HomeKarnatakaದಾಂಡೇಲಿ-ಅಳ್ನಾವರ ನೂತನ ರೈಲು: ವೇಳಾಪಟ್ಟಿ, ಪ್ರಯೋಜನಗಳು

ದಾಂಡೇಲಿ-ಅಳ್ನಾವರ ನೂತನ ರೈಲು: ವೇಳಾಪಟ್ಟಿ, ಪ್ರಯೋಜನಗಳು

ದಾಂಡೇಲಿ-ಅಳ್ನಾವರ ನಡುವಿನ ನೂತನ ಡೆಮು ರೈಲು ಸೇವೆಗೆ ಫೆಬ್ರವರಿ 7ರ ಶನಿವಾರ ಚಾಲನೆ ಸಿಗಲಿದೆ. ದಾಂಡೇಲಿ ರೈಲ್ವೆ ನಿಲ್ದಾಣದಲ್ಲಿ ತುಮಕೂರ ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಅವರು, ‘ಕರ್ನಾಟಕದ ಜನತೆಗಾಗಿ ಸುಧಾರಿತ ರೈಲ್ವೆ ಸಂಪರ್ಕ ಫೆಬ್ರವರಿ 07 ಶನಿವಾರದಂದು ದಾಂಡೇಲಿ ರೈಲ್ವೆ ನಿಲ್ದಾಣದಲ್ಲಿ ದಾಂಡೇಲಿ-ಅಳ್ನಾವರ ನಡುವೆ ನೂತನ ಡೆಮು ರೈಲು ಸೇವೆಗೆ ಹಸಿರು ನಿಶಾನೆ ತೋರಲಾಗುವುದು’ ಎಂದು ಹೇಳಿದ್ದಾರೆ.

ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಸಂಪರ್ಕಿಸುವ ರಾಜ್ಯದ ಅತ್ಯಂತ ಕಡಿಮೆ ದೂರದ ರೈಲು ಮಾರ್ಗ ಇದಾಗಿದೆ. ಈ ಮಾರ್ಗದಲ್ಲಿ ಇರುವುದು ಒಟ್ಟು ಮೂರು ನಿಲ್ದಾಣಗಳು ಮಾತ್ರ. ಉಭಯ ಜಿಲ್ಲೆಗಳ ನಡುವೆ ಸಂಚಾರ ನಡೆಸುವ ನೂರುರು ವಿದ್ಯಾರ್ಥಿಗಳು, ವ್ಯಾಪಾರಿಗಳು, ಉದ್ಯೋಗಿಗಳಿಗೆ ಈ ರೈಲು ಸೇವೆ ಸಹಾಯಕವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡೆಮು ರೈಲು ಪ್ರಯೋಜನಗಳು

  • ದಾಂಡೇಲಿ-ಅಳ್ನಾವರ ನಡುವರ ಸಂಪರ್ಕವನ್ನು ಸುಧಾರಿಸುತ್ತದೆ
  • ದಾಂಡೇಲಿ ಪ್ರದೇಶದ ಸುತ್ತಲಿನ ಜನತೆಗೆ ಆರೋಗ್ಯ ಮತ್ತು ಪ್ರವಾಸೋದ್ಯಮದಂತಹ ಸೇವೆಗಳು ಸುಲಭವಾಗಿ ದೊರೆಯುವಂತೆ ಮಾಡುತ್ತದೆ
  • ಸ್ಥಳೀಯ ಜನತೆಯ ಬಹು ದಿನದ ಬೇಡಿಕೆಯನ್ನು ಈಡೇರಿಸಿದೆ
  • ದಾಂಡೇಲಿ ಮತ್ತು ಅಳ್ನಾವರದ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆ ಉತ್ತೇಜಿಸುತ್ತದೆ

ದಾಂಡೇಲಿ ರೈಲು ನಿಲ್ದಾಣ ಕರ್ನಾಟಕದ ಇತಿಹಾಸದ ಹೆಗ್ಗುರುತು ಆಗಿದೆ. ನೈಋತ್ಯ ರೈಲ್ವೆ ವ್ಯಾಪ್ತಿಯ ಕೊನೆಯ ನಿಲ್ದಾಣವಿದು. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಈ ನಿಲ್ದಾಣದ ಹೆಸರು ಮೊದಲು ‘ಅಂಬೇವಾಡಿ’ ಎಂದಾಗಿತ್ತು. ಕೆಲವು ವರ್ಷಗಳ ಹಿಂದೆ ಅದನ್ನು ‘ದಾಂಡೇಲಿ’ ಎಂದು ಬದಲಾವಣೆ ಮಾಡಲಾಗಿದೆ. ದಾಂಡೇಲಿ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು.

1918ರಲ್ಲಿ ಬ್ರಿಟಿಷರು ದಟ್ಟ ಕಾಡು ಹೊಂದಿರುವ ದಾಂಡೇಲಿಯಿಂದ ಮರದ ದಿಮ್ಮಿಗಳನ್ನು ಗೋವಾಕ್ಕೆ ಸಾಗಣೆ ಮಾಡಲು ಈ ರೈಲು ಮಾರ್ಗವನ್ನು ನಿರ್ಮಾಣ ಮಾಡಿದರು ಮತ್ತು ರೈಲು ನಿಲ್ದಾಣ ನಿರ್ಮಿಸಿದರು. ಈ ಮಾರ್ಗ ಗೋವಾ ರಾಜ್ಯದಲ್ಲಿರುವ ವಾಸ್ಕೋ ಬಂದರು ಸಂಪರ್ಕಿಸುತ್ತದೆ.

ಮೊದಲು ಇದು ಮೀಟರ್ ಗೇಜ್ ಮಾರ್ಗವಾಗಿತ್ತು. ಬಳಿಕ ಅದನ್ನು ಬ್ರಾಡ್‌ ಗೇಜ್ ಮಾರ್ಗವಾಗಿ ಅಭಿವೃದ್ಧಿ ಮಾಡಲಾಗಿತ್ತು. 2019ರಲ್ಲಿ ಅಳ್ನಾವರ-ಅಂಬೇವಾಡಿ ರೈಲು ಸಂಚಾರ ಆರಂಭಗೊಂಡಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ರೈಲು ನಿಂತಿತು, ಬಳಿಕ ರೈಲು ಸಂಚಾರ ಇರಲಿಲ್ಲ. ಈಗ ಡೆಮು ರೈಲು ಸಂಚಾರಕ್ಕೆ ಚಾಲನೆ ನೀಡಲಾಗುತ್ತಿದೆ.

ರೈಲು ವೇಳಾಪಟ್ಟಿ

  • ದಾಂಡೇಲಿ-ಅಳ್ನಾವರ ನಡುವೆ ಭಾನುವಾರ ಹೊರತುಪಡಿಸಿ ಉಳಿದ ದಿನ ಡೆಮು ರೈಲು ಸಂಚಾರವನ್ನು ನಡೆಸಲಿದೆ.
  • ಅಳ್ನಾವರದಿಂದ ರೈಲು 5.30,7.40, 19.30ಕ್ಕೆ ಹೊರಡಲಿದೆ. 45 ನಿಮಿಷಗಳಲ್ಲಿ ರೈಲು ಅಳ್ನಾವರದಿಂದ ದಾಂಡೇಲಿ ತಲುಪಲಿದೆ.
  • ದಾಂಡೇಲಿಯಿಂದ ರೈಲು 7.30, 9.25 ಮತ್ತು 21.15ಕ್ಕೆ ಹೊರಡಲಿದೆ. 4 ಬೋಗಿಯ ಡೆಮು ರೈಲುಗಳು ಉಭಯ ನಿಲ್ದಾಣದ ನಡುವೆ ಸಂಚಾರ ನಡೆಸಲಿವೆ.

ಅಳ್ನಾವರ-ದಾಂಡೇಲಿ ನಡುವಿನ ಅಂತರ ಸುಮಾರು 25 ಕಿ.ಮೀ. ಆಗಿದೆ. ಈ ಮಾರ್ಗದಲ್ಲಿ 3 ನಿಲ್ದಾಣಗಳು ಬರುತ್ತದೆ. ಹಲವಾರು ಜನಪ್ರತಿನಿಧಿಗಳು ದಾಂಡೇಲಿ-ಅಳ್ನಾವರ ರೈಲು ಪುನಃ ಪ್ರಾರಂಭಿಸಬೇಕು ಎಂದು ರೈಲ್ವೆ ಇಲಾಖೆಗೆ ಮನವಿಗಳನ್ನು ಸಲ್ಲಿಕೆ ಮಾಡಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular