HomeKarnatakaBREAKING: ರಸ್ತೆ ದಾಟುವಾಗ ಬೈಕ್ ಡಿಕ್ಕಿ: ಭೀಕರ ಅಪಘಾತದಲ್ಲಿ 6 ವರ್ಷದ ಬಾಲಕಿ ಸಾವು

BREAKING: ರಸ್ತೆ ದಾಟುವಾಗ ಬೈಕ್ ಡಿಕ್ಕಿ: ಭೀಕರ ಅಪಘಾತದಲ್ಲಿ 6 ವರ್ಷದ ಬಾಲಕಿ ಸಾವು

ಬೆಳಗಾವಿ: ರಸ್ತೆ ದಾಟುವಾಗ ಎಷ್ಟೇ ಜಾಗೃತೆ ವಹಿಸಿದರೂ ಕಡಿಮೆಯೇ. ಬಾಲಕಿಯೊಬ್ಬಳು ರಸ್ತೆ ದಾಟುವಾಗ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಪ್ರತೀಕ್ಷಾ (6) ಮೃತ ಬಾಲಕಿ. ಯರಗಟ್ಟಿ ತಾಲೂಕಿನ ಅಕ್ಕಿಸಾಗರ-ಬೆಟಗೇರಿ ರಸ್ತೆ ದಾಟುವಾಗ ವೇಗವಾಗಿ ಬಂದ ಬೈಕ್ ಬಾಲಕಿಗೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡಿದ್ದ ಬಾಲಕಿಯನ್ನು ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ.‌ 

ಯರಗಟ್ಟಿ ತಾಲೂಕಿನ ಅಕಗಕ್ಕಿ ಸಾಗರ ಗ್ರಾಮದ ಭೂಸೇನೆಯ ಸೈನಿಕ ಭೀಮಪ್ಪ ಕಲ್ಲಪ್ಪ ಅವರ ಪುತ್ರಿ ಮೃತ ಪ್ರತೀಕ್ಷಾ. ಬೈಕ್ ಸವಾರ ಯುವರಾಜ ಮಹಾಂತೇಶ ಗಿಡ್ಡಗೌಡರ ವಿರುದ್ಧ ಮುರಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಮುರಗೋಡ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular