HomeEntertainment31ನೇ ವಸಂತಕ್ಕೆ ಕಾಲಿಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್

31ನೇ ವಸಂತಕ್ಕೆ ಕಾಲಿಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್

ಸ್ಯಾಂಡಲ್ವುಡ್ ಬೇಡಿಕೆಯ ನಟಿ ರಚಿತರಾಮ್ ಇಂದು ತಮ್ಮ 31ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ‘ಬೆಂಕಿಯಲ್ಲಿ ಅರಳಿದ ಹೂವು’ ಹಾಗೂ ‘ಅರಸಿ’ ಧಾರಾವಾಹಿಗಳ ಮೂಲಕ ಮನೆ ಮಾತಾಗಿದ್ದ ರಚಿತಾ ರಾಮ್ 2013ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ‘ಬುಲ್ ಬುಲ್’ ಚಿತ್ರದ ಮೂಲಕ ಬೆಳ್ಳಿ ತೆರೆ ಪ್ರವೇಶಿಸಿದರು. ನಂತರ 2014ರಲ್ಲಿ ಮತ್ತೊಮ್ಮೆ ನಟ ದರ್ಶನ್ ಜೊತೆ ‘ಅಂಬರೀಶ’ ಸಿನಿಮಾದಲ್ಲಿ ಅಭಿನಯಿಸಿದರು. ಬಳಿಕ ಒಂದರ ಮೇಲೊಂದು ಆಫರ್ ಗಳು ಈ ನಟಿಗೆ ಬಂದವು.

ನಟಿ ರಚಿತಾ ರಾಮ್ ಇತ್ತೀಚಿಗೆ ನಾಯಕಿಯಾಗಿ ಮಾತ್ರವಲ್ಲದೆ ಅತಿಥಿ ಪಾತ್ರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ರಚಿತರಾಮ್ ಅಭಿನಯದ ಇನ್ನು ಐದು ಸಿನಿಮಾಗಳು ತೆರೆಮೇಲೆ ಬರಲು ಸಜ್ಜಾಗಿವೆ, ‘ಶಬರಿ ಸರ್ಚಿಂಗ್ ಫಾರ್ ರಾವಣ’ ಈಗಾಗಲೇ ಶೂಟಿಂಗ್ ಮುಕ್ತಾಯವಾಗಿದ್ದು, ‘ಬ್ಯಾಡ್ ಮ್ಯಾನರ್ಸ್’ ‘ಮ್ಯಾಟ್ನಿ’ ‘ಲವ್ ಮೀ ಆರ್ ಹೇಟ್ ಮಿ’ ಹಾಗೂ’ಸಂಜು ವೆಡ್ಸ್ ಗೀತಾ2′ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular