HomeKarnatakaಮದ್ಯದ ಅಮಲಿನಲ್ಲಿ ಪ್ರಿಯಕರನನ್ನು ಕೊಲೆಗೈದ ಮಹಿಳೆ

ಮದ್ಯದ ಅಮಲಿನಲ್ಲಿ ಪ್ರಿಯಕರನನ್ನು ಕೊಲೆಗೈದ ಮಹಿಳೆ

ದಾವಣಗೆರೆ: ಮದ್ಯದ ಅಮಲಿನಲ್ಲಿ ಮಹಿಳೆಯೊಬ್ಬರು ತನ್ನ ಪ್ರಿಯಕರನನ್ನೇ ಕೊಲೆಗೈದಿರುವ ದಾರುಣ ಘಟನೆ ದಾವಣಗೆರೆಯ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ ನಡೆದಿದೆ.

ಪ್ರಿಯಕರನ ಜೊತೆ ಸೇರಿ ಕಂಠಪೂರ್ತಿ ಕುಡಿದಿದ್ದ ಮಹಿಳೆ ಇಬರ ನಡುವೆ ಜಗಳ ಶುವಾಗಿ, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಹಿಳೆ ತನ್ನ ಸೀರೆಯಿಂದ ಪ್ರಿಯಕರನ ಕತ್ತು ಬಿಗಿದು ಕೊಲೆ ಮಾಡಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಿಯಕರ ಮಂಜಪ್ಪ (40) ಕೊಲೆಯಾದ ದುರ್ದೈವಿ. ಶಬೀನಾ (38) ಪ್ರಿಯಕರನನ್ನೇ ಕೊಲೆಗೈದ ಹಂತಕಿ. ಹದಡಿ ಠಾಣೆ ಪೊಲೀಸತು ಸದ್ಯ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.

ಮಂಜಪ್ಪ ತನ್ನ ಪತ್ನಿ ಹಾಗೂ ಮಕ್ಕಳಿಂದ ದೂರವಾಗಿ ಕಳೆದ ಆರು ವರ್ಷಗಳಿಂದ ಶಬೀನಾ ಜೊತೆಗೆ ವಾಸವಾಗಿದ್ದ. ಶಬೀನಾ ಕೂಡ ಅದಾಗಲೇ ಒಂದು ಮದುವೆಯಾಗಿ ಪತಿಗೆ ವಿಚ್ಛೇದನ ನೀಡಿದ್ದಳು. ವಿಚ್ಛೇದಿತ ಮಹಿಳೆ ಶಬೀನಾ ಜೊತೆ ಮಂಜಪ್ಪ ವಾಸವಾಗಿದ್ದ.

ನಿನ್ನೆ ರಾತ್ರಿ ಕುಡಿದ ಅಮಲಿನಲ್ಲಿ ಮಂಜಪ್ಪನನ್ನು ಕೊಲೆ ಮಾಡಿದ್ದಾಳೆ. ಸೀರೆಯಿಂದ ಕತ್ತು ಬಿಗಿದು ಮಂಜಪ್ಪನನ್ನು ಹತ್ಯೆಗೈದಿದ್ದಾಳೆ. ಸದ್ಯ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

ಕಾಲೇಜು ವಿದ್ಯಾರ್ಥಿನಿಗೆ ನಡುರಸ್ತೆಯಲ್ಲಿ ಖಾಸಗಿ ಅಂಗ ತೋರಿಸಿ ಯುವಕನ ಅಸಭ್ಯ ವರ್ತನೆ: ಕಾಮುಕನನ್ನು ಬಿಟ್ಟು ಯುವತಿಯ ರಕ್ಷಣೆಗೆ ಬಂದಿದ್ದ ಇಬ್ಬರನ್ನು ಬಂಧಿಸಿದ ಪೊಲೀಸರು

ಬಾಗಲಕೋಟೆ: ಕಾಲೇಜು ವಿದ್ಯಾರ್ಥಿನಿಗೆ ನಡುರಸ್ತೆಯಲ್ಲಿ ಕಾಮುಕನೊಬ್ಬ ತನ್ನ ಖಾಸಗಿ ಅಂಗ ತೋರಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬಾಗಲಕೋಟೆಯ ನವನಗರದಲ್ಲಿ ನಡೆದಿದೆ. ಈ ಘಟನೆಯಲ್ಲಿ ಪೊಲೀಸರು ಕಾಮುಕನನ್ನು ಬಂಧಿಸುವುದನ್ನು ಬಿಟ್ಟು ಯುವತಿಯ ರಕ್ಷಣೆಗೆ ಬಂದಿದ್ದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.

ಪೊಲೀಸರ ನಡೆಗೆ ಬಂಧಿತ ಯುವಕರ ಪೋಷಕರು ಹಾಗೂ ನೊಂದ ವಿದ್ಯಾರ್ಥಿನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಯನ್ನು ಬಿಟ್ಟು ರಕ್ಷಣೆಗೆ ಬಂದವರನ್ನೇ ಬಂಧಿಸಿರುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದ್ದಾರೆ.

ಬಾಗಲಕೋಟೆಯ ನವನಗರದ ಬಳಿ ಸೆ.೧೭ರಂದು ರಸ್ತೆಯಲ್ಲಿ ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಕಂಡು ಕಾಮುಕನೊಬ್ಬ ಖಾಸಗಿ ಅಂಗ ಪ್ರದರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ. ಈ ವೇಳೆ ಸ್ಥಳಕ್ಕೆ ಬಂದ ಇಬ್ಬರು ಯುವಕರು ವಿದ್ಯಾರ್ಥಿನಿಯನ್ನು ರಕ್ಷಿಸಿದ್ದಾರೆ. ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸುದೀಪ್ ನಾಡಗೌಡ ಎಂಬಾತ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿ.

ನವನಗರ ಪೊಲೀಸರು ಕಾಮುಕ ಸುದೀಪ್ ನಾಡಗೌಡನನ್ನು ಬಂಧಿಸುವುದನ್ನು ಬಿಟ್ಟು, ಯುವತಿಯ ರಕ್ಷಣೆಗೆ ಬಂದಿದ್ದ ಚೇತನ್ ಕೋಡಬಾಗಿ ಹಾಗೂ ರೋಹನ್ ಹಾದಿಮನಿ ಎಂಬುವವರನ್ನು ಬಂಧಿಸಿದ್ದಾರೆ. ಪೊಲೀಸರ ನಡೆಗೆ ಬಂಧಿತ ಯುವಕರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿಕಿತ್ಸೆಯ ನೆಪಹೇಳಿ ಆರೋಪಿ ಸುದೀಪ್ ನಾಡಗೌಡನನ್ನು ಬಂಧಿಸುತ್ತಿಲ್ಲ. ಯುವತಿಯನ್ನು ರಕ್ಷಿಸಿದವರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಚೇತನ್ ಹಾಗೂ ರೋಹನ್ ನನ್ನ ಸಹಾಯಕ್ಕೆ ಬಂದವರು. ಅವರನ್ನು ಬಿಡುಗಡೆ ಮಾಡುವಂತೆ ನೊಂದ ಯುವತಿ ಪೊಲೀಸರಿಗೆ ಮನವಿ ಮಾಡಿದ್ದಾಳೆ. ಪೊಲೀಸರ ಹುಚ್ಚಾಟಕ್ಕೆ ನವನಗರ ಜನರು ಕೂಡ ಕಿಡಿಕಾರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular