ಬೆಂಗಳೂರು: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧ ಮುಂದುವರೆದುರುವ ನಡುವೆಯೇ ತೈಲ ಹಾಗೂ ಎಲ್ ಪಿಜಿ ಸಿಲಿಂದರ್ ಪೂರೈಕೆಯಲ್ಲಿ ವ್ಯತ್ಯಯವುಂಟಾಗಿದ್ದು, ಸಿಲಿಂದರ್ ಸಿಗದೇ ಹೋಟೆಲ್ ಗಳು ಬಾಗಿಲು ಮುಚ್ಚುತ್ತಿವೆ.
ಈ ನಡುವೆ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಬೆಂಗಳೂರು ನಗರದ ಹೋಟೆಲ್‌ಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ನಾಳೆ ನಗರದ ಹೋಟೆಲ್‌ಗಳಿಗೆ 17,500 ಹೆಚ್ಚುವರಿ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲಾಗುವುದು ಎಂದು ಘೋಷಿಸಿದ್ದಾರೆ.
ಈ ಆದೇಶದ ಅನ್ವಯ, ಇಂದು ವಿತರಕರಿಗೆ ಸಿಲಿಂಡರ್‌ಗಳು ತಲುಪಲಿದ್ದು, ನಾಳೆಯಿಂದ ಹೋಟೆಲ್ ಮಾಲೀಕರಿಗೆ ವಿತರಣೆ ಆರಂಭವಾಗಲಿದೆ. ಈ ಪ್ರಕ್ರಿಯೆಯು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಹೋಟೆಲ್ ಮಾಲೀಕರ ಆತಂಕ ನಾಳೆಯಿಂದ ಬಗೆಹರಿಯಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ದೇಶೀಯ ಸಿಲಿಂಡರ್‌ಗಳ ವಿತರಣೆಯಲ್ಲೂ ವಿಳಂಬವಾಗುತ್ತಿದ್ದು, ಗ್ರಾಹಕರು ವಿನಾಕಾರಣ ಡಿಸ್ಟ್ರಿಬ್ಯೂಟರ್‌ಗಳ ಕಚೇರಿಗೆ ಹೋಗಬಾರದು. 25 ದಿನಗಳ ನಂತರ ಬುಕ್ ಮಾಡಿದರೆ ಸಿಲಿಂಡರ್ ಲಭ್ಯವಾಗುತ್ತದೆ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಇದು 45 ದಿನಗಳಿಗೆ ಅನ್ವಯಿಸಲಿದೆ ಎಂದು ತಿಳಿಸಿದ್ದಾರೆ.

