HomeLatest Newsವೈದ್ಯಕೀಯ ಪದವಿ ಶಿಕ್ಷಣ ಪ್ರವೇಶಕ್ಕೆ ನೇರ ಆಯ್ಕೆ: ಆಸಕ್ತರಿಗೆ ಇಲ್ಲಿದೆ ಮಾಹಿತಿ

ವೈದ್ಯಕೀಯ ಪದವಿ ಶಿಕ್ಷಣ ಪ್ರವೇಶಕ್ಕೆ ನೇರ ಆಯ್ಕೆ: ಆಸಕ್ತರಿಗೆ ಇಲ್ಲಿದೆ ಮಾಹಿತಿ

ಮಡಿಕೇರಿ: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಮಡಿಕೇರಿಯಲ್ಲಿ ಬಾಕಿ ಉಳಿದಿರುವ ವಿವಿಧ ಕೋರ್ಸ್ ಗಳಿಗೆ ನೇರ ಆಯ್ಕೆ ನಡೆಯಲಿದೆ.

ಪ್ರಥಮ ವರ್ಷದ ಬಿ.ಎಸ್ಸಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ-11, ಬಿ.ಎಸ್ಸಿ ಮೆಡಿಕಲ್ ಇಮ್ಯಾಜಿಂಗ್ ಟೆಕ್ನಾಲಜಿ-20, ಬಿಎಸ್ಸಿ ಆಪ್ಟೋಮೆಟ್ರಿ-20, ಬಿಎಸ್ಸಿ ರೆಸ್‍ಪಿರೆಟರಿ ಕೇರ್ ಟೆಕ್ನಾಲಜಿ-19 ಸೀಟುಗಳನ್ನು ಹಾಗೂ ದ್ವಿತೀಯ ವರ್ಷದ ಬಿಎಸ್ಸಿ ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ-15, ಬಿಎಸ್ಸಿ ಅನಸ್ತೇಸಿಯಾ ಮತ್ತು ಆಪರೇಷನ್ ಥಿಯೇಟರ್ ಟೆಕ್ನಾಲಜಿ-11, ಬಿಎಸ್ಸಿ ಮೆಡಿಕಲ್ ಇಮ್ಯಾಜಿಂಗ್ ಟೆಕ್ನಾಲಜಿ-19, ಬಿಎಸ್ಸಿ ರೆಸ್‍ಪಿರೆಟರಿ ಕೇರ್ ಟೆಕ್ನಾಲಜಿ-20, ಬಿಎಸ್ಸಿ ಆಪ್ಟೋಮೆಟ್ರಿ-18 ಸೀಟುಗಳಿಗೆ ನೇರ ಆಯ್ಕೆ (ವಾಕ್ ಇನ್ ಅಡ್ಮಿಷನ್) ಆಹ್ವಾನಿಸಲಾಗಿದೆ.

ಮೆರಿಟ್ ಆಧಾರದ ಮೂಲಕ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಕೆಇಎ ಹಾಗೂ ಆರ್‍ಜಿಯುಎಚ್‍ಎಸ್ ಮಾನದಂಡಗಳ ಪ್ರವೇಶಾತಿಯ ಅರ್ಹತೆಯನ್ನು ಹೊಂದಿರುವ ವಿದ್ಯಾರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿ ಇಲ್ಲಿಗೆ ಜನವರಿ, 08 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 4 ಗಂಟೆ ಒಳಗೆ ಅರ್ಹ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳೊಂದಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಡಿಕೇರಿ ಇಲ್ಲಿ ಹಾಜರಾಗಿ ನೊಂದಣಿ ಪಡೆದು ಪ್ರವೇಶಾತಿ ಪಡೆಯಬಹುದು ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ಹಾಗೂ ಡೀನ್ ಅವರು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular