HomeKarnatakaBIG NEWS: ರಾಜಧಾನಿಯಲ್ಲಿ ಅತಿಸಾರ, ಡಯೇರಿಯಾ ಪ್ರಕರಣ ಹೆಚ್ಚಳ; ಹಾಸನದಲ್ಲಿ ಇಬ್ಬರು ಸಾವು

BIG NEWS: ರಾಜಧಾನಿಯಲ್ಲಿ ಅತಿಸಾರ, ಡಯೇರಿಯಾ ಪ್ರಕರಣ ಹೆಚ್ಚಳ; ಹಾಸನದಲ್ಲಿ ಇಬ್ಬರು ಸಾವು

ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಝಳದ ನಡುವೆ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಏಕಾಏಕಿ ವಾತಾವರಣ ಬದಲಾವಣೆಯಿಂದಾಗಿ ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.

ರಣಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ಬೆಂಗಳೂರಿನಲ್ಲಿ ವರುಣದೇವ ಕಳೆದ ಎರಡು ದಿನಗಳಿಂದ ಕೃಪೆತೋರಿ ಮಳೆ ಸುರಿಸುತ್ತಿದ್ದು, ಏಕಾಏಕಿ ವಾತಾವರಣ ಬದಲಾಗಿದೆ. ಈ ಮಧ್ಯೆ ಬೆಂಗರಿನಲ್ಲಿ ಹಲವರಲ್ಲಿ ಅತಿಸಾರ, ಡಯೇರಿಯಾ, ವಾಂತಿ, ಭೇದಿ ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿದೆ.

ಕಳೆದ ಒಂದು ವಾರದಲ್ಲಿ ಬೆಂಗಳೂರಿನಲ್ಲಿ 4450 ಅತಿಸಾರ ಪ್ರಕರನ ದಾಖಲಾಗಿದೆ. ಇನ್ನು ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಅತಿಸಾರ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 52 ಸಾವಿರ ಗಡಿ ದಾಟಿದೆ. ಒಂದೆಡೆ ಹೆಚ್ಚುತ್ತಿರುವ ತಾಪಮಾನ ಹಾಗೂ ಸಡನ್ ವಾತಾವರಣ ಬದಲಾವಣೆ ಈ ಸಮಸ್ಯೆಗೆ ಕಾರಣ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಹಾಸನ ಜಿಲ್ಲೆಯಲ್ಲಿ ಕ್ಲಸ್ಟರ್ ಪ್ರಮಾಣದಲ್ಲಿ ಅತಿಸಾರ ಕೇಸ್ ಹೆಚ್ಚಳವಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ಭಾಗದಲ್ಲಿ ಕುಡಿಯುವ ನೀರು, ಆಹಾರದ ಅಧ್ಯಯನಕ್ಕೆ ಆರೋಗ್ಯ ಇಲಾಖೆ ಮುಂದಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular