HomeLatest NewsBREAKING NEWS: ಭೀಕರ ರಸ್ತೆ ಅಪಘಾತ: ಏರೋನಾಟಿಕಲ್ ಇಂಜಿನಿಯರ್ ದುರ್ಮರಣ

BREAKING NEWS: ಭೀಕರ ರಸ್ತೆ ಅಪಘಾತ: ಏರೋನಾಟಿಕಲ್ ಇಂಜಿನಿಯರ್ ದುರ್ಮರಣ

ಬೆಂಗಳೂರು: ಫಾರ್ಚುನರ್ ಕಾರು ಹಾಗೂ ದ್ವಿಚಕ್ರವಾನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಏರೋನಾಟಿಕಲ್ ಇಂಜಿನಿಯರ್ ಓರ್ವರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಾಗಲೂರು ರಸ್ತೆಯ ಕೆಐಎಡಿಬಿ ಜಂಕ್ಷನ್ ಬಳಿ ನಡೆದಿದೆ.

ನಂದಿನಿ ಮೃತ ಇಂಜಿನಿಯರ್. ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ನಂದಿನಿ ನಿನ್ನೆ ಸಂಜೆ ಕೆಲಸ ಮುಗಿಸಿ ಪಿಜಿಗೆ ಹೋಗುವಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ನಂದಿನಿ ಅವರ ತಲೆ ಹಾಗೂ ಕಾಲಿಗೆ ಗಂಭೀರವಾಗಿ ಗಾಯವಾಗಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ತೀವ್ರ ರಕ್ತಸ್ರಾವದಿಂದಾಗಿ ಮಾರ್ಗ ಮಧ್ಯೆಯೇ ನಂದಿನಿ ಸಾವನ್ನಪ್ಪಿದ್ದಾರೆ.

ಮೂಲತಃ ನೆಲಮಂಗಲದ ಹೊಸ್ಕೂರು ನಿವಾಸಿಯಾದ ನಂದಿನಿ ಕಳೆದ 6 ತಿಂಗಳಿಂದ ಬಾಗಲೂರು ಬಳಿ ಪಿಜಿಯಲ್ಲಿ ವಾಸವಾಗಿ, ಉದ್ಯೋಗಕ್ಕೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular