷ್ ರಾಣಿ – ತಹಶೀಲ್ದಾರ್, ರಾಯಚೂರು ನಗರ ಪಾಲಿಕೆಗಳು → ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಕಲಬುರಗಿ.

57. ಮಧುರಾಜ್ – ತಹಶೀಲ್ದಾರ್, ಬೆಂಗಳೂರು ಉತ್ತರ → ಸಹಾಯಕ ಆಯುಕ್ತರು, ಜಾರಿ, ಅಭಿಯೋಜನೆ ಮತ್ತು ಕಾನೂನು ವಿಭಾಗ, ಕಂದಾಯ ಆಯುಕ್ತಾಲಯ.

58. ನೀಲಪ್ರಭಾ – ತಹಶೀಲ್ದಾರ್, ಶಹಾಬಾದ್ → ಮುಖ್ಯ ಆಡಳಿತಾಧಿಕಾರಿ, ಕಲಬುರಗಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ.

59. ಯಲ್ಲಪ್ಪ ಗೊನೆನ್ನವರ್ – ತಹಶೀಲ್ದಾರ್, ಶಿಗ್ಗಾಂವಿ → ಸಹಾಯಕ ಕಾರ್ಯದರ್ಶಿ (ಆಡಳಿತ), ಜಿಲ್ಲಾ ಪಂಚಾಯಿತಿ, ಬೆಳಗಾವಿ.

60. ಗೋವಿಂದರಾಜು ಬಿ.ಎಂ. – ತಹಶೀಲ್ದಾರ್, ಚಿತ್ರದುರ್ಗ → ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಹಾಸನ.

61. ಅಂಜುಂ ತಬಸ್ಸುಮ್ ಲಫ್ತರಿ – ತಹಶೀಲ್ದಾರ್, ಜೇವರ್ಗಿ → ವಿಶೇಷ ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕಲಬುರಗಿ.

62. ದೊಡ್ಡಪ್ಪ ಹುಗಾರ್ – ತಹಶೀಲ್ದಾರ್, ಅಣ್ಣಿಗೇರಿ/ಅಳ್ನಾವರ → ವಲಯ ಆಯುಕ್ತರು-3, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ.

63. ಗಣಪತಿ ಶಾಸ್ತ್ರಿ – ತಹಶೀಲ್ದಾರ್, ಜಾಗೃತ ದಳ ಮತ್ತು ಕಾನೂನು ವಿಭಾಗ, ಕಂದಾಯ ಆಯುಕ್ತಾಲಯ → ಸಹಾಯಕ ಆಯುಕ್ತರು, ಜಾರಿ, ಅಭಿಯೋಜನೆ ಮತ್ತು ಕಾನೂನು ವಿಭಾಗ, ಕಂದಾಯ ಆಯುಕ್ತಾಲಯ.

64. ನಿಂಗಪ್ಪ – ತಹಶೀಲ್ದಾರ್, ದೇವರ ಹಿಪ್ಪರಗಿ → ವಲಯ ಆಯುಕ್ತರು, ವಿಜಯಪುರ ಮಹಾನಗರ ಪಾಲಿಕೆ.

65. ಎರಿಸ್ವಾಮಿ ಪಿ.ಎಸ್. – ತಹಶೀಲ್ದಾರ್, ಮುಂಡರಗಿ → ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಬಳ್ಳಾರಿ.

66. ಶ್ರೀಶೈಲ ಯಮನಪ್ಪ ತಳವಾರ – ತಹಶೀಲ್ದಾರ್, ನರಗುಂದ → ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ವಿಜಯಪುರ.

67. ದುಂಡಪ್ಪ ಹುಚ್ಚಪ್ಪ ಕೋಮಾರ್ – ತಹಶೀಲ್ದಾರ್, ಖಾನಾಪುರ → ವಿಶೇಷ ಭೂಸ್ವಾಧೀನಾಧಿಕಾರಿ, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ.

68. ನಾಗರಾಜ್ ಕೆ.ಕೆ. – ತಹಶೀಲ್ದಾರ್, ರೋಣ → ವಲಯ ಆಯುಕ್ತರು-2, ದಾವಣಗೆರೆ ಮಹಾನಗರ ಪಾಲಿಕೆ.

69. ನಾಗಮ್ಮ – ತಹಶೀಲ್ದಾರ್, ದೇವದುರ್ಗ → ಸಹಾಯಕ ಕಾರ್ಯದರ್ಶಿ, ಜಿಲ್ಲಾ ಪಂಚಾಯಿತಿ, ಕೊಪ್ಪಳ.

ತಕ್ಷಣ ಕರ್ತವ್ಯಕ್ಕೆ ಹಾಜರಾಗಲು ಸೂಚನೆ

ವರ್ಗಾವಣೆಗೊಂಡ ಅಧಿಕಾರಿಗಳು ತಮ್ಮ ಹೊಸ ನಿಯೋಜಿತ ಸ್ಥಳಗಳಲ್ಲಿ ತಕ್ಷಣ ಕರ್ತವ್ಯಕ್ಕೆ ಹಾಜರಾಗಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಆದೇಶದ ಬಳಿಕ ಸ್ಥಳ ನಿರೀಕ್ಷೆಯಲ್ಲಿರುವ ಅಧಿಕಾರಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಕರ್ತವ್ಯ ವರದಿ ಮಾಡಿಕೊಳ್ಳಬೇಕೆಂದು ನಿರ್ದೇಶನ ನೀಡಲಾಗಿದೆ.

ಈ ವರ್ಗಾವಣೆಗಳ ಮೂಲಕ ರಾಜ್ಯದ ವಿವಿಧ ಆಡಳಿತ ವಿಭಾಗಗಳಲ್ಲಿ ಅಧಿಕಾರಿಗಳ ಜವಾಬ್ದಾರಿಗಳನ್ನು ಮರುಹಂಚಿಕೆ ಮಾಡಲಾಗಿದೆ. ಸಾರ್ವಜನಿಕ ಸೇವೆ, ಆಡಳಿತಾತ್ಮಕ ಸಮನ್ವಯ ಮತ್ತು ಇಲಾಖೆಗಳ ಕಾರ್ಯನಿರ್ವಹಣೆಯನ್ನು ಸುಗಮಗೊಳಿಸುವ ಉದ್ದೇಶದಿಂದ ಈ ಬದಲಾವಣೆಗಳನ್ನು ಕೈಗೊಳ್ಳಲಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular