ಬೆಂಗಳೂರು: ಸಿಡಿ ಫ್ಯಾಕ್ಟರಿ ಮಾಲೀಕನ ಮನೆಹಾಳು ಆತ್ಮರತಿ ಬಗ್ಗೆ ರಾಜ್ಯ ಕಾಂಗ್ರೆಸ್ ಮರೆತಿದೆ ಎಂಬ ಜೆಡಿಎಸ್ ಟೀಕೆಗೆ ಕಿಡಿಕಾರಿರುವ ಮಾಜಿ ಸಂಸದ ಡಿ.ಕೆ.ಸುರೇಶ್, ಸಿಡಿ ಫ್ಯಾಕ್ಟರಿ ಇದ್ದದ್ದೇ ಹೊಳೆನರಸಿಪುರದಲ್ಲಿ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಸುರೇಶ್, ಸಿಡಿ ಫ್ಯಾಕ್ಟರಿ ಇದ್ದದ್ದೇ ಹೊಳೆನರಸಿಪುರ, ಪದ್ಮನಾಭನಗರದಲ್ಲಿ. ಸಿಡಿ ಯಾರು ಮ್ಯಾನಿಫ್ಯಾಕ್ಟರ್ ಮಾಡುತ್ತಿದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಹಾಸನದಲ್ಲಿ ನಡೆದ ಘಟನೆ ಇಡೀ ದೇಶದಲ್ಲಿ ಎಲ್ಲೂ ನಡೆಯದಂತಹ ಕೆಟ್ಟ ಘಟನೆ. ನಿಮ್ಮ ಹುಡುಗನೇ ಮಾಡಿರುವ ಕೃತ್ಯ. ಜೈಲು ಸೇರಿರುವುದು ಎಲ್ಲರಿಗೂ ಗೊತ್ತಿದೆ. ಹಾಸನದ ಘಟನೆ ಬಗ್ಗೆ ವಿಷಾದವನ್ನೂ ವ್ಯಕ್ತಪಡಿಸದವರು ಇಂದು ರಾಜಕೀಯಕ್ಕಾಗಿ ಬೇರೆಯವರ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಹೆಚ್.ಡಿ.ಕೆಯವರಿಗೆ. ಬೇರೆಯವರ ಬಗ್ಗೆ ಮಾತನಾಡುವುದನ್ನು ಮೊದಲು ಬಿಡಿ. ನಿಮ್ಮದೇನಿದೆ ಅದನ್ನು ನೋಡಿಕೊಳ್ಳಿ ಎಂದು ಗುಡುಗಿದ್ದಾರೆ.
ಹೆಚ್.ಡಿ.ಕುಮಾರಸ್ವಾಮಿಯವರೇ ಮೊದಲು ಹೆಚ್ ಎಂಟಿಯವರಿಗೆ ನ್ಯಾಯ ಕೊಡಿಸಿ. ನಿಮ್ಮ ಇಲಾಖೆಯಿಂದ ಏನು ಮಾಡಿದ್ದೀರಿ? ಜೆಡಿಎಸ್ ನವರಿಗೆ ಕೆಲಸವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

