HomeKarnatakaಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ

ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಹುದ್ದೆಗೆ ಅರ್ಜಿ ಆಹ್ವಾನ

ಧಾರವಾಡ :   ಜಿಲ್ಲೆಯ ಕೃಷಿ ವಿಶ್ವವಿದ್ಯಾಲಯ, ಸಮುದಾಯ ವಿಜ್ಞಾನ ಮಹಾವಿದ್ಯಾಲಯ, ದೈಹಿಕ ಶಿಕ್ಷಣ ವಿಭಾಗದ ಒಂದು ಸಹಾಯಕ ಪ್ರಾಧ್ಯಾಪಕರ ತಾತ್ಕಾಲಿಕ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

 ಆಸಕ್ತರು ಅರ್ಜಿ ನಮೂನೆಯ ಎರಡು ಪ್ರತಿಗಳೊಂದಿಗೆ ಸೆಪ್ಟೆಂಬರ್ 18, 2026 ರಂದು ಬೆಳಿಗ್ಗೆ 10:30 ಘಂಟೆಗೆ ಡೀನ್ (ಸವಿ), ಸಮುದಾಯ ವಿಜ್ಞಾನ ಮಹಾವಿದ್ಯಾಲಯದ ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜರಾಗಬೇಕು.

 ಹೆಚ್ಚಿನ ಮಾಹಿತಿಗಾಗಿ 0836-2214234 ಹಾಗೂ ಕೃವಿವಿ ಜಾಲತಾಣ www.uasd.edu ವನ್ನು ಸಂಪರ್ಕಿಸಬಹುದೆಂದು ಸಮುದಾಯ ವಿಜ್ಞಾನ ಮಹಾವಿದ್ಯಾಲಯ ಡೀನ್ (ಸವಿ) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 ಸೆ.16 ರಂದು ಶಿಶಿಕ್ಷು ತರಬೇತಿಗಾಗಿ ಐಟಿಐ ಉತ್ತೀರ್ಣಗೊಂಡ ಎಲ್ಲ ವೃತ್ತಿಯ ಅಭ್ಯರ್ಥಿಗಳಿಗೆ ನೇರ ಸಂದರ್ಶನ ಆಯೋಜನೆ

 ಧಾರವಾಡ :  ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಅಮ್ಮಿನಭಾವಿಯಿಂದ ಸೆಪ್ಟೆಂಬರ್ 16, 2026 ರಂದು ಧಾರವಾಡದ ಎಲ್‍ಇಎ ಸಂಸ್ಥೆಯ ಟೌನ್ ಹಾಲ್‍ದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಶಿಕ್ಷು ಮೇಳದಲ್ಲಿ ವಿವಿಧ ಕಂಪನಿಗಳಿಂದ ಶಿಶಿಕ್ಷು ತರಬೇತಿಗಾಗಿ ಐಟಿಐ ಉತ್ತೀರ್ಣಗೊಂಡ ಎಲ್ಲ ವೃತ್ತಿಯ ಅಭ್ಯರ್ಥಿಗಳಿಗೆ ನೇರ ಸಂದರ್ಶನವನ್ನು ಆಯೋಜಿಸಲಾಗಿದೆ.

 ಆಸಕ್ತ ಅಭ್ಯರ್ಥಿಗಳು ಸ್ವವಿವರ ಹಾಗೂ ಎಲ್ಲ ಮೂಲ ಹಾಗೂ ದೃಢಿಕೃತ ಅಂಕಪಟ್ಟಿಗಳ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಬೆಳಿಗ್ಗೆ 10 ಗಂಟೆಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9972946660, 9538671583, 9741850308 ಗೆ ಸಂಪರ್ಕಿಸಬಹುದು ಎಂದು ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

 ಧಾರವಾಡ :  ಕೃಷೋನ್ನತಿ-ಕೃಷಿ ವಿಸ್ತರಣೆ (ಆತ್ಮ) ಯೋಜನೆಯಡಿ ಕೃಷಿ ವಲಯದಲ್ಲಿ ಕೃಷಿಯಲ್ಲಿ ಸಮಗ್ರ ಬೆಳೆ ಪದ್ದತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ ಅಭಿವೃದ್ದಿ, ವೈಜ್ಞಾನಿಕ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ತಂತ್ರಜ್ಞಾನ ಅಳವಡಿಕೆ (ಹಸಿರುಮನೆ, ಕಸಿ ಅಭಿವೃದ್ದಿ, ಸಸ್ಯಕಾಶಿ ಇತ್ಯಾದಿ), ಕೃಷಿ ಸಂಸ್ಕರಣೆ, ಅರಣ್ಯ ಕೃಷಿ, ಆಡು, ಕುರಿ, ಮೊಲ ಸಾಕಾಣಿಕೆ ವಿಭಾಗಗಳಲ್ಲಿ ಅಮೂಲ್ಯ ಅನ್ವೇಷಣೆ, ವಿಶಿಷ್ಟ ಸಾಧನೆ ಮೂಲಕ ರೈತ ಸಮುದಾಯಕ್ಕೆ ಅತ್ಯುತ್ತಮ ಕೊಡುಗೆ ನೀಡುತ್ತಿರುವ ಜಿಲ್ಲೆಯ ಪರಿಣಿತ ಕೃಷಿಕ ಮಹನಿಯರುಗಳನ್ನು ಗುರುತಿಸಿ, ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ನಗದು ಬಹುಮಾನದೊಂದಿಗೆ ನೀಡಲಾಗುತ್ತದೆ.

 2026-27 ನೇ ಸಾಲಿನ ಧಾರವಾಡ ಜಿಲ್ಲೆಯ ರೈತರಿಂದ, ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

 ಅರ್ಜಿದಾರರು ತಾವು ನಿರ್ವಹಿಸುವ ಒಂದು ಚಟುವಟಿಕೆಯಡಿ ಒಂದೇ ಅರ್ಜಿಯನ್ನು ಮಾತ್ರ ಸಲ್ಲಿಸಬೇಕು. ಅರ್ಜಿಯೊಂದಿಗೆ ಸಂಬಂಧಪಟ್ಟ ಚಟುವಟಿಕೆಯ ಜೆರಾಕ್ಸ್ ಪ್ರತಿಗಳನ್ನು, ಛಾಯಾ ಚಿತ್ರ ಪ್ರತಿಗಳನ್ನು, ಸಿ.ಡಿ.ಗಳನ್ನು, ಖರ್ಚು ವೆಚ್ಚಗಳು, ವರಮಾನ, ಆರ್‍ಟಿಸಿ ಪ್ರತಿ, ಆಧಾರ ಪ್ರತಿ, ಬ್ಯಾಂಕ ಪಾಸಬುಕ್ ಜೆರಾಕ್ಸ್, ಪ್ರತಿ ಪತ್ರಿಕಾ ಪ್ರಕಟಣೆಗಳ ಮಾಹಿತಿ ಸಂಬಂಧಪಟ್ಟ ಪ್ರತಿ ಲಗತ್ತಿಸಿರಬೇಕು. ಅಳವಡಿಸಿರುವ ತಾಂತ್ರಿಕತೆ ಪ್ರಸ್ತುತ ಸನ್ನಿವೇಶಕ್ಕೆ ಮತ್ತು ರೈತ ಸಮುದಾಯಕ್ಕೆ ಪ್ರೇರಣೆ ಮತ್ತು ಮಾದರಿಯಾಗಿರಬೇಕು.

ಆಸಕ್ತ ರೈತರು ಜಂಟಿ ಕೃಷಿ ನಿರ್ದೇಶಕರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆ ಪಡೆದು ಸಾಧನೆಗಳ ವಿವರ ಬರೆದು ಜಂಟಿ ನಿರ್ದೇಶಕರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಅಕ್ಟೋಬರ್ 09, 2026 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರು ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular