HomeUncategorized200 ಕೋಟಿ ರೂ. ಸಿಎಸ್​ಆರ್​ ಹಗರಣ ಬಯಲು ಮಾಡಿದ ED: 12ನೇ ತರಗತಿ ಮಾತ್ರ ಓದಿದ್ದ...

200 ಕೋಟಿ ರೂ. ಸಿಎಸ್​ಆರ್​ ಹಗರಣ ಬಯಲು ಮಾಡಿದ ED: 12ನೇ ತರಗತಿ ಮಾತ್ರ ಓದಿದ್ದ ನಕಲಿ ವೈದ್ಯನ ನೇತೃತ್ವದಲ್ಲಿ ಪಿಎಸ್‌ಯು, ಬ್ಯಾಂಕ್‌ಗಳು, ಕಾರ್ಪೊರೇಟ್ ಸಂಸ್ಥೆಗಳಿಂದ ಹಣ ಲೂಟಿ

ನವದೆಹಲಿ: 200 ಕೋಟಿ ರೂ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್​ಆರ್) ನಿಧಿಯ ಹಗರಣವನ್ನು ಜಾರಿನಿರ್ದೇಶನಾಲಯ ಭೇದಿಸಿದೆ. ಕೇವಲ 12ನೇ ತರಗತಿ ಮಾತ್ರ ಓದಿರುವ ಒಬ್ಬ ನಕಲಿ ವೈದ್ಯನ ನೇತೃತ್ವದಲ್ಲಿ ಪಿಎಸ್‌ಯು, ಬ್ಯಾಂಕ್‌ಗಳು, ಕಾರ್ಪೊರೇಟ್ ಸಂಸ್ಥೆಗಳಿಂದ ನೂರಾರು ಕೋಟಿ ಹಣ ಲೂಟಿ ಮಾಡಿರುವುದು ಬಯಲಾಗಿದೆ.

ಸಿಎಸ್​ಆರ್ ನಿಧಿಯ ಹೆಸರಿನಲ್ಲಿ ಸಾರ್ವಜನಿಕ ವಲಯದ ಉದ್ಯಮಗಳು (ಪಿಎಸ್​ಯು), ಸರ್ಕಾರಿ ಬ್ಯಾಂಕುಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳಿಂದ ಸುಮಾರು 200 ಕೋಟಿ ರೂ. ಹಣವನ್ನು ಅಕ್ರಮವಾಗಿ ಲೂಟಿ ಮಾಡಿ ಹಣ ವರ್ಗಾವಣೆ ಮಾಡುತ್ತಿದ್ದ ಬೃಹತ್ ಜಾಲವನ್ನು ಜಾರಿ ನಿರ್ದೇಶನಾಲಯ ಭೇದಿಸಿದೆ. ಈ ಇಡೀ ದಂಧೆಯ ಕೇಂದ್ರಬಿಂದು ದ್ಯಕೀಯ ಪದವಿ ಇಲ್ಲದ, ಕೇವಲ 12ನೇ ತರಗತಿ ಮಾತ್ರ ಓದಿರುವ ಒಬ್ಬ ನಕಲಿ ವೈದ್ಯ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಗ್ಯ ಸೇವೆ ಮತ್ತು ಬಡವರ ಚಿಕಿತ್ಸೆಯ ಹೆಸರಿನಲ್ಲಿ ಸ್ಥಾಪಿಸಲಾಗಿದ್ದ ದತ್ತಿ ಟ್ರಸ್ಟ್‌ಗಳ ಮೂಲಕ ಈ ಹಣದ ವಹಿವಾಟು ನಡೆದಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣದ ಪ್ರಮುಖ ಆರೋಪಿ ಧರ್ಮೇಂದ್ರ ಕುಮಾರ್ ಚಂದ್ರದೇವ್ ಸಿಂಗ್. ಈತ ಯಾವುದೇ ವೈದ್ಯಕೀಯ ಪದವಿ ಇಲ್ಲದಿದ್ದರೂ ಸುಮಾರು 30 ವರ್ಷಗಳಿಂದ ತನ್ನನ್ನು ವೈದ್ಯ ಎಂದು ಪರಿಚಯಿಸಿಕೊಂಡಿದ್ದ ಎಂದು ಇಡಿ ಆರೋಪಿಸಿದೆ. ಈತ ಟ್ರಸ್ಟ್‌ಗಳ ಮೂಲಕ ಪಿಎಸ್​ಯುಗಳು, ಸರ್ಕಾರಿ ಬ್ಯಾಂಕ್‌ಗಳು ಮತ್ತು ಖಾಸಗಿ ಕಂಪನಿಗಳಿಂದ ಸಿಎಸ್​ಆರ್ ನಿಧಿ ಪಡೆಯುತ್ತಿದ್ದ ಎನ್ನಲಾಗಿದೆ.

ಆರೋಗ್ಯ ರಕ್ಷಣೆ ಮತ್ತು ಬಡವರ ಚಿಕಿತ್ಸೆಯ ಹೆಸರಿನಲ್ಲಿ ತೆರಿಗೆ ರಹಿತ ದತ್ತಿ ಟ್ರಸ್ಟ್‌ಗಳನ್ನು ಸ್ಥಾಪಿಸಿ, ಕಾರ್ಪೊರೇಟ್ ಆಸ್ಪತ್ರೆಗಳು ಮತ್ತು ಪಿಎಸ್‌ಯುಗಳಿಗೆ ಆಕರ್ಷಕ ಸಿಎಸ್​ಆರ್​ ಯೋಜನೆಗಳ ಪ್ರಸ್ತಾವನೆ ಸಲ್ಲಿಸುತ್ತಿದ್ದ. ಕಂಪನಿಗಳು ನೀಡಿದ ಸಿಎಸ್​ಆರ್ ಹಣದಲ್ಲಿ ಸ್ವಲ್ಪ ಕಮಿಷನ್ ಕಡಿತಗೊಳಿಸಿ, ಉಳಿದ ಬಹುಪಾಲು ಹಣವನ್ನು ನಕಲಿ, ಶೆಲ್ ಕಂಪನಿಗಳ ಮೂಲಕ ನಗದಾಗಿ (Cash) ಪರಿವರ್ತಿಸಿ ಮೂಲ ಕೊಡುಗೆದಾರರಿಗೇ ಹಿಂದಿರುಗಿಸಲಾಗುತ್ತಿತ್ತು.

ಸಿಎಸ್​ಆರ್ ನಿಧಿ ಪಡೆದ ಯೋಜನೆಗಳನ್ನು ಅರ್ಧಕ್ಕೆ ಕೈಬಿಡಲಾಗುತ್ತಿತ್ತು ಅಥವಾ ಕೇವಲ ಕಾಗದದ ಮೇಲೆ ಮಾತ್ರ ಪೂರ್ಣಗೊಂಡಿದೆ ಎಂದು ತೋರಿಸಿ, ಬಿಲ್‌ಗಳ ಮೂಲಕ ಹಣ ಪಡೆದುಕೊಳ್ಳುತ್ತಿದ್ದರು.

ದೇಶಾದ್ಯಂತ ಕನಿಷ್ಠ 40 ಸಾರ್ವಜನಿಕ ವಲಯದ ಉದ್ದಿಮೆಗಳು (PSUs) ಮತ್ತು ಸರ್ಕಾರಿ ಬ್ಯಾಂಕುಗಳು ಈ ನಕಲಿ ಟ್ರಸ್ಟ್‌ಗಳಿಗೆ ಕೋಟ್ಯಂತರ ರೂಪಾಯಿ ದೇಣಿಗೆ ನೀಡಿವೆ ಎಂದು ಇಡಿ ತಿಳಿಸಿದೆ. ಈ ನಿಧಿಗಳನ್ನು ಮಂಜೂರು ಮಾಡಲು ಪಿಎಸ್‌ಯು ಹಾಗೂ ಬ್ಯಾಂಕ್‌ಗಳ ಹಿರಿಯ ಅಧಿಕಾರಿಗಳಿಗೆ ಮತ್ತು ಮಧ್ಯವರ್ತಿಗಳಿಗೆ ಭಾರೀ ಪ್ರಮಾಣದ ಕಿಕ್‌ಬ್ಯಾಕ್ ಹಾಗೂ ಲಂಚ ನೀಡಲಾಗಿತ್ತು.

ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ ಆಧರಿಸಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ (PMLA) ತನಿಖೆ ಆರಂಭಿಸಿದ ಇಡಿ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಗುಜರಾತ್ ಮತ್ತು ದೆಹಲಿ-ಎನ್‌ಸಿಆರ್‌ನ 8 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ. 21 ಲಕ್ಷ ರೂ. ಲೆಕ್ಕವಿಲ್ಲದ ನಗದು ಜಪ್ತಿ ಮಾಡಲಾಗಿದೆ. ಪಿಎಸ್‌ಯು ಅಧಿಕಾರಿಗಳು, ಆಸ್ಪತ್ರೆಗಳು ಮತ್ತು ಜಿಎಸ್‌ಟಿ ವಂಚನೆಯಲ್ಲಿ ಭಾಗಿಯಾಗಿರುವ ಶೆಲ್ ಕಂಪನಿಗಳಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಗರಣದಲ್ಲಿ ಇನ್ನೂ ಹಲವು ಪ್ರಭಾವಿ ಕಾರ್ಪೊರೇಟ್ ಮುಖಂಡರು ಮತ್ತು ಅಧಿಕಾರಿಗಳು ಭಾಗಿಯಾಗಿರುವ ಶಂಕೆ ಇದೆ. ಈ ನಿಟ್ಟಿನಲ್ಲಿ ಇಡಿ ತನಿಖೆ ಚುರುಕುಗೊಳಿಸಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular