HomeLatest NewsBREAKING : ಬೆಂಗಳೂರಿನ 'ಚಿನ್ನಸ್ವಾಮಿ ಸ್ಟೇಡಿಯಂ' ಕಾಲ್ತುಳಿತ ದುರಂತ ನೆನೆದು ಕಣ್ಣೀರಿಟ್ಟ DCM ಡಿಕೆ ಶಿವಕುಮಾರ್...

BREAKING : ಬೆಂಗಳೂರಿನ ‘ಚಿನ್ನಸ್ವಾಮಿ ಸ್ಟೇಡಿಯಂ’ ಕಾಲ್ತುಳಿತ ದುರಂತ ನೆನೆದು ಕಣ್ಣೀರಿಟ್ಟ DCM ಡಿಕೆ ಶಿವಕುಮಾರ್ |WATCH VIDEO

ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಕಾಲ್ತುಳಿತ ದುರಂತ ನೆನೆದು ಡಿಸಿಎಂ ಡಿಕೆ ಶಿವಕುಮಾರ್ ಕಣ್ಣೀರಿಟ್ಟಿದ್ದಾರೆ.

ಮೃತಪಟ್ಟವರು ಎಳೆ ವಯಸ್ಸಿನವರು, ನೋವಿನ ಘಟನೆ ಆಗಿದೆ. ನಮ್ಮ ರಾಜ್ಯದಲ್ಲಿ ಇಂತಹ ಘಟನೆ ಆಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಮೃತಪಟ್ಟವರು ಅತ್ಯಂತ ಎಳೆ ವಯಸ್ಸಿನವರು, ಅವರ ಕುಟುಂಬದವರ ಕಣ್ಣೀರು ನೋಡುವುದಕ್ಕೆ ಆಗುತ್ತಿಲ್ಲ. ಕೆಲವು ಮಾಧ್ಯಮದವರು ಘಟನೆ ಬಗ್ಗೆ ನನಗೆ ಮಾಹಿತಿ ನೀಡಿದರು. ಬಳಿಕ ಕಮಿಷನರ್ ಮಾಹಿತಿ ನೀಡಿದರು. ವಿರೋಧ ಪಕ್ಷದವರು ರಾಜಕೀಯ ಮಾಡುತ್ತಿದ್ದಾರೆ, ಮಾಡಲಿ ಎಂದರು.ಅವರವರ ಕಾಲದಲ್ಲಿ ಏನಾಗಿದೆ ಅಂತ ಗೊತ್ತಿದೆ. ಹೆಚ್ ಡಿ ಕುಮಾರಸ್ವಾಮಿ ಟೀಕೆ ಮಾಡುತ್ತಲೇ ಇರಲಿ ಎಂದರು.  

10 ಲಕ್ಷ ಪರಿಹಾರ ಘೋಷಣೆ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರ್ಘಟನೆಯಲ್ಲಿ ಗಾಯಗೊಂಡವರನ್ನು ವೈದೇಹಿ ಆಸ್ಪತ್ರೆಯಲ್ಲಿ ಭೇಟಿ ಮಾಡಿ, ಅವರೊಂದಿಗೆ ಮಾತನಾಡಿ, ಶೀಘ್ರವಾಗಿ ಗುಣಮುಖರಾಗುವಂತೆ ಹಾರೈಸಿದೆ. ಕಾಲ್ತುಳಿತಕ್ಕೊಳಗಾಗಿ ಮೃತಪಟ್ಟವರಿಗೆ ಅಂತಿಮ ನಮನಗಳನ್ನು ಸಲ್ಲಿಸಿ, ಅವರ ಕುಟುಂಬಕ್ಕೆ ಸಾಂತ್ವನಗಳನ್ನು ತಿಳಿಸಿದೆ. ಈ ಘಟನೆಯಿಂದ ನಮಗೆ ಬಹಳ ನೋವಾಗಿದೆ. ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬದವರಿಗೆ ರೂ.10 ಲಕ್ಷ ಪರಿಹಾರ ನೀಡಲಿದ್ದೇವೆ. ಗಾಯಗೊಂಡವರ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದೆ. ಸಂಭ್ರಮದ ಸಂದರ್ಭದಲ್ಲಿ ಇಂತಹ ದುರಂತ ನಡೆಯಬಾರದಾಗಿತ್ತು. ಪ್ರತಿಯೊಬ್ಬರ ಜೀವ ಮುಖ್ಯ ಎಂಬುದು ನಮಗೆ ಅರಿವಿದೆ. ಈ ಘಟನೆ ನಡೆಯುತ್ತಿದೆ ಎಂಬುದು ನಾವು ನಿರೀಕ್ಷೆ ಮಾಡಿರಲಿಲ್ಲ. ಈ ಘಟನೆಯ ಬಗ್ಗೆ ನಮಗೆ ನೋವಿದೆ ಎಂದಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular