ಬೆಂಗಳೂರು: ಎಂಜಿನಿಯರಿಂಗ್ 3ನೇ ಸೆಮಿಸ್ಟರ್ ಗೆ ನೇರ ಪ್ರವೇಶ ಕಲ್ಪಿಸುವ ಡಿಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಪ್ರಕಟಿಸಿದ್ದು, ಜುಲೈ 21ರಿಂದ 24ರವರೆಗೆ ಇಚ್ಛೆ/ಆಯ್ಕೆಗಳನ್ನು ದಾಖಲಿಸಲು ಅವಕಾಶ ನೀಡಿದೆ.
ಜುಲೈ 24ರಂದು ಸಂಜೆ 6 ಗಂಟೆಗೆ ಸೀಟು ಹಂಚಿಕೆಯ ಅಣಕು ಫಲಿತಾಂಶ ಪ್ರಕಟಿಸಲಾಗುತ್ತದೆ. ನಂತರ ಜುಲೈ 27ರವರೆಗೆ ಆಪ್ಷನ್ಸ್ ಬದಲಿಸಲು/ತೆಗೆದುಹಾಕಲು/ಸೇರಿಸಲು ಅವಕಾಶ ಇರುತ್ತದೆ. ನಂತರ ಜುಲೈ 27ರಂದು ಸಂಜೆ 6ಗಂಟೆಗೆ ಸೀಟು ಹಂಚಿಕೆಯ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು.
ಜುಲೈ 28ರಿಂದ 31ರವರೆಗೆ ಚಾಯ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ. ಚಾಯ್ಸ್- 1 ಮತ್ತು ಚಾಯ್ಸ್ -2 ದಾಖಲಿಸಿದವರು ಜುಲೈ 28ರಿಂದ ಆಗಸ್ಟ್ 1ರವರೆಗೆ ಚಲನ್ ಡೌನ್‌ಲೋಡ್ ಮಾಡುವುದು. ಚಾಯ್ಸ್- 1 ದಾಖಲಿಸಿದವರು ಶುಲ್ಕ ಪಾವತಿಸಿ ಆಗಸ್ಟ್ 4ರೊಳಗೆ ಕಾಲೇಜಿಗೆ ವರದಿ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ತಿಳಿಸಿದ್ದಾರೆ.

