HomeKarnatakaBIG NEWS: ಪೊಲೀಸ್ ಠಾಣೆ ಆವರಣದಲ್ಲಿದ್ದ ಸಿಆರ್ ಪಿಎಫ್ ಬಸ್ಸನ್ನೇ ಕಳ್ಳತನ ಮಾಡಲು ಯತ್ನಿಸಿದ ದುಷ್ಕರ್ಮಿ

BIG NEWS: ಪೊಲೀಸ್ ಠಾಣೆ ಆವರಣದಲ್ಲಿದ್ದ ಸಿಆರ್ ಪಿಎಫ್ ಬಸ್ಸನ್ನೇ ಕಳ್ಳತನ ಮಾಡಲು ಯತ್ನಿಸಿದ ದುಷ್ಕರ್ಮಿ

ಕಲಬುರ್ಗಿ: ಸಿಆರ್ ಪಿಎಫ್ ( ಕೇಂದ್ರೀಯ ಮೀಸಲು ಪೊಲೀಸ್ ಪಡೆ ) ಬಸನ್ನೇ ಕಳ್ಳತನ ಮಾಡಲು ಯತ್ನಿಸಿರುವ ಘಟನೆ ಕಲಬುರ್ಗಿ ನಗರದ ಪೊಲೀಸ್ ಠಾಣೆ ಆವರಣದಲ್ಲಿ ನಡೆದಿದೆ.

ಕೆಎ 32 ಜಿ 1550 ನಂಬರ್ ಬಸ್ ನ್ನು ಸಿಆರ್ ಪಿಎಫ್ ಪೊಲೀಸರ ಬಸ್ಸನ್ನು ಕಮೀಷ್ನರ್ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿತ್ತು. ಈ ಬಸ್ ನ್ನು ಕಳ್ಳತನ ಮಾಡಲು ಛತ್ತೀಸ್ ಗಢ ಮೂಲದ ಖತರ್ನಾಕ್ ಕಳ್ಳ ಸೋನು ಭಗೀರಥ ಯತ್ನಿಸಿದ್ದ.

ಕುಡಿದ ನಶೆಯಲ್ಲಿ ರಾತ್ರಿ ಕಮೀಷ್ನರ್ ಕಚೇರಿಗೆ ಬಂದ ಸೋನು, ಆವರಣದಲ್ಲಿ ನಿಲ್ಲಿಸಿಸಿದ್ದ ಸಿಆರ್ ಪಿಎಫ್ ಬಸ್ ಹತ್ತಿದ್ದಾನೆ. ಬಸ್ ನಲ್ಲಿದ್ದ ಓರ್ವ ಪೊಲೀಸ್ ಕಾನ್ಸ್ ಟೇಬಲ್ ನಿದ್ದೆಗೆ ಜಾರಿದ್ದರು. ಈ ವೇಳೆ ಸೋನು ಭಗೀರಥ, ಪೊಲೀಸ್ ಕಾನ್ಸ್ ಟೇಬಲ್ ಜೇಬಿನಲ್ಲಿದ್ದ ಬಸ್ ಕೀ ತೆಗೆದುಕೊಂಡು ಬಸ್ ಸ್ಟಾರ್ಟ್ ಮಡಿದ್ದಾನೆ. ಬಸ್ ಸ್ಟಾರ್ಟ್ ಆಗುತ್ತಿದ್ದಂತೆ ಕಾನ್ಸ್ ಟೇಬಲ್ ಗೆ ಎಚ್ಚರವಾಗಿದೆ. ತಕ್ಷಣ ಕಾನ್ಸ್ ಟೇಬಲ್ ಆರೋಪಿ ಸೋನು ಭಗೀರಥನನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular