HomeKarnatakaBIG NEWS: ಯುವಕನ ನಿಗೂಢ ಸಾವು ಪ್ರಕರಣ; ಕಾರಣ ಪತ್ತೆ ಮಾಡಿದ ಪೊಲೀಸರು

BIG NEWS: ಯುವಕನ ನಿಗೂಢ ಸಾವು ಪ್ರಕರಣ; ಕಾರಣ ಪತ್ತೆ ಮಾಡಿದ ಪೊಲೀಸರು

ಬೆಂಗಳೂರು: ಕೆಲ ದಿನಗಳ ಹಿಂದೆ ಯುವಕನೊಬ್ಬ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂನ ಸಂಪಂಗಿರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು.

ಸತ್ಯ ಎಂಬ ಯುವಕ ಮೃತಪಟ್ಟಿದ್ದ. ಇದೀಗ ತನಿಖೆ ನಡೆಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಯುವಕನ ಸಾವಿನ ರಹಸ್ಯ ಬಯಲಿಗೆಳೆದಿದ್ದಾರೆ.

ಕಟ್ಟಡವೊಂದರಲ್ಲಿ ಯುವಕರ ನಡುವೆ ಗಲಾಟೆ ನಡೆದು, ನೂಕಾಟ-ತಳ್ಳಾಟ ನಡೆದಿದೆ. ಈ ವೇಳೆ ಯುವಕ ಸತ್ಯನನ್ನು ಇಬ್ಬರು ಯುವಕರು ಕಟ್ಟಡದಿಂದ ತಳ್ಳಿದ್ದಾರೆ. ಕಟ್ಟಡದಿಂದ ಕೆಳಗೆ ಬಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಪಂಗಿರಾಮನಗರ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular