HomeLatest NewsBREAKING: ಡಿ.ಕೆ.ಶಿವಕುಮಾರ್ ನಾಡಿನ ಪ್ರಭುವಾಗಲಿ ಎಂದ ನಿಶ್ಚಲಾನಂದ ಸ್ವಾಮೀಜಿ

BREAKING: ಡಿ.ಕೆ.ಶಿವಕುಮಾರ್ ನಾಡಿನ ಪ್ರಭುವಾಗಲಿ ಎಂದ ನಿಶ್ಚಲಾನಂದ ಸ್ವಾಮೀಜಿ

ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ವಿಶ್ವ ಒಕ್ಕಲಿಗ ಸಮುದಾಯದ ಮಹಾಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮೀಜಿ ಡಿ.ಕೆ ನಾಡ ಪ್ರಭುವಾಗಲಿ ಎಂದು ಹಾರೈಸಿದ್ದಾರೆ.

ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ನಿಶ್ಚಲಾನಂದ ಸ್ವಾಮೀಜಿ, ಡಿ.ಕೆ.ಶಿವಕುಮಾರ್ ನಾಡ ಪ್ರಭುವಾಗಲಿ ಎಂಬುದು ನಮ್ಮೆಲ್ಲರ ಆಶಯ. ರಾಜ್ಯವನ್ನು ಮುನ್ನಡೆಸುವ ಶಕ್ತಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಗಲಿ ಎಂದು ಹೇಳಿದ್ದಾರೆ. ಈ ಮೂಲಕ ಪರೀಕ್ಷವಾಗಿ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಎಂದು ಶುಭಹಾರೈಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಡಿ.ಕೆ. ಶಿವಕುಮಾರ್ ಅವರು ಛಲ ಬಿಡದೇ ಯಾವುದೇ ಕೆಲಸವನ್ನು ಮಾಡಿ ತೋರಿಸುವಂತವರು. ಅಂತಹ ನಾಯಕ ನಾಡ ಪ್ರಭುವಾಗಲಿ ಎಂಬುದು ನಮ್ಮ ಆಶಯ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular