HomeEntertainment'ದೇಸಾಯಿ' ಚಿತ್ರದ ಟ್ರೈಲರ್ ರಿಲೀಸ್

‘ದೇಸಾಯಿ’ ಚಿತ್ರದ ಟ್ರೈಲರ್ ರಿಲೀಸ್

ನಾಳೆ ರಾಜ್ಯಾದ್ಯಂತ ತೆರೆ ಮೇಲೆ ಬರಲು ಸಜ್ಜಾಗಿರುವ ಪ್ರವೀಣ್ ಕುಮಾರ್ ಅಭಿನಯದ ‘ದೇಸಾಯಿ’ ಚಿತ್ರದ  ಟ್ರೈಲರನ್ನು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ  ನೋಡುಗರ ಗಮನ ಸೆಳೆದಿದೆ.

ನಾಗಿರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಪ್ರವೀಣ್ ಕುಮಾರ್ ಹಾಗೂ ರಾಧ್ಯ ಪ್ರಮುಖ ಪಾತ್ರದಲ್ಲಿದ್ದು, ಹರಿಣಿ, ಪ್ರಶಾಂತ್, ಸೀತಾ ಬೆನಕ, ಆರತಿ ಕುಲಕರ್ಣಿ, ಮಂಜುನಾಥ್ ಹೆಗಡೆ, ಸೃಷ್ಟಿ, ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ ಉಳಿದ ಪಾತ್ರವರ್ಗದಲ್ಲಿದ್ದಾರೆ.

ಶ್ರೀ ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಬ್ಯಾನರ್ ನಲ್ಲಿ ಮಹಾಂತೇಶ ವಿ.ಚೋಳಚಗುಡ್ಡ ನಿರ್ಮಾಣ ಮಾಡಿದ್ದಾರೆ. ಸಾಯ್ ಕಾರ್ತಿಕ್ ಸಂಗೀತ ಸಂಯೋಜನೆ  ನೀಡಿದ್ದು, ಪಿ.ಕೆ.ಹೆಚ್. ದಾಸ್ ಅವರ ಛಾಯಾಗ್ರಾಹಣವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular