HomeKarnatakaBREAKING NEWS: ವಾಡಿ ಜಂಕ್ಷನ್ ಬಳಿ ಹಳಿ ತಪ್ಪಿದ ಡೀಸೆಲ್ ಟ್ಯಾಂಕರ್ ರೈಲು

BREAKING NEWS: ವಾಡಿ ಜಂಕ್ಷನ್ ಬಳಿ ಹಳಿ ತಪ್ಪಿದ ಡೀಸೆಲ್ ಟ್ಯಾಂಕರ್ ರೈಲು

ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಜಂಕ್ಷನ್ ಬಳಿ ಡೀಸೆಲ್ ಟ್ಯಾಂಕರ್ ರೈಲು ಹಳಿ ತಪ್ಪಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ಪನವಲ್ ನಿಂದ ಹೊರಟಿದ್ದ ಡೀಸೆಲ್ ಟ್ಯಾಂಕರ್ ರೈಲು, ಆಂಧ್ರಪ್ರದೇಶದ ಗುಂತಕಲ್ ಗೆ ತೆರಳುತ್ತಿತ್ತು. ಈ ವೇಳೆ ವಾಡಿ ರೈಲ್ವೆ ಜಂಕ್ಷನ್ ಬಳಿ ನಿಲ್ಲುಸುವಾಗ ರೈಲಿನ 3 ಬೋಗಿಗಳು ಹಳಿತಪ್ಪಿವೆ.

ಅದೃಷ್ಟವಶಾತ್ ಹಳಿತಪ್ಪಿದ ಟ್ಯಾಂಕರ್ ಗಳಲ್ಲಿ ಡೀಸೆಲ್ ಇರಲಿಲ್ಲ. ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ರೈಲ್ವೆ ಅಧಿಕರಿಗಳು ಹಳಿತಪ್ಪಿದ 3 ಬೋಗಿಗಳನ್ನು ಸರಿಪಡಿಸಿದ್ದಾರೆ. ರೈಲುಗಳ ಸಂಚಾರದಲ್ಲಿ ಯಾವುದೇ ವ್ಯತ್ಯವಾಗಿಲ್ಲ. ವಾಡಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular