ಧಾರವಾಡ : ನವಲಗುಂದ ತಾಲೂಕಿನ ಯಮನೂರ ಗ್ರಾಮದಲ್ಲಿ ಮಾರ್ಚ 6 ರಿಂದ 10 ವರೆಗೆ ಶ್ರೀ ರಾಜಾಬಾಗ ಸವಾರ ಚಾಂಗದೇವರ ಗಂಧ ಹಾಗೂ ಉರುಸು ನಡೆಯುತ್ತಿದ್ದು, ಸದರಿ ಜಾತ್ರೆಗೆ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಭಕ್ತಾಧಿಗಳು ತಮ್ಮ ತಮ್ಮ ವಾಹನಗಳೊಂದಿಗೆ ಬರುತ್ತಿದ್ದಾರೆ. ಮಾರ್ಚ 6 ರಿಂದ 10 ವರೆಗಿನ ಅವಧಿಯಲ್ಲಿ ಹೆಚ್ಚಿನ ವಾಹನ ದಟ್ಟನೆ ಆಗುವದರಿಂದ ವಾಹನ ಸಂಚಾರ ನಿಯಂತ್ರಿಸುವುದು ಅವಶ್ಯವಾಗಿರುತ್ತದೆ.
ಆದ್ದರಿಂದ ನವಲಗುಂದ ಪೆÇಲೀಸ್ ಠಾಣೆ ವ್ಯಾಪ್ತಿಯ ಹುಬ್ಬಳ್ಳಿ-ಸೊಲ್ಲಾಪೂರ ರಾಷ್ಟ್ರೀಯ ಹೆದ್ದಾರಿ ನಂ.218 ರಲ್ಲಿ ಮಾರ್ಚ 06 ರಿಂದ ಮಾರ್ಚ 10, 2026 ರವರೆಗೆ ನರಗುಂದದಿಂದ ನವಲಗುಂದ ಮಾರ್ಗವಾಗಿ ಬರುವಂತಹ ಭಾರಿ ವಾಹನಗಳು: ಗೊಬ್ಬರಗುಂಪಿ ಕ್ರಾಸ್, ಅಳಗವಾಡಿ, ತಿರ್ಲಾಪೂರ, ಬ್ಯಾಹಟ್ಟಿ, ಕುಸುಗಲ್ ಮಾರ್ಗವಾಗಿ ಹುಬ್ಬಳ್ಳಿ ಕಡೆಗೆ ಸಂಚರಿಸುವಂತೆ, ಹಾಗೂ ಹುಬ್ಬಳ್ಳಿಯಿಂದ ನವಲಗುಂದ ಮಾರ್ಗವಾಗಿ ಬರುವಂತಹ ಭಾರಿ ವಾಹನಗಳು: ಕುಸುಗಲ್, ಬ್ಯಾಹಟ್ಟಿ, ತಿರ್ಲಾಪೂರ, ಅಳಗವಾಡಿ ಮಾರ್ಗವಾಗಿ ನರಗುಂದ ಕಡೆಗೆ ಸಂಚರಿಸಲು ಮಾರ್ಗಗಳನ್ನು ಬದಲಾಯಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಪೆÇೀಲೀಸ್ ಅಧೀಕ್ಷಕರು, ಧಾರವಾಡ ಜಿಲ್ಲೆ, ಧಾರವಾಡ ಹಾಗೂ ತಹಶೀಲ್ದಾರರು ಹಾಗೂ ತಾಲ್ಲೂಕಾ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ನವಲಗುಂದ ಇವರು ಸದರಿ ಮಾರ್ಗಗಳಲ್ಲಿ ಯಾವುದೇ ಅಪಘಾತ ಮತ್ತು ಇತರೆ ಸಮಸ್ಯೆಗಳು ಜರುಗದಂತೆ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವುದು ಮತ್ತು ಸದರಿ ಆದೇಶವನ್ನು ಜಾರಿಗೊಳಿಸಲು ಅವರು ಆದೇಶದಲ್ಲಿ ತಿಳಿಸಿದ್ದಾರೆ.

