HomeLatest Newsಕಾಲ್ತುಳಿತ ದುರಂತದಲ್ಲಿ 11 ಜನರು ಸಾವು: ಸರ್ಕಾರ, ಗುಪ್ತಚರ ಇಲಾಖೆಯ ವೈಫಲ್ಯ: ಸಂಸದ ಡಾ.ಸುಧಾಕರ್ ವಾಗ್ದಾಳಿ

ಕಾಲ್ತುಳಿತ ದುರಂತದಲ್ಲಿ 11 ಜನರು ಸಾವು: ಸರ್ಕಾರ, ಗುಪ್ತಚರ ಇಲಾಖೆಯ ವೈಫಲ್ಯ: ಸಂಸದ ಡಾ.ಸುಧಾಕರ್ ವಾಗ್ದಾಳಿ

ಬೆಂಗಳೂರು: ಬೆಂಗಳುರಿನ ಚಿನ್ನಸ್ವಾಮಿ ಸ್ಟೆಡಿಯಂನಲ್ಲಿ ಕಾಲ್ತುಳಿತ ದುರಂತದಲ್ಲಿ 11 ಜನರು ಸಾವನ್ನಪ್ಪಿದ್ದಾರೆ. ಇದಕ್ಕೆ ಸರ್ಕಾರ ಯಾವುದೇ ರೀತಿಯ ವ್ಯವಸ್ಥೆಗಳನ್ನು ಕೈಗೊಳ್ಳದಿರುವುದೇ ಕಾರಣ ಎಂದು ಸಂಸದ ಡಾ.ಕೆ.ಸುಧಾಕರ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಸುಧಾಕರ್, ಅಹಮದಾಬಾದ್ ನಲ್ಲಿ ಆರ್ ಸಿಬಿ ಗೆದ್ದಾಗಲೇ ಯಾವ ದೀಪಾವಳಿಗೆ ಕಡಿಮೆ ಇಲ್ಲದಂತೆ ಸಂಭ್ರಮಾಚರಣೆ ಮಾಡಲಾಗಿತ್ತು. ಇನ್ನು ಆರ್ ಸಿಬಿ ತಂಡ ಬೆಂಗಳೂರಿಗೆ ಬಂದಾಗ ವಿಜಯೋತ್ಸವ ಯಾವ ಪ್ರಮಾಣದಲ್ಲಿ ನಡೆಯಬಹುದು ಎಂಬ ಅವರಿವು ಸರ್ಕಾರಕ್ಕೆ, ಗುಪ್ತಚರ ಇಲಾಖೆಗೆ ಇರಲಿಲ್ಲವೇ? ದುರಂತಕ್ಕೆ ಸರ್ಕಾರ ಹಾಗೂ ಗುಪ್ತಚರ ಇಲಾಖೆ ವೈಫಲ್ಯವೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಭ್ರಮಾಚರಣೆ, ಸತ್ಕಾರ, ಮೆರವಣಿಗೆ ಇವುಗಳ ಬಗ್ಗೆ ಯಾವುದೇ ಸ್ಪಷ್ಟತೆ ಇರಲಿಲ್ಲ. ನಮ್ಮಂಥವರಲ್ಲೇ ಗೊಂದಲ ಮೂಡಿತ್ತು. ಇನ್ನು ಜನಸಾಮಾನ್ಯರಿಗೆ ಹೇಗೆ ಅಥವಾಗಬೇಕು? ದುರಂತಕ್ಕೆ ಸರ್ಕಾರದ ಬೇಜವಾಬ್ದಾರಿತನ ಕಾರಣ. ಸರ್ಕಾರವೇ ಇದರ ಹೊಣೆಹೊರಬೇಕು ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular