
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ನಡೆದಿದ್ದ ಕೊಲೆ ರಹಸ್ಯವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಜಮ್ಮಲದಿನ್ನಿ ಸಮೀಪ ಇಣಚಗಲ್ ಸೇತುವೆಯ ಕೆಳಗೆ ಜೂನ್ 9 ರಂದು ಅಪ್ರಾಪ್ತೆ ಮೃತದೇಹ ಪತ್ತೆಯಾಗಿತ್ತು. ಕೊಲೆಯಾದ ಸ್ಥಿತಿಯಲ್ಲಿ ಕಂಡು ಬಂದಿದ್ದ ಮೃತದೇಹ 17 ವರ್ಷದ ಯುವತಿ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಬಳುಂಡಗಿ ಗ್ರಾಮದ ಆರತಿ ಎನ್ನುವುದು ಗೊತ್ತಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದು. ಮೃತಳ ಸೋದರಮಾವ ಸಿದ್ದರಾಮಪ್ಪ(43) ಎಂಬುವವನನ್ನು ಬಂಧಿಸಿದ್ದಾರೆ. ತಂದೆ ಇಲ್ಲದ ಆರತಿ ತಾಯಿ ಜೊತೆಗಿದ್ದು ಆಕೆಯ ಸೋದರ ಮಾವನೇ ನೋಡಿಕೊಳ್ಳುತ್ತಿದ್ದ.
ಆರತಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದು, ಆ ಯುವಕ ಇಬ್ಬರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ಅದೇ ಯುವಕನೊಂದಿಗೆ ಮದುವೆ ಮಾಡಿಸುವುದಾಗಿ ಆರತಿಯನ್ನು ಕರೆದುಕೊಂಡು ಹೋದ ಸೋದರಮಾವ ಕೊಲೆ ಮಾಡಿ ಮೃತದೇಹವನ್ನು ಸೇತುವೆ ಕೆಳಗೆ ಬಚ್ಚಿಟ್ಟಿದ್ದಾನೆ. ಮಲ್ಲಯ್ಯನಗುಡಿಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ ಎನ್ನಲಾಗಿದೆ.